ಪಿಡಿಎ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಕೋಡ್ ಹ್ಯಾಕಥಾನ್
Team Udayavani, Jul 30, 2019, 9:32 AM IST
ಕಲಬುರಗಿ: ನಗರದ ಪಿಡಿಎ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ 'ಹ್ಯಾಕಥಾನ್' ಪೋಸ್ಟರ್‌ಅನ್ನು ಎಚ್ಕೆಇ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ ಬಿಡುಗಡೆಗೊಳಿಸಿದರು.
ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗ ಹಾಗೂ ಗಣಕತಂತ್ರ ವಿಜ್ಞಾನ ವಿಭಾಗದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಮಟ್ಟದ ‘ಕೋಡ್ ಹ್ಯಾಕಥಾನ್’ ಎಂಬ 36 ಗಂಟೆಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ ತಿಳಿಸಿದರು.
ನಗರದ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ‘ಹ್ಯಾಕಾಥಾನ್’ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಅಡಗಿರುವ ‘ಕೋಡಿಂಗ್’ ಚಾಣಾಕ್ಷತೆಯನ್ನು ಜಾಗೃತಗೊಳಿಸುವುದೇ ‘ಹ್ಯಾಕಥಾನ್’ ಮೂಲ ಉದ್ದೇಶವಾಗಿದೆ ಎಂದರು.
ಟೆಕ್ಯೂಪ್-3ರ ಅಡಿಯಲ್ಲಿ ಮೂರು ಹಂತಗಳಲ್ಲಿ ಕಾರ್ಯಾಗಾರ ನಡೆಯಲಿದೆ. ಆ.16ಕ್ಕೆ ಕಾರ್ಯಾಗಾರಕ್ಕೆ ಚಾಲನೆ ನೀಡಲಾಗುವುದು. ನಂತರ ಆ.24 ಮತ್ತು 25ರಂದು ತಂಡಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕೊನೆಯ ಹಂತದಲ್ಲಿ ‘ಕೋಡಿಂಗ್’ ಸೆ.7 ಮತ್ತು 8ರಂದು ಜರುಗಲಿದೆ. ವಿವಿಧ ರಾಜ್ಯಗಳ ಸುಮಾರು 50 ತಾಂತ್ರಿಕ ಮಹಾವಿದ್ಯಾಲಯಗಳು ಭಾಗವಹಿಸುವ ನಿರೀಕ್ಷೆ ಇದ್ದು, ಸುಮಾರು 200 ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದು ವಿವರಿಸಿದರು.
ಕೋಡ್ ಹ್ಯಾಕಥಾನ್ ಕೇಂದ್ರ ಸರ್ಕಾರದ ‘ಸ್ಮಾರ್ಟ್ ಇಂಡಿಯಾ ಹ್ಯಾಕಾಥಾನ್’ನ ಗುಣಲಕ್ಷಣಗಳನ್ನು ಹೊಂದಿದೆ. ಇಲ್ಲಿ ಭಾಗವಹಿಸುವ ತಂಡಗಳು ಕೂಡ ಸಮಾಜಕ್ಕೆ ಒಳಿತಾಗುವಂತಹ ಸಾಫ್ಟ್‌ವೇರ್ ತಯಾರಿಸುವ ಗುರಿ ಹೊಂದಿರುತ್ತಾರೆ. ಜತೆಗೆ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡುವ ಹ್ಯಾಕಥಾನ್ ಪ್ರತಿ 6 ಜನ ವಿದ್ಯಾರ್ಥಿಗಳ ಗುಂಪುಗಳಲ್ಲಿ ಒಬ್ಬ ಮಹಿಳಾ ವಿದ್ಯಾರ್ಥಿ ಇರುವುದು ಕಡ್ಡಾಯಗೊಳಿಸಲಾಗಿದೆ. ಅಲ್ಲದೇ, ಕೇವಲ ಮಹಿಳಾ ವಿದ್ಯಾರ್ಥಿಗಳೇ ಇರುವ ಗುಂಪಿಗೆ ಪ್ರಾಶಸ್ತ್ಯ ಕೊಡಲಾಗುವುದು ಎಂದರು.
ಸಂಸ್ಥೆಯ ಉಪಾಧ್ಯಕ್ಷ ಡಾ| ಶಿವಾನಂದ ದೇವರಮನಿ, ಜಂಟಿ ಕಾರ್ಯದರ್ಶಿ ಗಂಗಾಧರ ಎಲಿ, ಆಡಳಿತ ಮಂಡಳಿ ಸದಸ್ಯರಾದ ವಿಜುಕುಮಾರ ದೇಶಮುಖ, ಡಾ| ಸಂಪತಕುಮಾರ ಲೋಯಾ, ಅನುರಾಧಾ ದೇಸಾಯಿ, ಸತೀಶ ಹಡಗಲಿಮಠ, ಅನಿಲಕುಮಾರ ಮರಗೋಳ, ಡಾ| ವೀರಭದ್ರ ನಂದ್ಯಾಳ, ಆಡಳಿತಾಧಿಕಾರಿ ಪ್ರೊ| ಸಿ.ಆರ್.ಬಡಾ, ಪ್ರಿನ್ಸಿಪಾಲ್ ಡಾ| ಎಸ್.ಎಸ್.ಹೆಬ್ಟಾಳ್, ಟೆಕ್ಯೂಪ್ ಸಂಚಾಲಕ ಪ್ರೊ| ಶರಣ ಪಡಶೆಟ್ಟಿ, ಸಂಯೋಜಕರಾದ ಮಾಹಿತಿ ವಿಭಾಗದ ಮುಖ್ಯಸ್ಥೆ ಡಾ| ಭಾರತಿ ಹರಸೂರ್, ಗಣಕತಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಸುವರ್ಣ ನಂದ್ಯಾಳ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.