ದಾನಿಗಳಿಗೆ ನಿರಾಶೆ ಮೂಡಿಸಿದ ಜಿಲ್ಲಾಡಳಿತ
Team Udayavani, Aug 21, 2018, 1:02 PM IST
ಕಲಬುರಗಿ: ರಾಜ್ಯದ ಕೊಡಗು ಹಾಗೂ ನೆರೆಯ ಕೇರಳ ರಾಜ್ಯ ಹಿಂದೆಂದೂ ಕಂಡರಿಯದ ನಿಟ್ಟಿನಲ್ಲಿ ರುದ್ರನರ್ತನ ಮಳೆಗೆ ಜನರ ಬದುಕು ಮೂರಾಬಟ್ಟೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೆರವಿಗೆ ಧಾವಿಸಲು ಹಾಗೂ ಕೈಲಾದ ಮಟ್ಟಿಗೆ ಸಹಾಯ ನೀಡಲು ಮುಂದೆ ಬರುತ್ತಿದ್ದಾರೆ.
ಔಷಧಿ, ಬಟ್ಟೆ, ದವಸ ಧಾನ್ಯ ನೀಡಲು ಹಲವರು ಜಿಲ್ಲಾಡಳಿತದ ಮುಂದೆ ಬಂದಿದ್ದಾರೆ. ಆದರೆ ಜಿಲ್ಲಾಡಳಿತ ಸಾಮಾಗ್ರಿ ಬೇಡ. ನೆರವು ನೀಡಬೇಕು ಎಂದರೆ ಹಣದ ರೂಪದಲ್ಲಿ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆಗೆ ಜಮಾ ಮಾಡುವಂತೆ ಹೇಳಿದೆ.
ಹೀಗಾಗಿ ಸಾಮಾಗ್ರಿಗಳನ್ನು ನೀಡಬೇಕು ಎಂದವರಿಗೆ ನಿರಾಸೆಯುಂಟಾಗುತ್ತಿದೆ.
ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳ ಸದಸ್ಯರು ನಗರದ ರಸ್ತೆಗಳಲ್ಲಿ ಸುತ್ತಾಡುತ್ತಾ ಜನರಿಂದ ದೇಣಿಗೆ, ಪರಿಹಾರ ಹಣ
ಸಂಗ್ರಹಿಸಿ ತಾವೇ ಪ್ರವಾಹ ಸಂತ್ರಸ್ತರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗೆ ನಿರಾಶ್ರಿತರಿಗೆ ತಮ್ಮ ಕೈಲಾದ ಸಹಾಯ
ಮಾಡಬೇಕು ಎಂದು ಬಿಸಿಲೂರಿನ ನಾಗರಿಕರು ಹಾಗೂ ಕೆಲ ಸಮಾಜ ಸೇವಕರ ಮನ ತುಡಿಯುತ್ತಿದ್ದು, ಔಷಧಿಗಳು,
ನ್ಯಾಪ್‌ಕಿನ್‌ಗಳು, ಬೇಕರಿ ಪದಾರ್ಥಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲು ಬಂದರೆ ಸರಿಯಾಗಿ ಸ್ಪಂದಿಸದೆ ನಿರ್ಲಕ್ಷ್ಯಾ ತೋರಿದೆ. ಪ್ರವಾಹದಿಂದಾಗಿ ಕೊಡಗು ಜನರು ನರಳುತ್ತಿದ್ದಾರೆ. ಕಲಬುರಗಿ ಜನರು ಸದಾ ನಿಮ್ಮೊಂದಿಗಿದ್ದೇವೆ ಎಂದು ಕಲಬುರಗಿ ಮಂದಿ ಹೇಳುತ್ತಿದ್ದಾರೆ. ಆದರೆ, ಸೋಮವಾರ ಪರಿಹಾರ ಸಾಮಾಗ್ರಿಗಳನ್ನು ಹೊತ್ತು ನೆರವಾಗಲು ಬಂದವರನ್ನು ಜಿಲ್ಲಾಡಳಿತದ ಅಧಿಕಾರಿಗಳು ಗಂಟೆಗಳ ಕಾಲ ಕಾಯಿಸಿ, ಬೇಜವಾಬ್ದಾರಿತ ಪ್ರದರ್ಶಿಸಿದ್ದಾರೆ.
ಹೀಗಾಗಿ ಸಂಘಟಕರು ಜಿಲ್ಲಾಡಳಿತ ಬಾಗಿಲಲ್ಲಿ ತಾವು ತಂದ ಪರಿಹಾರ ಸಾಮಾಗ್ರಿಗಳನ್ನು ಇಟ್ಟು ಸಪ್ಪೆ ಮೊರೆ ಹಾಕಿಕೊಂಡು ಹೋಗಿದ್ದಾರೆ. ಇದು ನಿಜಕ್ಕೂ ಆತ್ಮಾವಲೋಕನಕ್ಕೆ ಎಡೆ ಮಾಡಿಕೊಟ್ಟಿದೆ. ಸಂಘ-ಸಂಸ್ಥೆಗಳು ಸಾರ್ವಜನಿಕರಿಂದ ಸಾಮಾಗ್ರಿಗಳನ್ನು ಪಡೆದುಕೊಳ್ಳುವಲ್ಲಿ ಹಾಗೂ ಅದನ್ನು ಹಸ್ತಾಂತರಿಸುವಲ್ಲಿ ಲೋಪಗಳಾಗಬಹುದು ಎಂಬುದು ಜಿಲ್ಲಾಡಳಿತದ ವಿಚಾರವಾಗಿದ್ದರೆ. ಅದು ತಪ್ಪಲ್ಲ. ಆದರೆ ಈ ನಿಟ್ಟಿನಲ್ಲಿ ಜಾಗೃತಿ ವಹಿಸುವುದು ಹಾಗೂ ಸೂಕ್ತ ಕ್ರಮದ ನೋಟ ಬೀರುವುದು ಅಗತ್ಯವಾಗಿದೆ. ನೆಗಡಿ ಬಂದಿದೆ
ಎಂಬ ಮಾತ್ರಕ್ಕೆ ಮೂಗು ಕತ್ತರಿಸುವುದು ಬೇಡ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಹೆಜ್ಜೆ ಇಡಬೇಕು ಎಂದು ಸಾರ್ವಜನಿಕರು
ಆಗ್ರಹಿಸುತ್ತಿದ್ದಾರೆ.
ಸಂತ್ರಸ್ತರಿಗೆ ನೆರವಾಗಲು ಬಂದರೆ ಜಿಲ್ಲಾಡಳಿತದ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಲಿಲ್ಲ. ಚೆಕ್‌ಗಳನ್ನು ಮಾತ್ರ ಸೀÌಕರಿಸಲು ಸರ್ಕಾರ ಸೂಚಿಸಿದೆ ಎಂದು ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಸಾಮಾಗ್ರಿಗಳು ಬೇಡವೇ? ಎಲ್ಲರೂ ಹಣವನ್ನೇ ನೀಡಬೇಕು ಎಂದರೆ ಹೇಗೆ? ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತನ್ನ ನಿಲುವಿನಲ್ಲಿ ಬದಲಾಗುವುದು ಹೆಚ್ಚು ಅವಶ್ಯಕವಿದೆ.
ಶಿವಕುಮಾರ ರೇಶ್ಮಿ, ಸಮಾಜ ಸೇವಕ
ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಹಾಯ ಕಲ್ಪಿಸುವರು ನಗದು, ಇಲ್ಲವೇ ಡಿಡಿ ಅಥವಾ ಚೆಕ್ ರೂಪದಲ್ಲಿ ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿ ಖಾತೆಗೆ ಜಮಾ ಮಾಡಬೇಕು. ಯಾವ ವಸ್ತುಗಳನ್ನು ದೇಣಿಗೆ ರೂಪದಲ್ಲಿ ಸ್ವೀಕರಿಸಬೇಕು ಎಂಬುದರ ಕುರಿತಾಗಿ ಕೊಡಗು ಜಿಲ್ಲಾಧಿಕಾರಿಗಳು ಸೋಮವಾರ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಸಹ ದೇಣಿಗೆಯಾಗಿ ಯಾವುದನ್ನು ಸ್ವೀಕರಿಸುತ್ತದೆ ಎಂಬುದರ ಕುರಿತಾಗಿ ಮಂಗಳವಾರ ಪ್ರಕಟಣೆ ಹೊರಡಿಸಲಾಗುವುದು.
ಆರ್.ವೆಂಕಟೇಶಕುಮಾರ, ಜಿಲ್ಲಾಧಿಕಾರಿ, ಕಲಬುರಗಿ
ರಂಗಪ್ಪ ಗಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.