ಹಳೆ ವರದಿಯೇ ಮತ್ತೆ ಪ್ರಸ್ತಾಪ

Team Udayavani, May 5, 2017, 4:07 PM IST

gul4.jpg

ಆಳಂದ: ಪಟ್ಟಣದಲ್ಲಿ ತಾಪಂ ಆಡಳಿತ  ಮಂಡಳಿ ಸದಸ್ಯರ ಸಾಮಾನ್ಯ ಸಭೆ ಅಧ್ಯಕ್ಷೆ ನಾಗಮ್ಮ ಗುತ್ತೇದಾರ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಇಲಾಖೆ ಅಧಿಕಾರಿಗಳು ಅದೇ ಹಳೆ ವರದಿಯನ್ನೇ ಹಿಂಬಾಲಿಸಿದರೆ, ಕೆಲವೇ ಕೆಲವು ಸದಸ್ಯರು ಮಾತ್ರ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಜಮಾ ಖರ್ಚಿನ ಮಾಹಿತಿ ಪ್ರತಿ ನೀಡಬೇಕು ಎಂದು ಪಟ್ಟುಹಿಡಿದರು. 

ಭೂಸೇನಾ ನಿಗಮಕ್ಕೆ ವಹಿಸಿದ್ದ ಅಂಗನವಾಡಿ ಕಟ್ಟಡ ಸೇರಿ ಇನ್ನಿತರ ಕಾಮಗಾರಿಗಳು ಎರಡೂ¾ರು ವರ್ಷಗಳಿಂದ ನನೆಗುದ್ದಿಗೆ ಬಿದ್ದಿವೆ. ಅಧಿ ಕಾರಿಗಳು ಏನು ಮಾಡುತ್ತಿರಿ ಎಂದು ಸದಸ್ಯೆ ಸಂಗೀತಾ ರಾಠೊಡ ಏರು ಧ್ವನಿಯಲ್ಲಿ ಪ್ರಶ್ನಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಬೇಳೆ, ಆಹಾರ ಕೊಡುತ್ತಿಲ್ಲ. ಶಿಕ್ಷಕಿಯರೇ ಎತ್ತಿ ಹಾಕುತ್ತಿದ್ದಾರೆ.

ಈ ಕುರಿತು ಯಾವು ಕ್ರಮ ಕೈಗೊಳ್ಳಲಾಗಿದೆ ಎಂದು ವಿಕೆಸಲಗರ ಸದಸ್ಯ ದೀಪಕ ಮತ್ತು ಸಂಗೀತಾ ರಾಠೊಡ ಸಿಡಿಪಿಒ ತುಳಸಾಬಾಯಿ ಮಾನು ಅವರನ್ನು ಪ್ರಶ್ನಿಸಿದರು. ಸಹಾಯಕ ನಿರ್ದೇಶಕ ಶಶಾಂಕ ಶಾಹ ವರದಿ ಮಂಡಿಸುವಾಗ ಕೃಷಿ ಇಲಾಖೆಯಲ್ಲಿ ಎಸ್‌ಸಿ-ಎಸ್‌ಟಿ ಜನಾಂಗಕ್ಕೆ ಬಂದ ಸೌಲಭ್ಯಗಳನ್ನು ಸಾಮಾನ್ಯ ವರ್ಗಕ್ಕೆ ನೀಡಿದ್ದಾರೆ.

ಇನ್ನಿತರ ಯಾವ ಮಾಹಿತಿ ನೀಡದ ಅಧಿಕಾರಿಗಳು ಅನುದಾನ ಸೌಲಭ್ಯ ಲೂಟಿ ಮಾಡಿದ್ದಾರೆ. ತನಿಖಾ ತಂಡ ರಚಿಸಿ ಪರಿಶೀಲನೆ ಆಗಲೇಬೇಕು ಎಂದು ಸದಸ್ಯ ಗೋರಕನಾಥ ಸಜ್ಜನ್‌, ಬೋಧನ್‌ ಸದಸ್ಯ ಲಕಪತಿ ಎಸ್‌. ಶಿಂಗೆ, ದೀಪಕ ಒತ್ತಾಯಿಸಿದರು. ತಾಪಂ ಇಒ ಡಾ| ಸಂಜಯ ರೆಡ್ಡಿ ಮಾತನಾಡಿ, ಇಲಾಖೆಗೆ ವಹಿಸಿದ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಿ ಸರ್ವ ಸದಸ್ಯರಿಗೆ ವಿವರವಾದ ಮಾಹಿತಿ ಸಲ್ಲಿಸಬೇಕು ಎಂದು ಹೇಳಿದರು. 

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಅಬ್ದುಲ್‌ ಸಲಾಂ, ತಾಪಂ ವ್ಯವಸ್ಥಾಪಕ ಬಸವರಾಜ ಪಾಟೀಲ, ಜೆಸ್ಕಾಂ ಎಇಇ ವಿಶ್ವನಾಥ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಗುರಣ್ಣ ಗುಂಡಗುರತಿ, ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ ಫುಲಾರ್‌,ಇಂಜಿನಿಯರ್‌ ಸಂಗಮೇಶ ಬಿರಾದಾರ, ವಿಜಯಕುಮಾರ ಯಳವಂತಗಿ ವರದಿ ಮಂಡಿಸಿದರು.

ಉಪಾಧ್ಯಕ್ಷ ಗುರುನಾಥ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭು ಸರಸಂಬಿ, ಸದಸ್ಯ ಬಸವರಾಜ ಸಾಣಕ, ಶಿವಪ್ಪ ವಾರಿಕ, ಸಿದ್ದರಾಮ ವಾಘೊಡೆ, ಬಾಬುರಾವ ಶ್ರೀಮಂತ ಭಾಗವಹಿಸಿದ್ದರು. ಹಲವು ಮಹಿಳಾ ಸದಸ್ಯರು ಸಭೆಯುದ್ದಕ್ಕೂ ಮೌನ ಮುರಿಯದೆ ಕುಳಿತ್ತಿದ್ದರು. ಇನ್ನೂ ಕೆಲವು ಮಹಿಳಾ ಸದಸ್ಯರು ಮತ್ತು ಅಧಿಕಾರಿಗಳು ವಿರಾಮದ ಬಳಿಕ ಸಭೆಗೆ ಹಾಜರಾಗದೇ ನಿರ್ಗಮಿಸಿದರು.  

ಟಾಪ್ ನ್ಯೂಸ್

delhi air

Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

prahlad-joshi

Mallikarjun kharge; ಹೇಳಿಕೆಯಿಂದ ಗ್ಯಾರಂಟಿ ಚುನಾವಣೆಗಾಗಿ ಎನ್ನುವುದು ಸ್ಪಷ್ಟ : ಜೋಶಿ

1-a-kharge

Poll promises; ಖರ್ಗೆ, ರಾಹುಲ್ ಗಾಂಧಿ ಕ್ಷಮೆಗೆ ಒತ್ತಾಯಿಸಿದ ಬಿಜೆಪಿ

INDvsNZ: ಮತ್ತೆ ಬ್ಯಾಟಿಂಗ್‌ ಕುಸಿತ; ಮುಂಬೈನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ

INDvsNZ: ಮತ್ತೆ ಬ್ಯಾಟಿಂಗ್‌ ಕುಸಿತ; ಮುಂಬೈನಲ್ಲೂ ಸಂಕಷ್ಟಕ್ಕೆ ಸಿಲುಕಿದ ಭಾರತ

Darshan (3)

Darshan; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಟ: ಬಿಗಿ ಪೊಲೀಸ್ ಬಂದೋಬಸ್ತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyank kharge

Kalaburagi: ಪುನರ್‌ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ

Priyank–Kharge

Waqf Notice Issue: ಬಿಜೆಪಿ- ಕಾಂಗ್ರೆಸ್‌ ನಾಯಕರಿಂದ ರಾಜಕೀಯ ವಾಕ್ಸಮರ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

delhi air

Delhi pollution; ಹಾಳಾದ ರಸ್ತೆಗಳನ್ನು ಸರಿಪಡಿಸುವಲ್ಲಿ ಆಪ್ ವಿಫಲ: ಬಿಜೆಪಿ ವಾಗ್ದಾಳಿ

1-hampi-1

Deepawali; ಸರಣಿ‌ ರಜೆ :ಹಂಪಿಯಲ್ಲಿ ಪ್ರವಾಸಿಗರ ದಂಡು, ಪರದಾಟ!

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Sagara: ಭೀಕರ ಅಪಘಾತ… ರಿಕ್ಷಾ ಚಾಲಕ ಸೇರಿ ಇಬ್ಬರು ಮೃತ್ಯು, ಮೂವರಿಗೆ ಗಾಯ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

Waqf issue: ವಕ್ಫ್ ಬೋರ್ಡ್ ರದ್ದತಿಗೆ ಪತ್ರ ಚಳವಳಿ ನಡೆಸಬೇಕು: ಎಂ.ಪಿ.ರೇಣುಕಾಚಾರ್ಯ ಆಗ್ರಹ

1-dee

Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.