ಕಲ್ಲೂರ್ ಬ್ರಿಡ್ಜ್ ತಂದ ಕುತ್ತು
Team Udayavani, Jan 4, 2018, 12:02 PM IST
ಕಲಬುರಗಿ: ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಭೀಮಾ ನದಿಗೆ ಜೇವರ್ಗಿ ತಾಲೂಕಿನ ಕಲ್ಲೂರು ಬಳಿ ಕಟ್ಟಿದ್ದ ಬ್ರಿಡ್ಜ್ ಕಮ್ ಬ್ಯಾರೇಜ್ ಗೇಟು ಕಿತ್ತುಕೊಂಡು ಹೋಗಿರುವುದರಿಂದ ಚಿನಮಳ್ಳಿ ಭಾಗದ ರೈತರು ಕಬ್ಬು ಸಾಗಿಸಲು ಪರದಾಡುವಂತೆ ಆಗಿದೆ.
ಅಕ್ರಮ ಮರಳುಗಾರಿಕೆ ಮಾಡುವ ವ್ಯಕ್ತಿಗಳಿಗೆ ಸಹಾಯ ಮಾಡಲು ಹೋಗಿ ನೀರಾವರಿ ಅಧಿಕಾರಿಗಳು ರೈತರಿಗೆ ಸಂಕಷ್ಟ ತಂದೊಡಿದ್ದಾರೆ. 2016ರ ಸೆಪ್ಟೆಂಬರ್ 17ರಂದು ಭೀಮಾ ಜಲಾನಯನ ಪ್ರದೇಶದಲ್ಲಿ ಬಿದ್ದ ಭಾರಿ ಮಳೆಯಿಂದ ಮತ್ತು ಸೊನ್ನ ಬ್ಯಾರೇಜ್ ನೀರು ಹೊರಬಿಟ್ಟಿದ್ದರಿಂದ ಕಲ್ಲೂರು ಬ್ಯಾರೇಜ್‌ನಲ್ಲಿ ನೀರು ಹೆಚ್ಚಾಗಿತ್ತು. ಎಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ನೀರನ್ನು ಹೊರ ಬಿಡದೆ ಅಕ್ರಮ ಮರಳುಗಾರಿಕೆ ಮಾಡುವವರಿಗೆ ಸಹಾಯ ಮಾಡುವ ಹಂತದಲ್ಲಿದ್ದಾಗಲೇ ಬ್ಯಾರೇಜ್ ಗೇಟು ಕಿತ್ತುಕೊಂಡು ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಅಲ್ಲದೆ, ಗೇಟಿನ ಪಕ್ಕದಲ್ಲಿನ ಫಲವತ್ತಾದ 100 ಎಕರೆ ಭೂಮಿಯೂ ಹಾಳಾಯಿತು. ನೀರಿನ ರಭಸಕ್ಕೆ 80 ಅಡಿ ಆಳದ ಹೊಂಡ ನಿರ್ಮಾಣವಾಯಿತು. ಪ್ರಯುಕ್ತ ಈಗ ಅಫಜಪುರ ಮತ್ತು ಜೇವರ್ಗಿ ತಾಲೂಕುಗಳ ಮಧ್ಯದ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ.
ಇದರ ಪರಿಣಾಮ ಈಗ ಅಫಜಲಪುರ ತಾಲೂಕಿನ ಕೊನೆ ಭಾಗದ ಚಿನಮಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ರೈತರಿಗೆ ಕಬ್ಬು ಸಾಗಿಸಲು ತೀವ್ರ ತೊಂದರೆ ಎದುರಾಗಿದೆ. ಈ ಭಾಗದಲ್ಲಿ ಸುಮಾರು 2 ಸಾವಿರ ಎಕರೆ ಪ್ರದೇಶಕ್ಕಿಂತ ಹೆಚ್ಚು ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಈ ಮೊದಲು ಬ್ರಿಡ್ಜ್ ಇದ್ದಾಗ 40 ಕಿ.ಮೀ ಅಂತರದಲ್ಲಿ ಹವಳಗಾ, ಮಳ್ಳಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲಾಗುತ್ತಿತ್ತು. ಆದರೆ ಈಗ ಅಫಜಲಪುರ ಪಟ್ಟಣದ ಮೂಲಕ ಹಾಯ್ದು ಹವಳಾಗಾಕ್ಕೆ ಹೋಗಬೇಕಾಗಿರುವುದರಿಂದ ಕನಿಷ್ಠ 80 ಕಿ.ಮೀ ಸಾಗಿಸಬೇಕು. ಅದರಂತೆ ಮಳ್ಳಿ ಕಾರ್ಖಾನೆಗೆ ಸಾಗಿಸಲು ಅಷ್ಟೇ ದೂರ ಆಗುತ್ತಿದೆ. ಆದ್ದರಿಂದ ಯಾದಗಿರಿ ಜಿಲ್ಲೆಯ ವಡಗೇರಾ ಕೋರ್‌ಗ್ರೀನ್ ಸಕ್ಕರೆ ಕಾರ್ಖಾನೆಗೆ ಸಾಗಿಸಲಾಗುತ್ತಿದೆ. ಇದರಿಂದಾಗಿ ಸಾರಿಗೆ ವೆಚ್ಚ ಹೆಚ್ಚಾಗುತ್ತಿದೆ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ.
ಬ್ರಿಡ್ಜ್ ಗೇಟು ಮುರಿದು ಉಂಟಾಗಿರುವ ಹೊಂಡ ನೋಡಿದರೆ ಈ ವರ್ಷ ಅದು ದುರಸ್ತಿ ಆಗಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಇದರಿಂದಾಗಿ ಅನ್ಯ ಮಾರ್ಗವಿಲ್ಲದೆ ಸರಕಾರ ಹಾಗೂ ಅಕ್ರಮ ಮರುಳುಗಾರಿಕೆ ಮಾಡುವವರ ಮತ್ತು ನೀರಾವರಿ ಅಧಿಕಾರಿಗಳಿಗೆ ಶಾಪ ಹಾಕುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ರೈತರಾದ ದೌಲಪ್ಪ ತಳಕೇರಿ, ಹಸನಸಾಬ ಮುಲ್ಲಾ, ಚೋಟು ದೇವರಮನಿ, ಸಿದ್ದಣ್ಣ ಹಟಗಾರ, ಮಲ್ಲೇಶಿ ತಳವಾರ ದೂರಿದ್ದಾರೆ.
ದೊಡ್ಡ ಸಮಸ್ಯೆಯಾಗಿದೆ ಕಲ್ಲೂರ್ ಬ್ರಿಡ್ಜ್ ಕಂ ಬ್ಯಾರೇಜ್ ಸಂಪರ್ಕ ಕಡಿತದಿಂದಾಗಿ ಅಫಜಲಪುರ ತಾಲೂಕಿನ ಕೊನೆ ಭಾಗದ ಕಬ್ಬು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಈಗ ಕಬ್ಬು ಕಟಾವು ನಡೆದಿದೆ. ಮಳ್ಳಿ, ಹವಳಗಾ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ತೆಗೆದುಕೊಂಡು ಹೋಗುವುದು ತುಂಬಾ ವೆಚ್ಚದಾಯಕವಾಗಿದೆ. ಮೊದಲೇ ಕಬ್ಬಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ಇಂತಹದರಲ್ಲಿ ಸಾಗಾಟ ವೆಚ್ಚದಿಂದ ರೈತರು ಕೈ ಸುಟ್ಟು ಕೊಳ್ಳುತ್ತಿದ್ದಾರೆ. ಕೂಡಲೇ ಸರಕಾರ ಸ್ಪಂದಿಸಿ ಸೇತುವೆ ದುರಸ್ತಿ ಕಾರ್ಯ ಶೀಘ್ರ ಆರಂಭಿಸಲಿ. ರಮೇಶ ಹೂಗಾರ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಲಾಭ ತರದ ಗಣ್ಯರ ಭೇಟಿ ಸೆಪ್ಟೆಂಬರ್‌ನಲ್ಲಿ ಬ್ರಿಡ್ಜ್ ಗೇಟು ಕಿತ್ತು ಹೋಗಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿ ಜಮೀನು ಹಾಳಾಗಿ ಹೋದಾಗ ಅಫಜಲಪುರ ಮಾಜಿ ಶಾಸಕ ಎಂ.ವೈ. ಪಾಟೀಲ, ರೈತ ಹೋರಾಟಗಾರರು, ಮಾಜಿ ಜಿಪಂ ಸದಸ್ಯೆ ಶೋಭಾ ಬಾಣಿ, ಜೇವರ್ಗಿ ಶಾಸಕ ಅಜಯಸಿಂಗ್ ಭೇಟಿ ನೀಡಿ ಪರಿಶೀಲಿಸಿ ಅನಾಹುತಕ್ಕೆ ಮಿಡಿದಿದ್ದರು. ಆದರೆ, ಇದರ ಲಾಭವೇನೂ ಆಗಲಿಲ್ಲ. ಶೋಭಾ ಬಾಣಿ ಮತ್ತು ಇತರರು ನೀರಾವರಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಎಚ್ಚರಿಕೆ ನೀಡಿ ಸ್ಪಂದಿಸಿದ್ದರು. ಶಾಸಕರು ಕೂಡಲೇ ಕಾಮಗಾರಿ ಆರಂಭಿಸುವ ತುಗಳನ್ನಾಡಿದ್ದರು. ಆದರೆ, ಯಾವುದೇ ಫಲ ನೀಡಿಲ್ಲ
ಸೂರ್ಯಕಾಂತ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.