ಬೃಹತ್ ಮನರಂಜನಾ ವಲಯ ಸ್ಥಾಪನೆ
Team Udayavani, Jan 7, 2017, 12:21 PM IST
ಕಲಬುರಗಿ: ವೇಗದ ಗತಿಯಲ್ಲಿ ಬೆಳೆಯುತ್ತಿರುವ ಮಹಾನಗರದ ಮಕ್ಕಳು ಹಾಗೂ ಪಾಲಕರಿಗೆ ಮನರಂಜಿಸುವ ಒಂದು ದಿನ ಮನರಂಜನಾ ಪ್ರವಾಸ ಕೈಗೊಳ್ಳುವ ನಿಟ್ಟಿನಲ್ಲಿ ಬೃಹತ್ ಮನರಂಜನಾ ವಲಯಯೊಂದನ್ನು ಸ್ಥಾಪಿಸಲು ಕಲಬುರಗಿ ಮಹಾನಗರ ಪಾಲಿಕೆ ಮುಂದಾಗಿದ್ದು, ನಗರದ ಹೊರ ವಲಯ ಖಣದಾಳದ ವಿಶಾಲವಾದ 32 ಎಕರೆ ಭೂಮಿಯಲ್ಲಿ ಸ್ಥಾಪಿಸಲು ನೀಲನಕ್ಷೆ ರೂಪಿಸುತ್ತಿದೆ.
ನಗರದ ಪಾಲಿಕೆ ಸಭಾಂಗಣದಲ್ಲಿ ಮಹಾಪೌರ ಸೈಯದ್ ಅಹ್ಮದ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮನರಂಜನಾ ವಲಯದಲ್ಲಿ ಅಮ್ಯೂಜಮೆಂಟ್ ಪಾರ್ಕ್ ನಿರ್ಮಿಸುವುದು, ಜಲವಿಹಾರ ನಿರ್ಮಿಸುವುದು, ಈಜುಕೋಳ ಸೇರಿದಂತೆ ಇತರ ಮನರಂಜನಾ ಕಾರ್ಯಚಟುವಟಿಕೆಗಳನ್ನು ಸ್ಥಾಪನೆ ಕುರಿತು ವಿವರವಾಗಿ ಚರ್ಚೆ ನಡೆಸಲಾಯಿತು.
ಮಹಾಪೌರ ಸೈಯ್ಯದ್ ಅವರು, ಕಸ ವಿಲೇವಾರಿಗಾಗಿ ಈ ಹಿಂದೆ ಖಣದಾಳದ ಗ್ರಾಮದ ಸೀಮಾಂತರದಲ್ಲಿ ಕೆಸರಟಗಿ ರಸ್ತೆಗೆ ಹೊಂದಿಕೊಂಡಂತೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಕಸ ವಿಲೇವಾರಿ ಘಟಕ ಉದನೂರ ರಸ್ತೆಯಲ್ಲಿ ತಲೆ ಎತ್ತಿತ್ತದ್ದರಿಂದ ಜಾಗ ಈಗ ಸದುಪಯೋಗಪಡೆದುಕೊಳ್ಳುವು¨ ನ್ನು ಮನಗಂಡು ಮನರಂಜನಾ ವಲಯ ಸ್ಥಾಪನೆ ಮಾಡಲು ನೀಲನಕ್ಷೆ ರೂಪಿಸಲಾಗಿದೆ.
ಭೂಮಿ ನೀಡಿದವರು ಹೆಚ್ಚಿನ ಪರಿಹಾರ ಕೋರಿ ನ್ಯಾಯಾಲಯಕ್ಕೆ ಹೋಗಿದ್ದರಿಂದ ಪ್ರಕರಣ ಇತ್ಯರ್ಥಗೊಂಡ ನಂತರ ಮನರಂಜನಾ ವಲಯ ಸ್ಥಾಪನೆ ಕಾರ್ಯ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು. ಕೆಲವರು ಈ ಜಾಗದಲ್ಲಿ ನಿವೇಶನಗಳನ್ನು ಮಾರ್ಪಡಿಸಿದರೆ ಪಾಲಿಕೆಗೆ ಆದಾಯ ಬರುತ್ತದೆ. ಇದರಿಂದ ಮಹಾನಗರದಲ್ಲಿ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಇದಕ್ಕೆ ಆಯುಕ್ತರು ಹಾಗೂ ಮಹಾಪೌರರು, ಪಾಲಿಕೆಯಿಂದ ನಿವೇಶನ ಮಾರ್ಪಡಿಸಿದರೆ ಒಂದೇ ಸಲ ಆಸ್ತಿಯೇ ಮುಕ್ತಾಯವಾಗುತ್ತದೆ. ಆದರೆ ಇದು ಸಮಂಜಸವಲ್ಲ ಎಂದರು. ಮಾಜಿ ಮಹಾಪೌರ ಭೀಮರೆಡ್ಡಿ ಪಾಟೀಲ ಮಾತನಾಡಿ, ಪಿಪಿಪಿ ಮಾದರಿಯಲ್ಲಿ ಮನರಂಜನಾ ವಲಯ ಸ್ಥಾಪನೆಯಾದರೆ ನಿರ್ವಹಣೆಯೂ ಸರಳವಾಗುತ್ತದೆ ಎಂದು ಸಲಹೆ ನೀಡಿದರು.
ನಿರ್ವಹಣೆ ಖಾಸಗಿಯವರಿಗೆ: ನಗರದ ವಿವಿಧ ಸ್ಥಳಗಳಲ್ಲಿ ಉದ್ಯಾನವನ, ವೃತ್ತ, ರಸ್ತೆ ವಿಭಜನೆಗಳ ನಿರ್ವಹಣೆಯನ್ನು ಸ್ಥಳೀಯ ಬಿಲ್ಡರ್ಸ್, ಕಾರ್ಖಾನೆಗಳು ಹಾಗೂ ಇತರ ಕಂಪನಿಗಳಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಆಯುಕ್ತರು ಸಭೆ ಗಮನಕ್ಕೆ ತಂದರು. ಈಗಾಗಲೇ ಜೇವರ್ಗಿ ರಸ್ತೆಯ ರಾಷ್ಟ್ರಪತಿ ಚೌಕ್‌ದಿಂದ ರಾಮ ಮಂದಿರ ವೃತ್ತದವರೆಗೆ ಮಾದರಿಯಲ್ಲಿ ರಸ್ತೆ ವಿಭಜಕ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅದೇ ರೀತಿ ಇತರ ವಿಭಜಕಗಳನ್ನು ನೀಡಲು ಮುಂದಾಗಲಾಗಿದೆ ಎಂದರು.
ಹರಿಜನ ಪದ: ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಹರಿಜನ ಎಂಬ ಪದವನ್ನು ಕಚೇರಿ ಕಡತಗಳಲ್ಲಿ ಹಾಗೂ ಜಾಹೀರಾತು ಮತ್ತು ಮುಂತಾದವುಗಳಲ್ಲಿ ಉಪಯೋಗಿಸುವುದನ್ನು ನಿಷೇಧಿಸಲಾಗಿದ್ದು, ಅದನ್ನು ಆಡಳಿತದಲ್ಲಿ ಪಾಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪಾಲಿಕೆ ಸುಪರ್ಧಿಗೆ ಜಾಗ: ಹೀರಾಪುರ ಸರ್ವೆ ನಂಬರವೊಂದರಲ್ಲಿ ಪಾಲಿಕೆಗೆ ಸೇರಿದ್ದ 3.20 ಎಕರೆ ಜಾಗ ಅತಿಕ್ರಮಣವಾಗಿದ್ದನ್ನು ತೆರವುಗೊಳಿಸಿ ಪಾಲಿಕೆ ಸುಪರ್ದಿಗೆ ತೆಗೆದುಕೊಂಡಿರುವುದನ್ನು ಮಹಾಪೌರರು ಸಭೆ ಗಮನಕ್ಕೆ ತಂದರು. ಇದಕ್ಕೆ ಸದಸ್ಯರೆಲ್ಲರೂ ಮೇಜು ಕುಟ್ಟಿ ಸ್ವಾಗತಿಸಿದರು. ಈ ಜಾಗವನ್ನು ಸದಸ್ಯರೆಲ್ಲರೂ ಖುದ್ದಾಗಿ ನೋಡಿ ಈ ಸ್ಥಳದಲ್ಲಿ ಏನೇನು ಕಾರ್ಯಗಳು ಮಾಡಬೇಕು ಎಂಬುದರ ಕುರಿತು ನಿರ್ಣಯಿಸಲಾಯಿತು.
ಸಭೆ ಸುಸೂತ್ರ: ಪಾಲಿಕೆ ಸಾಮಾನ್ಯ ಸಭೆ ಎಂದರೆ ಸದಾ ಗದ್ದಲ-ಗೊಂದಲಗಳಿಂದ ಕೂಡಿರುತ್ತದೆ. ಆದರೆ ಶುಕ್ರವಾರ ನಡೆದ ಸಾಮಾನ್ಯ ಸಭೆ ಸುಸೂತ್ರವಾಗಿ ನಡಾವಳಿ ಪ್ರಕಾರ ನಡೆದು ವಿವರವಾದ ಚರ್ಚೆ ಮಾಡಲಾಯಿತು. ದಿನದಲ್ಲಿ ಎರಡೂರು ಗಂಟೆ ಸಭೆ ನಡೆದು ಪಾಸ್-ಪಾಸ್ ಎನ್ನುತ್ತಿದ್ದ ಸಂಸ್ಕೃತಿಗೆ ತೀಲಾಂಜಲಿ ಹಾಡಲಾಯಿತು.
ಅಲ್ಲದೇ ಸಭೆಯನ್ನು ಮತ್ತೂಂದು ದಿನಕ್ಕೆ ಮುಂದುವರಿಸಲು ನಿರ್ಧರಿಸಲಾಯಿತು. ವಾರ್ಡುಗಳು ಪುನರ್ ವಿಂಗಣಡೆ ಕುರಿತಾಗಿ ಸರ್ಕಾರ ಅಧಿಸೂಚನೆ ಹೊರಡಿಸಿದ್ದನ್ನು ಸಭೆಯಲ್ಲಿ ವಿವರವಾಗಿ ಪ್ರಸ್ತಾಪಿಸಲಾಯಿತು. 2011ರ ಜನಗಣತಿಯಂತೆ ವಾರ್ಡುಗಳು ವಿಂಗಣಡೆಯಾಗಲಿವೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.