ಎಡೆ ಹೊಡೆಯುತ್ತಿದ್ದಾನೆ ರೈತ
Team Udayavani, Jul 5, 2018, 10:38 AM IST
ಚಿಂಚೋಳಿ: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ತೊಗರಿ,ಉದ್ದು, ಹೆಸರು, ಸೋಯಾ ಉತ್ತಮ ಫಸಲು ಬಂದಿದೆ. ಆದರೆ ಮಳೆ ಅಭಾವ ಮತ್ತು ತೇವಾಂಶ ಕೊರತೆ ಆತಂಕದಲ್ಲಿ ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳ ಮಧ್ಯೆ ಎಡೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾನೆ.
ತಾಲೂಕಿನ ಐನಾಪುರ, ಸುಲೇಪೇಟ, ಕೋಡ್ಲಿ, ಚಿಮ್ಮನಚೋಡ, ಚಿಂಚೋಳಿ ನಿಡಗುಂದಾ ಹೋಬಳಿಯಲ್ಲಿ ಬರುವ ಗ್ರಾಮಗಳಲ್ಲಿ ಮುಂಗಾರಿನ ಬೆಳೆಗಳು ಅಲ್ಪ ಮಳೆಯಿಂದಾಗಿ ಉತ್ತಮವಾಗಿ ಬೆಳೆದಿವೆ. ಈಗ ಒಂದು ವಾರದಿಂದ ಮಳೆ ಅಭಾವ ಉಂಟಾಗಿದ್ದರಿಂದ ಬೆಳೆಗಳು ಬಾಡದಂತೆ ಬೆಳೆಗಳ ಸಾಲಿನಲ್ಲಿ ತೇವಾಂಶ ಕಾಪಾಡಿಕೊಳ್ಳುವುದಕ್ಕಾಗಿ ರೈತರು ಬೆಳೆಗಳ ಸಾಲುಗಳ ಮಧ್ಯೆ ಎಡೆ ಹೊಡೆಯುತ್ತಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 84,427 ಹೆಕ್ಟೇರ್ ಕ್ಷೇತ್ರದಲ್ಲಿ ಈಗಾಗಲೇ ಶೇ. 75ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆದರೆ ತೊಗರಿ ಬಿತ್ತನೆಗೆ ಜುಲೈ ತಿಂಗಳ ವರೆಗೆ ಅವಕಾಶವಿರುವುದರಿಂದ ರೈತರು ಹೆಚ್ಚು ತೊಗರಿ ಬಿತ್ತನೆಯಲ್ಲಿ ತೊಡಗಿದ್ದಾರೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಹೆಚ್. ಗಡಿಗಿಮನಿ ತಿಳಿಸಿದ್ದಾರೆ.
ಚಿಮ್ಮನಚೋಡ, ಹಸರಗುಂಡಗಿ, ಕನಕಪುರ, ಮಿರಿಯಾಣ, ಕೊಡಂಪಳ್ಳಿ, ಗಡಿಕೇಶ್ವಾರ, ಸುಲೇಪೇಟ, ಮೋಘಾ ಗ್ರಾಮಗಳ ಹೊಲಗಳಲ್ಲಿ ಎಡೆ ಹೊಡೆಯುವ ಕೆಲಸ ಭರದಿಂದ ನಡೆಯುತ್ತಿದೆ. ಆದರೆ ಸದ್ಯ ಮಳೆ ಅಗತ್ಯವಿದೆ ಎಂದು ರೈತರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.