ನಾಲ್ಕು ತಾಲೂಕುಗಳ ಅಖಾಡದಲ್ಲಿ ಗುದ್ದಾಟ
Team Udayavani, Apr 8, 2018, 4:47 PM IST
ಕಲಬುರಗಿ: ಎರಡು ಹೊಸ ತಾಲೂಕು, ಆಳಂದ ಮತ್ತು ಕಲಬುರಗಿ ತಾಲೂಕಿನ ಗ್ರಾಮೀಣ ಸೇರಿದಂತೆ ಒಟ್ಟಾರೆ ನಾಲ್ಕು ತಾಲೂಕುಗಳ ಗ್ರಾಮಗಳನ್ನು ಒಳಗೊಂಡ ಕಲಬುರಗಿ ಗ್ರಾಮೀಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ.
128 ಹಳ್ಳಿ ಹಾಗೂ 30 ತಾಂಡಾಗಳು ಸೇರಿ ಕ್ಷೇತ್ರ ಒಳಗೊಂಡಿದೆ. ಈ ಮೊದಲಿದ್ದ ಶಹಾಬಾದ ಮೀಸಲು ಹಾಗೂ ಕಮಲಾಪುರ ಮೀಸಲು ಕ್ಷೇತ್ರ ಒಗ್ಗೂಡಿ 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೊಂಡು ಕಲಬುರಗಿ ಗ್ರಾಮೀಣ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಮೊದಲ ಹಾಗೂ ಹಿಂದಿನ ಮೂರು ಸಲ ಸೇರಿ ಸತತ ನಾಲ್ಕು ಬಾರಿ ರೇವು ನಾಯಕ ಬೆಳಮಗಿ ಜಯ ಸಾಧಿಸಿದ್ದಾರೆ. 2013ರಲ್ಲಿ ಕಾಂಗ್ರೆಸ್ ನ ಜಿ. ರಾಮಕೃಷ್ಣ 40075 ಮತ ಪಡೆದು ಬೆಳಮಗಿ ಅವರನ್ನು 7209 ಮತಗಳ ಅಂತರದಿಂದ ಸೋಲಿಸಿ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.
ಕಲಬುರಗಿ ತಾಲೂಕಿನ ಹಳ್ಳಿಗಳು ಹಾಗೂ ಆಳಂದ ತಾಲೂಕಿನ ಹಳ್ಳಿಗರು ಶಹಾಬಾದ-ಕಮಲಾಪುರ ನೂತನ ಎರಡು ತಾಲೂಕಿನ ಹಳ್ಳಿಗಳನ್ನು ಒಗ್ಗೂಡಿರುವ ಈ ಕ್ಷೇತ್ರದಲ್ಲಿ ಶಹಾಬಾದ ನಗರಸಭೆ ಬರುತ್ತದೆ. ಶಹಾಬಾದ, ಕಮಲಾಪುರ, ಮಹಾಗಾಂವ ಪ್ರಮುಖವಾದ ಪಟ್ಟಣಗಳು. ಎಲ್ಲ ಕ್ಷೇತ್ರಗಳಂತೆ ಇಲ್ಲೂ ಲಿಂಗಾಯಿತರ ಪ್ರಾಬಲ್ಯ ಇದೆ. ಕ್ಷೇತ್ರದಲ್ಲಿ ಲಿಂಗಾಯತರು ಸುಮಾರು 70 ಸಾವಿರ,
ಲಂಬಾಣಿ ಸುಮಾರು 32 ಸಾವಿರ, ಪರಿಶಿಷ್ಟ ಜಾತಿ ಸುಮಾರು 60 ಸಾವಿರ, ಮುಸ್ಲಿಂ ಸುಮಾರು 36 ಸಾವಿರ, ಕುರುಬ ಮತ್ತು ಕಬ್ಬಲಿಗ ಸುಮಾರು 35 ಸಾವಿರ ಹಾಗೂ ಇತರೆ ಸುಮಾರು 10 ಸಾವಿರ ಮತದಾರರಿದ್ದಾರೆ. 1994ರಿಂದ ಸತತ ನಾಲ್ಕು ಸಲ ಈ ಕ್ಷೇತ್ರದಿಂದ ರೇವು ನಾಯಕ ಬೆಳಮಗಿ ಜಯ ಸಾಧಿಸಿ 7 ವರ್ಷ ಕಾಲ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಜಿ. ರಾಮಕೃಷ್ಣ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ಕೆಲವು ಕೆಲಸ ಮಾಡಿದ್ದಾರೆ.
ಆದರೂ ಇನ್ನೂ ಕೆಲಸ ಮಾಡಬೇಕು ಎಂಬುದನ್ನು ಕ್ಷೇತ್ರದಲ್ಲಿ ಸುತ್ತು ಹಾಕಿದಾಗ ಕಂಡು ಬರುತ್ತಿದೆ. ಶಾಸಕರ ಪುತ್ರ ವಿಜಯಕುಮಾರ ಈ ಸಲ ಕಾಂಗ್ರೆಸ್ ಕಣದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಉಳಿದಂತೆ ಜಿಪಂ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ, ಶಾಮ ನಾಟೀಕಾರ ಸ್ಪರ್ಧಿಸುವ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲಿ ಮಾಜಿ ಸಚಿವರಾದ ರೇವು ನಾಯಕ ಬೆಳಮಗಿ, ಬಾಬುರಾವ ಚವ್ಹಾಣ, ಜಿಪಂ ಸದಸ್ಯ ಬಸವರಾಜ ಮತ್ತಿಮೂಡ, ಮುಖಂಡರಾದ ನಾಮದೇವ ರಾಠೊಡ ಕರಹರಿ ಹೆಸರು ಕೇಳಿ ಬರುತ್ತಿದೆ. ಮತ್ತಿಮೂಡ ಅವರು ಕ್ಷೇತ್ರದಲ್ಲಿ ಹಗಲಿರಳು ಸಂಚರಿಸುತ್ತಿದ್ದಾರೆ.
ಕ್ಷೇತ್ರದ ಬೆಸ್ಟ್ ಏನು?
ಕ್ಷೇತ್ರ ವ್ಯಾಪ್ತಿಯಲ್ಲಿ ಶಹಾಬಾದ ಹಾಗೂ ಕಮಲಾಪುರ ಎರಡು ನೂತನ ತಾಲೂಕುಗಳಾಗಿ ಅಸ್ತಿತ್ವಕ್ಕೆ ಬಂದಿವೆ. ಗಂಡೋರಿ ಕಾಲುವೆಗಳ ಆಧುನೀಕರಣಕ್ಕಾಗಿ 165 ಕೋಟಿ ರೂ. ಬಂದಿದೆ. ಶಹಾಬಾದ ನಗರಸಭೆಗೆ ನಗರೋತ್ಥಾನ ಯೋಜನೆ ಅಡಿ 14 ಹಾಗೂ 25 ಕೋಟಿ ರೂ. ಬಿಡುಗಡೆಯಾಗಿದೆ. ಕುರಿಕೋಟಾ ಬಳಿ ಬೆಣ್ಣೆತೋರಾ ಹಳ್ಳಕ್ಕೆ ಮಗದೊಂದು ಸೇತುವೆ ನಿರ್ಮಾಣಗೊಳ್ಳುತ್ತಿರುವುದು ಉತ್ತಮ ಕಾರ್ಯ ಎನ್ನಬಹುದು.
ಕ್ಷೇತ್ರದ ದೊಡ್ಡ ಸಮಸ್ಯೆ?
ಕ್ಷೇತ್ರ ವ್ಯಾಪ್ತಿಯ ಶ್ರೀನಿವಾಸ ಸರಡಗಿ ಬಳಿ ವಿಮಾನ ನಿಲ್ದಾಣ ಪೂರ್ಣಗೊಂಡು ವಿಮಾನ ಹಾರಾಟ ಶುರುವಾಗದಿರುವುದು, ಕ್ಷೇತ್ರ ನಾಲ್ಕು ತಾಲೂಕುಗಳಿಗೆ ಹರಿದು ಹಂಚಿ ಹೋಗಿ ಆಡಳಿತ್ಮಾಕವಾಗಿ ತೊಂದರೆಗೆ ಒಳಗಾಗುವುದು, ಕ್ಷೇತ್ರದಲ್ಲಿ ಇನ್ನೂ ರಸ್ತೆಗಳು ಗುಣಮಟ್ಟದಲ್ಲಿ ಅಭಿವೃದ್ಧಿಯಾಗದಿರುವುದು ಕ್ಷೇತ್ರದ ದೊಡ್ಡ ಸಮಸ್ಯೆಗಳಾಗಿವೆ.
ಶಾಸಕರು ಏನಂತಾರೆ?
ನೂತನ ತಾಲೂಕುಗಳು ಅಸ್ತಿತ್ವಕ್ಕೆ ಬಂದಿರುವುದು ಆಡಳಿತಾಭಿವೃದ್ಧಿಗೆ ಪೂರಕವಾಗಿದೆ. ಗಂಡೋರಿ ನಾಲಾ ಅಭಿವೃದ್ಧಿಗೆ ಚಾಲನೆ ನೀಡಿರುವುದು, ಕುರಿಕೋಟಾ ಬಳಿ ಮಗದೊಂದು ಸೇತುವೆ ನಿರ್ಮಾಣಗೊಂಡಿರುವುದು. ಶಹಾಬಾದ್ ನಗರಸಭೆಗೆ ನಗರೋತ್ಥಾನ ಯೋಜನೆ ಅಡಿಅಭಿವೃದ್ಧಿಗೊಳ್ಳುತ್ತಿರುವುದು ಸೇರಿದಂತೆ ಇತರ ಹತ್ತಾರು ಕಾರ್ಯಗಳು ಕ್ಷೇತ್ರದಲ್ಲಾಗಿವೆ.
ಜಿ. ರಾಮಕೃಷ್ಯ
ಕ್ಷೇತ್ರ ಮಹಿಮೆ
ದೇವನ ತೆಗನೂರಿನ ಶಿವಯೋಗೇಶ್ವರ, ಶಹಾಬಾದ ಶರಣಬಸವೇಶ್ವರ, ಹಳೇ ಶಹಾಬಾದನ ರಮಣಾದೇವಿ, ಮರತೂರಿನ ಮಿತಾಕ್ಷರ, ಮುತ್ಯಾನ ಬಬಲಾದಮಠ, ನರೋಣಾ ಕ್ಷೇಮಲಿಂಗೇಶ್ವರ ಕ್ಷೇತ್ರ, ಮಹಾಗಾಂವ ವಾಡಿಯ ಕಂಟಿ ಹನುಮಾನ ದೇವಸ್ಥಾನ, ಕನ್ನಡಗಿ ಮಲ್ಲಿಕಾರ್ಜುನ ದೇವಾಲಯಗಳು ಕ್ಷೇತ್ರದ ವ್ಯಾಪ್ತಿಯಲ್ಲಿವೆ
ಶಹಾಬಾದ ನಗರದ ಮುಖ್ಯರಸ್ತೆಗಳು ಡಾಂಬರೀಕರಣಗಳಾಗಿ ಚಿತ್ರಣ ಬದಲಾಗಿದೆ. ಆದರೆ ಹೊನಗುಂಟಾ ವೃತ್ತದಿಂದ-ನಿಜಾಮ ಬಜಾರನವರೆಗೆ ರಸ್ತೆ ಹದಗೆಟ್ಟು ಹೋದರೂ ನಿರ್ಮಾಣ ಮಾಡುವಲ್ಲಿ ಎಡವಿದ್ದಾರೆ. ನಗರದಲ್ಲಿ ಒಂದು ಸಾರ್ವಜನಿಕ, ಮೂತ್ರಾಲಯ ಹಾಗೂ ಶೌಚಾಲಯ ನಿರ್ಮಾಣವಾಗಿಲ್ಲ. ಇದರ ಕಡೆ ಶಾಸಕರು ಲಕ್ಷ್ಯ ವಹಿಸಿದರೆ ಚೆನ್ನಾಗಿರುತ್ತಿತ್ತು. ಇದಲ್ಲದೇ ಬಹುತೇಕ ಕಡೆ ಶಾಸಕರ ಬೆಂಬಲಿಗರು ಗುತ್ತಿಗೆ ಪಡೆದಿರುವುದರಿಂದ ಕಾಮಗಾರಿಗಳು ಕಳಪೆ ಮಟ್ಟದಾಗಿವೆ.
ಶರಣಗೌಡ ಪಾಟೀಲ
ಹಲವು ದಶಕಗಳ ಬೇಡಿಕೆಯಾಗಿದ್ದ ತೊನಸನಹಳ್ಳಿ(ಎಸ್) ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಿಲ್ಲ. ನಗರದಲ್ಲಿ ನಗರೋತ್ಥಾನ ಯೋಜನೆಯಲ್ಲಿಬಹಳಷ್ಟು ಕಾಮಗಾರಿಗಳಾಗಿವೆ. ನೂತನ ಪೊಲೀಸ್ ಠಾಣೆ, ಡಿವೈಎಸ್‌ಪಿ ಕಚೇರಿ ನಿರ್ಮಾಣವಾಗಿವೆ.
ಚಂದ್ರಕಾಂತ ನಾಟೇಕಾರ
ಮಹಾಗಾಂವಕ್ಕೆ ಹತ್ತಿಕೊಂಡಂತಿರುವ ಚಂದ್ರಾನಗರಕ್ಕೆ ರಸ್ತೆಯೇ ಇರಲಿಲ್ಲ. ಈಗಿನ ಶಾಸಕರು ಮಾಡಿಸಿದ್ದಾರೆ. ರಸ್ತೆಗಳ ಅಭಿವೃದ್ಧಿಯಾಗಿವೆ. ಆದರೆ ಗ್ರಾಮಾಂತರ ಭಾಗದಲ್ಲಿ ಶೌಚಾಲಯ ನಿರ್ಮಾಣವಾದರೆ ಅಭಿವೃದ್ಧಿಗೆ ಮತ್ತಷ್ಟು ಪೂರಕವಾಗುತ್ತದೆ.
ಗುರಣ್ಣ ದಂಡಗುಲಕರ್
ಸ್ವಾತಂತ್ರ್ಯ ಪೂರ್ವದಿಂದ ನಮ್ಮ ಅಂಬಲಗಾ ತಾಂಡಾಕ್ಕೆ ರಸ್ತೆಯೇ ಇರಲಿಲ್ಲ. ತಾಂಡಾದ ನಿವಾಸಿಗಳೆಲ್ಲರೂ ತೀವ್ರ ತೊಂದರೆ ಅನುಭವಿಸುತ್ತಿದ್ದೇವು. ಈಗ ಡಾಂಬರ್ ರಸ್ತೆಯಾಗಿದೆ. ಇದರಿಂದ ಬಸ್ ಸೌಕರ್ಯ ಕಾಣುವಂತಾಗಿದೆ. ಅದೇ ರೀತಿ ಕಂಟಿ ಹನುಮಾನ ಮಂದಿರಕ್ಕೂ ರಸ್ತೆಯಾಗಿದೆ.
ಸಂಜುಕುಮಾರ ಚವ್ಹಾಣ
ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.