ಶೂದ್ರತ್ವದ ಮುಕ್ತಿಗೆ ಬುದ್ಧತ್ವದ ಬೆಳಕು
Team Udayavani, May 20, 2017, 4:40 PM IST
ವಾಡಿ: ಮನುಷ್ಯರನ್ನು ಪಶುಗಳಂತೆ ಕಾಣುವ ಶೂದ್ರತ್ವದಿಂದ ಮುಕ್ತಿ ಪಡೆಯಲು ಬುದ್ಧತ್ವದ ಬೆಳಕು ಹರಿಯಬೇಕು ಎಂದು ಬೌದ್ಧ ಭಿಕ್ಷು ಧಮ್ಮಾನಂದ ಅಣದೂರ ಹೇಳಿದರು. ಇಂಗಳಗಿ ಗ್ರಾಮದ ಕರುಣಾ ಬುದ್ಧವಿಹಾರದಲ್ಲಿ ಆರು ಅಡಿ ಎತ್ತರದ ಬುದ್ಧನ ಪಂಚಲೋಹದ ಪ್ರತಿಮೆ ಪ್ರತಿಷ್ಠಾಪಿಸಿ ಅವರು ಧಮ್ಮ ಪ್ರವಚನ ನೀಡಿದರು.
ಮೌಡ್ಯ ತುಂಬಿದ ಹಳ್ಳಿಗಳಲ್ಲಿ ಈಗ ಬುದ್ಧವಿಹಾರಗಳು ನಿರ್ಮಾಣವಾಗುತ್ತಿರುವುದು ದಲಿತರ ಪ್ರಗತಿಯ ಲಕ್ಷಣವಾಗಿದೆ. ಸನಾತನ ಧರ್ಮದ ಸಂಕೋಲೆಯಿಂದ ಬಿಡುಗಡೆಯಾಗಲು ಬುದ್ಧನ ಪಂಚಶೀಲ ಮಾರ್ಗ ಅನುಸರಿಸಬೇಕು. ಬುದ್ಧನ ಸಂದೇಶಗಳ ಗುಣಗಾನ ಮಾಡಿದರೆ ಸಾಲದು. ಅವುಗಳನ್ನು ಆಚರಣೆಗೆ ತರಲು ಮುಂದಾಗಬೇಕು.
ಶತ್ರುಗಳ ವಿರುದ್ಧ ಜ್ಞಾನದ ಯುದ್ಧಕ್ಕೆ ಸಿದ್ಧರಾಗಬೇಕು ಎಂದು ಕರೆ ನೀಡಿದರು. ಧಮ್ಮ ಪ್ರವಚನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಸಾಹಿತಿ ರಾಜಶೇಖರ ಮಾಂಗ್, ಮನೆಯಂಗಳದಲ್ಲಿ ಎಸೆಯಲಾದ ಕುಂಕುಮ ಮತ್ತು ನಿಂಬೆ ಹಣ್ಣಿಗೆ ಹೆದರುವ ಜನ ನಾವಾಗಬಾರದು.
ಮೌಡ್ಯಗಳು ಕೇವಲ ಕೆಳ ಜಾತಿಯವರನ್ನೆ ಸುತ್ತಿಕೊಂಡಿದ್ದು ಯಾಕೆ ಎಂಬುದರ ಹಿಂದೆ ಮನುಧರ್ಮ ಶಾಸ್ತ್ರದ ಬಹುದೊಡ್ಡ ಷಡ್ಯಂತ್ರವಿದೆ. ಸರ್ವೋದಯದ ಕಲ್ಪನೆ ಎತ್ತಿ ಹಿಡಿದ ಬುದ್ಧನ ಧಮ್ಮ ನಮ್ಮ ಜೀವನದ ಸಿದ್ಧಾಂತವಾಗಬೇಕು. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನವಾದಾಗ ಸಿಡಿದೆದ್ದು ಪ್ರತಿಭಟಿಸುವ ನಾವು ಅವರ ಚಿಂತನೆಗಳನ್ನು ಆಚರಣೆಗೆ ತರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಪುರಸಭೆ ತಹಶೀಲ್ದಾರ ಕೆ.ಆನಂದಶೀಲ ಮಾತನಾಡಿ, ಒಡೆದಾಳುವ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಒಗ್ಗಟ್ಟು ನಮ್ಮ ಗುರಿಯಾಗಬೇಕು. ಬುದ್ಧ, ಬಸವ ಹಾಗೂ ಅಂಬೇಡ್ಕರ್ ತೋರಿದ ಮಾರ್ಗದಡಿ ಸಾಗಬೇಕು ಎಂದು ಹೇಳಿದರು. ಜ್ಞಾನಸಾಗರ ಭಂತೇಜಿ ಸಾನ್ನಿಧ್ಯ ವಹಿಸಿದ್ದರು.
ಕಾಶೀನಾಥ ಹಿಂದಿನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೌದ್ಧ ಭಿಕ್ಷುಣಿ ಸಂಘಮಿತ್ರ. ಪಿಡಬುಡಿ ಸೇಡಂ ವಿಭಾಗದ ಇಇ ವಿಜಯದಶರಥ ಸಂಗನ್, ಪಿಆರ್‌ಇ ಕಲಬುರಗಿ ವಿಭಾಗದ ಇಇ ಸುರೇಶ ಶರ್ಮಾ, ಸುಭಾಷ ಯಾಮೇರ ಇಂಗಳಗಿ, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಸ್ಥಾವರಮಠ, ಪುರಸಭೆ ಸದಸ್ಯ ಶರಣು ನಾಟೀಕಾರ, ವಾಡಿ-ಶಹಾಬಾದ ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚಂದ್ರಶೇನ ಮೇನಗಾರ,
ನ್ಯಾಯವಾದಿ ಶಿವಣ್ಣ ಸಾತನೂರ, ಪುರಸಭೆ ಮುಖ್ಯಾಧಿಕಾರಿ ಶಂಕರ ಡಿ. ಕಾಳೆ, ದಲಿತ ಮುಖಂಡರಾದ ಇಂದ್ರಜೀತ ಸಿಂಗೆ, ಬಸವಂತ ಹೊನಗುಂಟಿಕರ, ಜಗನ್ನಾಥ ಮದ್ರಕಿ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು. ನಾಗರಾಜ ಕೆಲ್ಲೂರ ಸ್ವಾಗತಿಸಿದರು. ಮಿಲಿಂದ ಹಿಂದಿನಕೇರಿ ನಿರೂಪಿಸಿದರು. ರಾಜು ಸಂಕಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.