ವಚನ ಬೆಳಕಿಗೆ ತಂದಿದ್ದು ಹಳಕಟ್ಟಿ: ಡಾ| ಮದಭಾವಿ
Team Udayavani, Jul 12, 2017, 12:18 PM IST
ಕಲಬುರಗಿ: ಡಾ| ಫ.ಗು. ಹಳಕಟ್ಟಿ ವಚನ ಸಾಹಿತ್ಯದ ಕಟ್ಟುಗಳನ್ನು ಬೆಳಕಿಗೆ ತರದಿದ್ದರೆ, ವಚನ ಸಾಹಿತ್ಯದ ಬೆಳಕು ನಮ್ಮಿಂದ
ದೂರವಾಗುತ್ತಿತ್ತು. ಪ್ರಪಂಚಕ್ಕೆ ಜ್ಞಾನದ ಕಿರಣಗಳನ್ನು ಬೀರಿದ ವಚನ ಸಾಹಿತ್ಯ ಕತ್ತಲೆಯಲ್ಲಿರುತ್ತಿತ್ತು. ಹಳಕಟ್ಟಿ ಶ್ರಮ
ವರ್ಣನಾತೀತವಾಗಿದೆ ಎಂದು ವಿಜಯಪುರದ ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ| ಎಂ.ಎಸ್. ಮದಭಾವಿ ಹೇಳಿದರು.
ನಗರದ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ಪ್ರಾಂಗಣದಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ
ಸಮಾರಂಭದಲ್ಲಿ ಸಾಧಕರಿಗೆ ವಚನಪಿತಾಮಹ ಡಾ| ಫ.ಗು.ಹಳಕಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ, ಸ್ವಾರ್ಥವ ಸುಟ್ಟು, ವಚನ ವಾಜ್ಞೆ ರಕ್ಷಣೆಗಾಗಿ ಪಣತೊಟ್ಟು, ವಚನಗಳನ್ನು ಹುಡುಕಿ ಮುದ್ರಿಸದಿದ್ದರೆ, ನಾವೆಲ್ಲ ಇನ್ನೂ ನಿದ್ರಿಸುತ್ತಲೇ ಇರಬೇಕಾಗುತ್ತಿತ್ತು. ವಿಶ್ವಮಟ್ಟದಲ್ಲಿ ವಚನ ಸಾಹಿತ್ಯ ಇಂದು ಬೆಳಗುತ್ತಿದೆ ಎಂದರೆ ಅದು ಫ.ಗು.ಹಳಕಟ್ಟಿ ಅವರ ಬೆವರಿನ ಫಲ ಎನ್ನಲೇಬೇಕಾಗುತ್ತದೆ ಎಂದರು. ಅಪ್ಪಟ ಸಾಂಸ್ಕೃತಿಕ ಪರಂಪರೆಯ ಉಡುಪಿನಲ್ಲಿರುವ
ಹಳಕಟ್ಟಿ ಅವರು ವಕೀಲರಾಗಿದ್ದರೂ ಹಣ ಸಂಪಾದನೆಗೆ ಗಮನಹರಿಸಲಿಲ್ಲ. ಬಂಧು-ಬಾಂಧವರಿಂದ ಬೇಸರದ ಭಾವ ಬಂದರೂ ಧೃತಿಗೆಡದೆ ದುಡಿದು ವಚನ ಸಾಹಿತ್ಯ ಕಟ್ಟಿ ದೀಪವಾಗಿ ಉರಿದು, ಬೆಳಕು ನೀಡಿದ ಜ್ಯೋತಿ ಆಗಿದ್ದಾರೆ ಎಂದು ಅವರ ಜೀವನದ
ಘಟನೆಗಳನ್ನು ವಿವರಿಸಿದರು. ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಸಾರಂಗಮಠದ ಪೂಜ್ಯ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ಸ್ವಾರ್ಥಕ್ಕೆ ಸಿಲುಕಿರುವ ನಾವು ವಚನ ಸಾಹಿತ್ಯವನ್ನು ಉಚ್ಛಾರ ಮಾಡುತ್ತಾ, ಆಚಾರವಿಲ್ಲದೆ, ವೈಚಾರಿಕ ನೆಲೆಗಟ್ಟಿಲ್ಲದೆ ದಿಕ್ಕು ದೆಸೆಯಿಲ್ಲದೆ ಹರಿಯುವ ನೀರಿನಂತಾಗಿದ್ದೇವೆ. ಮಾನವನ ಮನಸ್ಸನ್ನು ಹಿಡಿದಿಟ್ಟು, ಸಮಾಜಮುಖೀ
ಕಾರ್ಯಗಳತ್ತ ನಮ್ಮನ್ನ ಕೊಂಡೊಯ್ಯುವ ಶಕ್ತಿ ವಚನ ಸಾಹಿತ್ಯಕ್ಕಿದೆ. ಆ ವಚನ ಸಾಹಿತ್ಯ ನಮ್ಮ ಮನಸ್ಸನ್ನು ಹೊಕ್ಕು ಮಾನವೀಯತೆಯನ್ನು ಉಕ್ಕಿಸಬೇಕಾಗಿದೆ ಎಂದರು.
ಅಕಾಡೆಮಿಯ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಬಸಂತಬಾಯಿ ಡಿ.ಅಕ್ಕಿ ಅಧ್ಯಕ್ಷತೆ ವಹಿಸಿದ್ದರು. ಅಫಜಲಪುರ ಬಿಜೆಪಿ ಅಧ್ಯಕ್ಷ ಸೂರ್ಯಕಾಂತ ನಾಕೇದಾರ, ಪ್ರಗತಿಪರ ಚಿಂತಕ ಶಾಂತಪ್ಪ ಸಂಗಾವಿ, ಅಕಾಡೆಮಿಯ ಶಿವರಾಜ ಎಸ್.ಅಂಡಗಿ, ಪರಮೇಶ್ವರ ಶಟಕಾರ, ಎಸ್. ಎಂ.ಪಟ್ಟಣಕರ್ ವೇದಿಕೆ ಮೇಲಿದ್ದರು.
ಆರು ಸಾಧಕರಿಗೆ ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಜನಪರ ಹೋರಾಟಗಾರ ಡಾ| ಡಿ.ಜಿ.ಸಾಗರ, ಬಸವತತ್ವ ಪ್ರಚಾರಕರಾದ ರವೀಂದ್ರ ಶಾಬಾದಿ, ಬಸವರಾಜ ಕಟ್ಟಿ, ಜಯಶ್ರೀ ಚಟ್ನಳ್ಳಿ, ಜಗದೇವಪ್ಪ ಜುಟಗಿ, ರಮೇಶ ಮಾಳಾ ಅವರಿಗೆ ಡಾ| ಫ.ಗು.ಹಳಕಟ್ಟಿ
ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.