ಆಸ್ಸಾಂನ ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಖಂಡ

Team Udayavani, Aug 9, 2018, 10:50 AM IST

gul-3.jpg

ಕಲಬುರಗಿ: ಆಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯಡಿ 40 ಲಕ್ಷ ಜನರ ಹೆಸರು ಕೈಬಿಟ್ಟಿರುವುದನ್ನು ಖಂಡಿಸಿ ಎಸ್‌ಯುಸಿಐ ಕಾರ್ಯಕರ್ತರು ನಗರದ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಎಸ್‌ ಯುಸಿಐ ನಗರ ಕಾರ್ಯದರ್ಶಿ ವಿ.ಜಿ.ದೇಸಾಯಿ ಮಾತನಾಡಿ, ಆಸ್ಸಾಂನಲ್ಲಿ ಮೂರು ದಶಕಗಳಿಂದ ನಡೆಯುತ್ತಿರುವ ಅಕ್ರಮ ವಲಸಿಗರ ಕುರಿತ ವಿವಾದದ ಮುಂದುವರಿಕೆಯಾಗಿ ಕಳೆ ಐದು
ವರ್ಷದಿಂದ 1200 ಕೋಟಿ ರೂ.ವೆಚ್ಚದಲ್ಲಿ ಪೌರತ್ವ ನೋಂದಣಿ ಕಾಯ್ದೆಯಡಿ ಸಮೀಕ್ಷೆ ನಡೆಸಿ ಈಗ ಅಂತಿಮ ಕರಡು ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ 40 ಲಕ್ಷಜನರ ಹೆಸರು ಕೈಬಿಟ್ಟಿರುವುದು ಖಂಡನೀಯ ಎಂದರು.

ಮಾಜಿ ರಾಷ್ಟ್ರಪತಿ ಫಕ್ರುದ್ದಿನ್‌ ಅಲಿ ಅವರ ವಂಶಸ್ಥರು, 1857 ರ ಸಿಪಾಯಿ ದಂಗೆಯಲ್ಲಿ ಭಾಗವಹಿಸಿ ಅಂಡಮಾನ ನಿಕೋಬಾರ್‌ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಬಹಾದ್ದೂರ ಗಾಂವಬುರಾ ವಂಶಸ್ಥರಲ್ಲದೇ ಅನೇಕ ಸರ್ಕಾರಿ ನೌಕರರು,
ಸೇನೆಯಲ್ಲಿ ಸೇವೆ ಸಲ್ಲಿಸಿದವರು, ಮಾಜಿ ಶಾಸಕರು ಸೇರಿದಂತೆ ಹಲವರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು. ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತರ ವಿರುದ್ಧ ಇಂತಹ ಫ್ಯಾಸೀಸ್‌ಂ ದಾಳಿ ಜನತಂತ್ರ ವಿರೋಧಿ ಕ್ರಮವಾಗಿದೆ ಎಂದರು.

ಜಿಲ್ಲಾ ಸಮಿತಿ ಸದಸ್ಯ ಗಣಪತರಾವ ಕೆ. ಮಾನೆ ಮಾತನಾಡಿ, 1985ರ ಸುಮಾರಿಗೆ ಆಸ್ಸಾಂ ಗಣಪರಿಷತ್‌ ನೇತೃತ್ವದ ಸರ್ಕಾರ ತೀವ್ರ ಪ್ರಾದೇಶಿಕತಾವಾದಿ ಧೋರಣೆಯಿಂದ ಅಸ್ಸಾಮೇತರ ಜನರ ವಿರುದ್ಧ ಚಳವಳಿ ನಡೆಸಿತ್ತು. ಆಸ್ಸಾಂನಲ್ಲಿ ಲಕ್ಷಾಂತರ ಜನ ವಲಸಿಗರಿದ್ದಾರೆ ಎಂದು ವಾದಿಸಿತ್ತು. ಆದರೂ ದಾಖಲೆಗಳ ಮೂಲಕ ಅದನ್ನು ಸಾಬೀತುಪಡಿಸಲು ಆಗಿರಲಿಲ್ಲ. ಕೇವಲ 3.7 ಲಕ್ಷ ಜನರು ಸಂಶಯಾಸ್ಪದ ಮತದಾರರು ಎಂದು ಗುರುತಿಸಲಾಗಿತ್ತು ಎಂದು ವಿವರಿಸಿದರು. 

ಇದರಲ್ಲಿ ನ್ಯಾಯಾಲಯಕ್ಕೆ ಮೊರೆ ಹೋದ 95ರಷ್ಟು ಜನರು ಭಾರತೀಯ ಪ್ರಜೆಗಳೆಂದು ಸಾಬೀತಾಗಿತ್ತು. ಪಾಕಿಸ್ತಾನ,
ಬಾಂಗ್ಲಾ ವಿಭಜನೆಗೊಂಡ ಬಳಿಕ 1971ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದವರನ್ನು ಭಾರತೀಯ ಪ್ರಜೆಗಳೆಂದು ಪರಿಗಣಿಸಲು ಎಲ್ಲಾ ಪ್ರಜಾಪ್ರಭುತ್ವವಾದಿ ಪಕ್ಷಗಳ ನಿಲುವಾಗಿತ್ತು ಎಂದರು.

ಭಾರತೀಯ ಪೌರತ್ವ ಪಡೆಯಲು 1971 ಕ್ಕೂ ಹಿಂದಿನ ಮತದಾರರ ಪಟ್ಟಿಯಲ್ಲಿ ಅಥವಾ 1951 ರ ಎನ್‌ಆರ್‌ಸಿಯಲ್ಲಿ ತಮ್ಮ ಅಥವಾ ವಂಶಸ್ಥರ ಹೆಸರನ್ನು ದಾಖಲೆಗಳ ಸಮೇತ ಸಲ್ಲಿಸಬೇಕಿದೆ. ಈ ದಾಖಲೆಗಳು ಸರಿಯಾಗಿ ಲಭ್ಯವಿಲ್ಲ.
ಮತದಾರ ಪಟ್ಟಿಯೂ ದೋಷಪೂರಿತವಾಗಿದೆ. ಇದರಿಂದ ಭೂ ದಾಖಲೆಗಳಿಲ್ಲದ ಕೂಲಿಕಾರರು ಪೌರತ್ವವನ್ನು ಶ್ರೀಲಂಕಾದ ತಮಿಳರಂತೆ ನಿರಾಶ್ರಿತರಾಗಲಿದ್ದಾರೆ. ಮಾನವ ದುರಂತ ತಪ್ಪಿಸಲು ಎಲ್ಲಾ ನೈಜ ಭಾರತೀಯ ಪ್ರಜೆಗಳ
ಪೌರತ್ವ ನೋಂದಣಿ ಮಾಡಿಸಬೇಕೆಂದು ಒತ್ತಾಯಿಸಿದರು.
 
ಜಿಲ್ಲಾ ಸಮಿತಿ ಸದಸ್ಯ ಮಹೇಶ ನಾಡಗೌಡ, ನಿಂಗಣ್ಣ ಜಂಬಗಿ, ಜಗನ್ನಾಥ, ಮಹೇಶ, ಗೌರಮ್ಮ, ಅಭಯಾ ದಿವಾಕರ, ಶರಣು ಹೇರೂರ, ಅಜಯ ಜಾಧವ, ಈರಣ್ಣಾ ಇಸಬಾ, ಶಿಲ್ಪಾ ಬಿ.ಕೆ., ಸ್ನೇಹಾ ಕಟ್ಟಿಮನಿ ಹಾಗೂ ಇತರರು
ಭಾಗವಹಿಸಿದ್ದರು.

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Kalaburagi: Govt order to investigate KKRDB grant illegality: Complaint to election commission

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

Kalaburagi: ರೌಡಿ ಶೀಟರ್ ಬರ್ಬರ ಹತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

4

Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.