ಮೌಡ್ಯ ಸಮಾಜಕ್ಕೆ ಅಂಟಿದ ಘೋರ ಶಾಪ: ಕಾಂತಾ
Team Udayavani, Aug 3, 2017, 12:16 PM IST
ಕಲಬುರಗಿ: ಮೌಡ್ಯತೆ ಸಮಾಜಕ್ಕೆ ಅಂಟಿದ ಶಾಪ. ಶಿಕ್ಷಣ ಹೆಚ್ಚಾದಂತೆ ಮೌಡ್ಯತೆ ಬೆಳೆಯುತ್ತಿರುವುದು ಮತ್ತಷ್ಟು ಆಘಾತಕಾರಿ ಅಂಶ. ಸತ್ಯದ ತಳಹದಿ ಮೇಲೆ ವೈಚಾರಿಕ ನೆಲೆಯಲ್ಲಿ ನಿಲ್ಲುವಂತಹ ಆಚರಣೆಗಳನ್ನು ಮನ್ನಿಸಬೇಕು. ಸಮಾಜವನ್ನು ದಾರಿತಪ್ಪಿಸುವ ಆಚರಣೆಗಳು ಶಿಕ್ಷಾರ್ಹ.
ದೇವರ ಹೆಸರಲ್ಲಿ ನಡೆಯುವ ಸುಲಿಗೆ, ಅನಿಯಮಿತ ಖರ್ಚುಗಳು ಶಿಕ್ಷಣ ಮತ್ತು ಅಸಹಾಯಕರ ಒಳಿತಿಗೆ ಬಳಕೆಯಾಗಲಿ ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹಾಗರಗುಂಡಗಿಯ ವಿರಕ್ತ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ಚನ್ನವೀರ ಶಿವಯೋಗಿ ಶಿವಾನುಭವ ಮಂಟಪ ಲೋಕಾರ್ಪಣೆ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೈಚಾರಿಕವಾಗಿ, ವೈಜ್ಞಾನಿಕವಾಗಿ ಮುಂದುವರಿದ ಈ ದಿನಮಾನಗಳಲ್ಲಿಯೂ ಅಜ್ಞಾನ ಬೆಳೆಸಿಕೊಂಡು ಬಂದಿರುವ ನಾವು ಬುದ್ದ, ಬಸವ, ಅಂಬೇಡ್ಕರ್ ವಿಚಾರಧಾರೆಯನ್ನು ಸಮಾಜದಲ್ಲಿ ಹರಡಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಸಾರಂಗಮಠದ ಜಗದ್ಗುರು ಪೂಜ್ಯ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಅಂತರಂಗದಲ್ಲಿ ಅಡಗಿರುವ ಕೊಳೆ ಕಿತ್ತು ಹಾಕಲು ಬಸವಾದಿ ಶರಣರ ವಿಚಾರಗಳು ಅಗತ್ಯವಾಗಿದ್ದು, ಅವರ ತತ್ವಗಳನ್ನು ಆಚರಣೆಯಲ್ಲಿ ತರಬೇಕಿದೆ ಎಂದರು. ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ವಚನ ಸಾಹಿತ್ಯ ವೈಚಾರಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿಂತಿದೆ. ಅಸಮಾನತೆ, ಅಂಧಕಾರ, ಅಮಾನವೀಯತೆ ಮೆಟ್ಟಿ ಸರ್ವ ಸಮಾನತೆ ಮಾನವೀಯ ಮೌಲ್ಯಗಳನ್ನು ಕಟ್ಟಿಕೊಟ್ಟ ಪ್ರಪಂಚದ ಪ್ರಥಮ ಸಾಹಿತ್ಯವಾಗಿದೆ ಎಂದು ಹೇಳಿದರು.
ಸೊನ್ನ ವಿರಕ್ತಮಠದ ಪೂಜ್ಯ ಡಾ| ಶಿವಾನಂದ ಮಹಾಸ್ವಾಮೀಜಿ, ಹಾಗರಗುಂಡಗಿ ವಿರಕ್ತ ಮಠದ ಪೂಜ್ಯ ಶಿವಾನಂದ ಮಹಾಸ್ವಾಮೀಜಿ, ಚವದಾಪೂರಿ ಹಿರೇಮಠದ ಪೂಜ್ಯ ರಾಜಶೇಖರ ಶಿವಾಚಾರ್ಯರು, ಕೌಲಗಾ(ಕೆ) ಶ್ರೀಗಳು, ಮಹಾದೇವ ಬಡಾ, ಸೋಮಶೇಖರ ಸಜ್ಜನ, ಷಣ್ಮುಖಪ್ಪ ಸಿಬರಬಂಡಿ, ಮಲ್ಲೇಶಪ್ಪ ಮಂದರವಾಡ, ಸಿದ್ರಾಮಯ್ಯ ಮಠಪತಿ, ತಿಪ್ಪಣ್ಣ, ಮಲ್ಲಿಕಾರ್ಜುನ ಸಜ್ಜನ, ಸತೀಶ ಸಜ್ಜನ ಹಾಗೂ ಹಾಗರಗುಂಡಗಿ, ಕೌಲಗಾ ಸುತ್ತಲಿನ
ಗ್ರಾಮಸ್ಥರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.