14 ತಿಂಗಳಿನಿಂದ ಖಾಲಿ ಬಿದ್ದಿದೆ ಕೇಂದ್ರೀಯ ವಿವಿ ಕುಲಪತಿ ಹುದ್ದೆ

Team Udayavani, Jul 16, 2021, 8:28 PM IST

gಗಗಗಗಗಗಗಗಗಗಗಗಗಗಗ್ಗ್ಸಗ

ಕಲಬುರಗಿ: ರಾಜ್ಯದ ಏಕೈಕ ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಕಳೆದ 14 ತಿಂಗಳಿಂದ ಖಾಲಿ ಇದ್ದು, ವಾರದೊಳಗೆ ಬಿ.ಸತ್ಯನಾರಾಯಣ ಕುಲಪತಿಗಳಾಗಿ ನೇಮಕ ಹೊಂದಲಿದ್ದಾರೆಂದು ತಿಳಿದುಬಂದಿದೆ. ವಿವಿ ಕುಲಪತಿಗಳಾಗಿದ್ದ ಪ್ರೊ| ಎಚ್‌. ಎಂ ಮಹೇಶ್ವರಯ್ಯ ಕಳೆದ 2020ರ ಏಪ್ರಿಲ್‌ ತಿಂಗಳಲ್ಲಿಯೇ ನಿವೃತ್ತಿಯಾಗಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಅಕ್ಟೋಬರ್‌ ತಿಂಗಳವರೆಗೆ ಅವರ ಅಧಿಕಾರವಧಿ ವಿಸ್ತರಿಸಲಾಗಿತ್ತು. ತದನಂತರ ಈ ಹುದ್ದೆ ಖಾಲಿಯಾಗಿ ಒಂಭತ್ತು ತಿಂಗಳಾದರೂ ಹೊಸ ಕುಲಪತಿಗಳ ನೇಮಕವಾಗಿಲ್ಲ. ರಾಜ್ಯದ ವಿವಿಗಳಿಗೆ ವರ್ಷಾನುಗಟ್ಟಲೇ ಕುಲಪತಿ ನೇಮಕವಾಗದೇ ಪ್ರಭಾರಿಯಾಗಿ ಮುನ್ನಡೆಸಿಕೊಂಡು ಬಂದಿರುವುದನ್ನು ನೋಡಿದ್ದೇವೆ. ಆದರೆ ರಾಜ್ಯದ ಏಕೈಕ ಕೇಂದ್ರೀಯ ವಿವಿಗೂ ವರ್ಷದಿಂದ ಕುಲಪತಿ ಹುದ್ದೆ ಖಾಲಿಯಾಗಿಯೇ ಮುನ್ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ.

ದೇಶದಲ್ಲೇ ಶೈಕ್ಷಣಿಕ ಸಾಧನೆಯೊಂದಿಗೆ ಉತ್ತಮ ಹೆಸರು ಮಾಡಿರುವ ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಹುದ್ದೆ ಅತ್ಯಂತ ಪ್ರತಿಷ್ಠತೆಯಿಂದ ಕೂಡಿದೆ. ಇದಕ್ಕಾಗಿಯೇ ಕುಲಪತಿಗಳ ಹುದ್ದೆಗೆ 430ಕಿಂತ ಹೆಚ್ಚು ಅರ್ಜಿಗಳು ಬಂದಿದ್ದವು. ಬಂದ ಅರ್ಜಿಗಳನೆಲ್ಲ 2020ರ ಸೆಪ್ಟೆಂಬರ್‌ 23ರಂದು ನಡೆದ ಶೋಧನಾ ಸಮಿತಿ ಸಭೆಯಲ್ಲಿ 15 ಜನರನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿ ನಂತರ ಅಕ್ಟೋಬರ್‌ 7ರಂದು ಶೋಧನಾ ಸಮಿತಿ ಸಭೆಯಲ್ಲಿ 5 ಜನರನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಶಿಫಾರಸಿಗಿಂತ ಮೊದಲು ಕೇಂದ್ರದ ಶಿಕ್ಷಣ ಆಯುಕ್ತಾಲಯದಿಂದ ವರ್ಗವಾಗಿ ಈಗ ರಾಷ್ಟ್ರಪತಿಗಳ ಬಳಿ ಹೋಗಿದೆ ಎನ್ನಲಾಗಿದ್ದರೂ ಇಂದಿನ ದಿನದವರೆಗೂ ರಾಷ್ಟ್ರಪತಿಗಳಿಂದ ಹೆಸರೊಂದು ಅನುಮೋದನೆಯಾಗಿ ಅಂತಿಮ ಮೊಹರು ಹೊರ ಬಿದ್ದಿಲ್ಲ.

ಬಲ್ಲ ಮಾಹಿತಿಗಳ ಪ್ರಕಾರ ಈಗ ವಾರ ಇಲ್ಲವೇ ಹತ್ತು ದಿನದೊಳಗೆ ಇಲ್ಲಿನ ಕರ್ನಾಟಕ ಕೇಂದ್ರೀಯ ವಿವಿಗೆ ಹೊಸ ಕುಲಪತಿಗಳು ಬರಲಿದ್ದಾರೆ ಎನ್ನಲಾಗುತ್ತಿದೆ. ಪಟ್ಟಿಯಲ್ಲಿ ಯಾರ್ಯಾರು: ಸತ್ಯ ಶೋಧನಾ ಸಮಿತಿ ಶಿಫಾರಸು ಮಾಡಿರುವ ಐವರು ಹೆಸರುಗಳಲ್ಲಿ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರೊ| ನಿರಂಜನ ವಾನಳ್ಳಿ, ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಅರ್ಥಶಾಸ್ತ ವಿಭಾಗದ ಪ್ರೊ| ಪುಷ್ಪ ಮ. ಸವದತ್ತಿ, ವಿಟಿಯು ಕಲಬುರ್ಗಿ ಪ್ರಾದೇಶಿಕ ಕೇಂದ್ರದ ವಿಶೇಷ ಅ ಧಿಕಾರಿ ಪ್ರೊ| ಬಸವರಾಜ ಗಾದಗೆ, ಹೈದ್ರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಪ್ರೊ|ಮೀನಾ ಹರಿಹರನ್‌, ಉಸ್ಮಾನಿಯ ವಿಶ್ವವಿದ್ಯಾಲಯದ ಪ್ರೊ|ಬಿ. ಸತ್ಯನಾರಾಯಣ ಸೇರಿದ್ದಾರೆ. ಐವರಲ್ಲಿ ಮೂವರು ಕರ್ನಾಟದವರೇ ಆಗಿದ್ದಾರೆ.

ಬಿ.ಸತ್ಯನಾರಾಯಣ ನೇಮಕ?: 2009- 10ರಲ್ಲಿ ಆರಂಭಗೊಂಡಿರುವ ಕರ್ನಾಟಕ ಕೇಂದ್ರೀಯ ವಿವಿಗೆ ಪ್ರೊ| ಎ.ಎಂ. ಪಠಾಣ ಮೊದಲ ಕುಲಪತಿಗಳಾಗಿದ್ದರು. ತದನಂತರ ಎರಡನೇ ಕುಲಪತಿಗಳಾಗಿದ್ದವರು ಎಸ್‌. ಎಸ್‌.ಮೂರ್ತಿ, ತದನಂತರ ಪ್ರೊ| ಎಚ್‌. ಎಂ. ಮಹೇಶ್ವರಯ್ಯ ಐದು ವರ್ಷಗಳ ಕಾಲ ಕುಲಪತಿಗಳಾಗಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತಿಯಾಗಿದ್ದಲ್ಲದೇ ಕಳೆದ ತಿಂಗಳು ಕೊರೊನಾದಿಂದ ಮೃತಪಟ್ಟಿದ್ದಾರೆ. ಈಗ ನೇಮಕವಾಗುವ ನಾಲ್ಕನೇ ಕುಲಪತಿ ಯಾರು? ಎನ್ನುವ ಕುತೂಹಲ ಮೂಡಿದೆ. ಉಸ್ಮಾನಿಯ ವಿಶ್ವವಿದ್ಯಾಲಯದ ಪ್ರೊ| ಬಿ. ಸತ್ಯನಾರಾಯಣ ಅವರೇ ಕರ್ನಾಟಕ ಕೇಂದ್ರೀಯ ಈಗ ಹೊಸದಾಗಿ ಕುಲಪತಿಗಳಾಗಿ ನೇಮಕವಾಗಲಿದ್ದಾರೆ ಎನ್ನ ಲಾಗುತ್ತಿದೆ. ಬಿ.ಸತ್ಯನಾರಾಯಣ ಸಿಯುಕೆ ಕುಲಪತಿ ಗಳಾಗಿ ನೇಮಕ ಹೊಂದಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ 14 ತಿಂಗಳಿನಿಂದ ಖಾಲಿ ಇರುವ ಸಿಯುಕೆಗೆ ವಾರದೊಳಗೆ ಹೊಸ ಕುಲಪತಿಗಳು ಬರುವುದಂತೂ ನಿಶ್ಚಿತ

ಟಾಪ್ ನ್ಯೂಸ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು

Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು

priyank kharge

Kalaburagi: ಪುನರ್‌ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ

Priyank–Kharge

Waqf Notice Issue: ಬಿಜೆಪಿ- ಕಾಂಗ್ರೆಸ್‌ ನಾಯಕರಿಂದ ರಾಜಕೀಯ ವಾಕ್ಸಮರ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

8

Mangaluru: ರಾತ್ರಿ ಪ್ರಿಪೇಯ್ಡ್  ಆಟೋ ಇಲ್ಲದೆ ಪ್ರಯಾಣಿಕರ ಪರದಾಟ

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

7

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.