ಹೈಕೋರ್ಟ್ ಆವರಣ ಪಕ್ಷಿಗಳ ಆಶ್ರಯತಾಣವಾಗಿಸಲು ಸಲಹೆ
Team Udayavani, Jul 24, 2018, 11:45 AM IST
ಕಲಬುರಗಿ: ಕಲಬುರಗಿ ಉತ್ಛ ನ್ಯಾಯಾಲಯದ ಆವರಣದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವ ಮೂಲಕ ಪಕ್ಷಿ ಮತ್ತು ಪ್ರಾಣಿಗಳಿಗೆ ಆಶ್ರಯ ತಾಣವನ್ನಾಗಿಸಬೇಕು ಎಂದು ಕಲಬುರಗಿ ಉತ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಸಲಹೆ ನೀಡಿದರು.
ಜಿಪಂನಿಂದ ಉತ್ಛನ್ಯಾಯಾಲಯದ ಆವರಣದಲ್ಲಿ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಮ್ಮಿಕೊಂಡಿರುವ ಕಸ ತೆಗೆಯುವ ಹಾಗೂ ಗುಂಡಿ ತೋಡಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಬುರಗಿ ಉತ್ಛ ನ್ಯಾಯಾಲಯದ ಆವರಣದಲ್ಲಿ ನವಿಲು, ಬಾತುಕೋಳಿಗಳು ತುಂಬಾ ಇವೆ. ಮೊಲ ಹಾಗೂ ಕೆಲವು ಬಾರಿ ಜಿಂಕೆಗಳು ಕಾಣುತ್ತವೆ. ಅವುಗಳಿಗೆ ಆಶ್ರಯ ನೀಡಲು ಪಕ್ಷಿಗಳಿಗೆ ಇಷ್ಟವಾದ ಹತ್ತಿಕಾಯಿ, ಹಣ್ಣಿನ ಗಿಡಗಳನ್ನು ಬೆಳೆಸಿ ಎಂದು ಹೇಳಿದರು.
ಧಾರವಾಡ ಉತ್ಛ ನ್ಯಾಯಾಲಯದ ಆವರಣವನ್ನು ತುಂಬಾ ಚೆನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಅದೇ ಮಾದರಿಯಲ್ಲಿ
ಇಲ್ಲಿಯೂ ಉದ್ಯೋಗ ಖಾತ್ರಿ ಯೋಜನೆಯ ಸಹಾಯದಿಂದ ಟ್ರೀ ಪಾರ್ಕ್ ನಿರ್ಮಿಸಬೇಕು.
ಹೈಕೋರ್ಟ ಆವರಣ ಸಾರ್ವಜನಿಕ ಸ್ಥಳವಾಗುವುದರಿಂದ ತುಂಬಾ ಚೆನ್ನಾಗಿ ಅಭಿವೃದ್ಧಿ ಪಡಿಸಬೇಕು. ಕಲಬುರಗಿಗೆ ಇದೊಂದು ಆಸ್ತಿ ಆಗುವ ಹಾಗೆ ರೂಪುಗೊಳ್ಳಬೇಕು. ಈ ಭಾಗದಲ್ಲಿ ಹಲವು ಪ್ರಬೇಧದ ಪಕ್ಷಿಗಳಿವೆ. ದೂರದೇಶದ ಪಕ್ಷಿಗಳು ವಲಸೆ ಬರುತ್ತವೆ. ಅವುಗಳಿಗೆ ಹೈಕೋರ್ಟ್ ಆವರಣ ಆಶ್ರಯ ತಾಣವಾಗಿ ನಿರ್ಮಾಣಗೊಳ್ಳಬೇಕು ಎಂದರು.
ಕಲಬುರಗಿ ಉತ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಎನ್. ಸತ್ಯನಾರಾಯಣ ಮಾತನಾಡಿ, ಹೈಕೋರ್ಟ್ ಆವರಣದಲ್ಲಿ ಸೂಬಾಬುಲ್ ಅರಣ್ಯದ ಮಾದರಿಯಲ್ಲಿ ಬೆಳೆದುಕೊಂಡಿದೆ. ಅದನ್ನು ಬೇರು ಸಮೇತ ಕಿತ್ತುಹಾಕಿ ನಂತರ ಸಸಿ ನೆಡುವ ಕಾರ್ಯ ಕೈಗೊಳ್ಳಬೇಕು. ಹೈಕೋರ್ಟ ಆವರಣದಲ್ಲಿ ಒಂದು ಸಣ್ಣ ಪ್ರಮಾಣದ ಜಿನಗುಕೆರೆ ನಿರ್ಮಿಸಬೇಕು. ನೀರು ನಿಲ್ಲುವ ಹಾಗೆ ಸಂಪುಟ ರಚಿಸಿ ಅರಣ್ಯ ಇಲಾಖೆಗೆ ಉಪಯೋಗವಾಗುವ ಹಾಗೆ ನರ್ಸರಿ ರೂಪಿಸಬೇಕು. ಈ ಕುರಿತು ಪ್ರಸ್ತಾವನೆ ಸಲ್ಲಿಸಿದಲ್ಲಿ ಅದಕ್ಕೆ ಅನುಮೋದನೆ ನೀಡಲಾಗುವುದು ಎಂದರು.
ಶರಣಸಿರಸಗಿ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಮಾತನಾಡಿ, ಶರಣಸಿರಸಗಿ ಗ್ರಾಮದಲ್ಲಿ ಎಲ್ಲರೂ ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಕೊಂಡಿದ್ದಾರೆ. ಗ್ರಾಮದ ಯಾರೂ ಸಹ ಶೌಚಕ್ಕಾಗಿ ಬಯಲಿಗೆ ಹೋಗುವುದಿಲ್ಲ. ನಾನೂ ಸಹ ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ್ದೇನೆ. ಉದ್ಯೋಗ ಖಾತ್ರಿ ಯೋಜನೆ ಗ್ರಾಮದ ವಿಕಾಸಕ್ಕೆ ಬಹು ಉಪಯುಕ್ತವಾಗಿದೆ ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಪಾಲಿಕೆ ಆಯುಕ್ತ ರಘುನಂದನ ಮೂರ್ತಿ,
ಅರಣ್ಯ ಸಂರಕ್ಷಣಾ ಧಿಕಾರಿ ಶಿವಶಂಕರ, ಅರಣ್ಯ ಇಲಾಖೆ ಅಧಿಕಾರಿ ಬಿ.ಎನ್. ಚವ್ಹಾಣ, ಹೈಕೋರ್ಟ್‌ನ ಎ.ಆರ್.ಜಿ. ಅಸೋಡೆ, ಜಿಪಂ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಹಾಜರಿದ್ದರು.
ಶರಣಸಿರಸಗಿ ಗ್ರಾಮದ 40 ಉದ್ಯೋಗ ಖಾತ್ರಿ ಕಾರ್ಮಿಕರಿಂದ 30 ದಿನಗಳ ಕಾಲ ಹೈಕೋರ್ಟ್ ಆವರಣದಲ್ಲಿ ಸೂಬಾಬುಲ್ ಗಿಡಗಳನ್ನು ಹಾಗೂ ಹುಲ್ಲು ಸ್ವತ್ಛಗೊಳಿಸುವುದು, ಗುಂಡಿ ತೋಡುವುದು ಹಾಗು ಸಸಿಗಳನ್ನು ನೆಡುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು
ಹೈಸ್ಕೂಲ್‌ನಲ್ಲಿ ಹಿಂದಿ ಬದಲಿಗೆ ಕೌಶಲ ವಿಷಯ ಆಯ್ಕೆಗೆ ಒತ್ತಡ
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್