ಹೊಸ ಸಾಧ್ಯತೆ ತೆರೆದುಕೊಂಡ ವಸ್ತು ಪ್ರದರ್ಶನ
Team Udayavani, Feb 26, 2017, 2:57 PM IST
ಕಲಬುರಗಿ: ಕನ್ನಡ ಭವನದಲ್ಲಿ ಶನಿವಾರದಿಂದ ಆರಂಭಗೊಂಡಿರುವ ಐದು ದಿನಗಳ ನ್ಯಾಷನಲ್ ವೆಂಡರ್ ಡೆವಲಪಮೆಂಟ್ ಕಾರ್ಯಕ್ರಮ ಹಾಗೂ ಕೈಗಾರಿಕಾ ವಸ್ತು ಪ್ರದರ್ಶನ ಹೊಸ ಸಾಧ್ಯತೆಯತ್ತ ಹೊರಟು ನಿಂತಿದೆ.
ಈ ಬಾರಿಯ ಪ್ರದರ್ಶನ ಹೆಚ್ಚು ಹೆಚ್ಚು ಯುವಕರನ್ನು ಸೆಳೆಯುವುದರಲ್ಲಿ ಅನುಮಾನವೇ ಇಲ್ಲ. ಕುರುಕುಲ ತಿಂಡಿ, ಸಾಂಬಾರ, ಮಸಾಲೆ ಹಾಗೂ ಪುಳಿಯೊಗರೆ ತಯಾರಿಕೆ, ಆಯುರ್ವೇದ ಔಷಧಿ ನಿರ್ಮಾಣ, ಸಿಮೆಂಟ್ ಬ್ರಿಕ್ಸ್, ನೆಲಹಾಸು ನಿರ್ಮಾಣ, ಕಂಪ್ಯೂಟರ್ ಗ್ರಾμಕ್ಸ್ ಸಹಾಯದಿಂದ ಕಟ್ಟಿಗೆ ಕೆಲಸ, ಖಾದಿ ಗ್ರಾಮೋದ್ಯೋಗದ ಸಾಧ್ಯತೆಗಳನ್ನು ಪರಿಚಯಿಸುವ ಪ್ರದರ್ಶನವಾಗಿದೆ.
ಇದೇ ಮೊದಲ ಬಾರಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಆಯೋಜಿಸಿದ್ದ ಜಿಲ್ಲಾ ವಸ್ತು ಪ್ರದರ್ಶನ ಯುವಕರ ಮೆಚ್ಚುಗೆ ಪಡೆಯುತ್ತಿದೆ. ಬಹುತೇಕ ಯುವಕರು ಹೊಸದಾಗಿ ಉತ್ಪಾದನಾ ವಲಯದತ್ತ ಗಮನ ಹರಿಸಿರುವುದು ಕಂಡು ಬಂತು. ಅದರಲ್ಲೂ ಐಟಿಐ, ಡಿಪ್ಲೋಮಾ ಮುಗಿಸಿರುವ ನಿರುದ್ಯೋಗಿಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮೇಳ ರೂಪಿಸಿದಂತಿದೆ.
ಪ್ರಮುಖವಾಗಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪುರದ ನಾಗೂರ ಬ್ರಿಕ್ಸ್ ಕ್ರಿಯೇಷನ್ ಸಂಗಣ್ಣ ಪತ್ತಾರ ಪ್ರದರ್ಶನ ಮಾಡಿದ ವಿವಿಧ ನೆಲಹಾಸುಗಳು, ಗಾಯತ್ರಿ ಇಂಜಿನಿಯರಿಂಗ್ ವಕ್, ಬೆಮೆಲ್‌ನ ಇಕ್ಯೂಪ್‌ಮೆಂಟ್ಸ್‌ಗಳು, ಶಾಲೆಗಳಿಗೆ ಬೇಕಾದ ವಸ್ತುಗಳ ಪ್ರದರ್ಶನ, ಸಾಯಿ ಕೃಪಾ ಇಂಡಸೀಸ್ ಮಹಿಳಾ ಗೃಹ ಉದ್ಯೋಗ,
ಜಯೇಶ ಕುಮಾರ ಅವರು ಕಮಲ್ ಕುರುಕಲ ತಿಂಡಿಗಳ ನಿರ್ಮಾಣ, ರಶ್ಮಿ ಮುಕುಂದ ವರು ಅವರ ಕಿವಿಯೋಲೆಗಳ ನಿರ್ಮಾಣ, ಸನ್‌ರೈಜ್ ವುಡ್ ಕಾರ್ವಿಂಗ್ಸ್, ಸೈನಿಕ ಶಕ್ತಿ ಹೋಂ ಪ್ರೋಡಕ್ಟ್ ಮೋರಟಗಿ ಅವರ ಅಲರ್ಜಿ, ಹಲ್ಲು ಮತ್ತು ಅಸ್ಥಮಾಗಳ ಔಷಧಿ, ಹಾಗೂ ಸೋಯಾಬೀನ್‌ದಿಂದ ತಯಾರಿಸಿದ ಪನೀ°ರ ಗಮನ ಸೆಳೆದವು.
ಪ್ರದರ್ಶನದಲ್ಲಿ ಒಟ್ಟು 65 ಮಳಿಗೆಗೆಳಲ್ಲಿ ಉತ್ಪನ್ನಗಳು ಪ್ರದರ್ಶನಕ್ಕೆ ಇದ್ದವು. ನಾಳೆಯಿಂದ ಇನ್ನಷ್ಟು ಉತ್ಪಾದಕರು, ಮುಖ್ಯವಾಗಿ ಬೂಟ್, ಸಾಕ್ಸ್, ಪುಸ್ತಕಗಳು, ದಾಲ್ ಮಿಲ್, ಅಕ್ಕಿ ಮಿಲ್‌ಗಳ ಮಾಲೀಕರು ತಮ್ಮ ಮಳಿಗೆ ತೆರೆಯುವ ಮೂಲಕ ವೀಕ್ಷಣೆಗೆ ಮತ್ತು ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಉತ್ಪಾದನಾ ವಲಯ ಹೆಚ್ಚಳಕ್ಕೆ ಇನ್ನಷ್ಟು ಉತ್ತೇಜನ ನೀಡಲಿದ್ದಾರೆ.
ಪತಿ, ಪತ್ನಿ ಉತ್ಪಾದಕರು: ಮೇಳದಲ್ಲಿ ಕಮಲ್ ಕುರುಕಲು ತಿಂಡಿಗಳ ಮಳಿಗೆ ಗಮನ ಸೆಳೆಯುತ್ತಿದೆ. ಒಂದೇ ಮಳಿಗೆಯಲ್ಲಿ ಪತಿ ಮುಕುಂದ ವರು ಹಾಗೂ ಪತ್ನಿ ರಶ್ಮಿ ಮುಕುಂದ ಅವರು ಇಬ್ಬರು ತಾವು ಉತ್ಪಾಧಿಸುತ್ತಿರುವ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಕಮಲ್ ಬ್ರಾಂಡಿನ ಅಡಿಯಲ್ಲಿ ಮುಕುಂದ ಅವರು 22 ರೀತಿಯ ತಿಂಡಿಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ.
ಇದಕ್ಕೆ ಪೈಪೋಟಿ ಎನ್ನುವಂತೆ ಪತ್ನಿ ರಶ್ಮಿ ವರು ಕೂಡ ಉತ್ಪಾಧಿಸಿರುವ ಕಿವಿಯೋಲೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇಬ್ಬರು ತಮ್ಮ ಕ್ಷೇತ್ರಗಳಲ್ಲಿ ಮಹತ್ವಾಂಕಾಂಕ್ಷೆ ಹೊಂದಿದ್ದು, ಜಿಲ್ಲಾ ಕೈಗಾರಿಕೆ ಕೇಂದ್ರದ ಸಹಕಾರ ಪಡೆಯುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
* ಸೂರ್ಯಕಾಂತ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.