ಗೋವುಗಳ ರಕ್ಷಣೆ ಅಗತ್ಯ: ಪೇಜಾವರ ಶ್ರೀ
Team Udayavani, Jul 10, 2018, 11:41 AM IST
ಹಟ್ಟಿ ಚಿನ್ನದ ಗಣಿ: ಹಿಂದೂ ಧರ್ಮ ಸಂಸ್ಕೃತಿ ಉಳಿಯಬೇಕಾದರೆ ಹಿಂದೂಗಳೆಲ್ಲ ಒಗ್ಗಟ್ಟಾಗುವುದು ಮತ್ತು ಗೋವುಗಳ ರಕ್ಷಣೆ ಅಗತ್ಯವಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ನುಡಿದರು.
ಪಟ್ಟಣದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ರವಿವಾರ ನಡೆದ ಶ್ರೀಗಳ ಶೋಭಾಯಾತ್ರೆ ಹಾಗೂ ಪುರ ಪ್ರವೇಶ ಕಾರ್ಯಕ್ರಮದಲ್ಲಿ ಪೂಜ್ಯರು ಆಶೀರ್ವಚನ ನೀಡಿದರು.
ಹಿಂದೂಗಳೆಲ್ಲ ಒಗ್ಗಟ್ಟಾಗಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೋಯ್ಯೋಣ. ಹೃದಯ ಮಂದಿರದಲ್ಲಿ ಭಗವಂತ ನೆಲೆಸಿದ್ದಾನೆ. ಜೀವನದಲ್ಲಿ ದುರ್ಬಲರ ಸೇವೆ ಮಾಡುವುದು ನಾಗರಿಕನಾದವರ ಕರ್ತವ್ಯವಾಗಿದೆ. ಜನರ ಸೇವೆ ದೇವರಿಗೆ ಕೊಡುವ ಕರವಾಗಿದೆ ಎಂದರು.
67 ವರ್ಷಗಳ ಹಿಂದೆ ಹಟ್ಟಿ ಚಿನ್ನದ ಗಣಿಗೆ ತಾವು ಆಗಮಿಸಿದ್ದು ಕೃಷ್ಣನ ಲೀಲೆಯಂತೆ ಮತ್ತೂಮ್ಮೆ ಚಿನ್ನದ ನಾಡಿಗೆ ಬಂದಿದ್ದು ಅತೀವ ಸಂತಸ ತಂದಿದೆ. ದೇಶದಲ್ಲಿಯೇ ಚಿನ್ನದ ಉತ್ಪಾದನೆಯಲ್ಲಿ ಏಕಸ್ವಾಮ್ಯತೆ ಸಾಧಿಸಲು ಕಾರಣೀಕರ್ತರಾದ ಕಾರ್ಮಿಕರ ಬದುಕು ಸುಖ-ಸಮೃದ್ಧಿಯಿಂದ ಸಾಗಲಿ ಎಂದು ಆಶಿಸಿದರು.
ಮರಣಾನಂತರ ನೇತ್ರ ಸೇರಿದಂತೆ ಅಂಗಾಂಗಗಳನ್ನು ದಾನ ಮಾಡಬೇಕು. ತಂದೆ-ತಾಯಿಯನ್ನು ಗೌರವದಿಂದ ಕಾಣಬೇಕು. ಅನಾಥ ಬಾಲಕರಿಗೆ ಶಾಲೆ ಕಾಲೇಜು ತೆರೆಯಬೇಕು. ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು. ಪ್ರತಿಯೊಬ್ಬರು ವೃದ್ಧ ತಂದೆ-ತಾಯಿಗಳ ಪಾಲನೆ, ಪೋಷಣೆ
ಮಾಡಬೇಕು ಎಂದರು.
ಧಾರ್ಮಿಕ ಚಿಂತನೆಗಳಿಂದ ಮಾತ್ರ ಮನುಷ್ಯನಿಗೆ ನೆಮ್ಮದಿ ಸಾಧ್ಯ. ಪ್ರತಿಯೊಬ್ಬರು ಮನುಷ್ಯತ್ವ ಅರಿತು ಮಾನವ ಧರ್ಮದ ನೆಲೆಗಟ್ಟಿನಲ್ಲಿ ಬದುಕಬೇಕೆಂದು ಸಲಹೆ ನೀಡಿದರು.
ವೇದ ಮತ್ತು ಸಂಗೀತ ಶಾಲೆ ಆರಂಭ: ರಾಜ್ಯದಲ್ಲಿ 7 ಕಣ್ವ ಮಠಗಳಿವೆ. ನಿರಂತರ ಧರ್ಮ ಪ್ರಚಾರ ಕಾರ್ಯ ಮಾಡಿಕೊಂಡು ಬರುತ್ತಿವೆ. ಈಗಾಗಲೇ ಕಣ್ವ ಮಠದಲ್ಲಿ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಅನೇಕ ವಿಪ್ರ ವಿದ್ಯಾರ್ಥಿಗಳು ವೇದ ಪಾಠಶಾಲೆಯಲ್ಲಿ ಸಂಸ್ಕೃತ ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲದೆ ಜುಲೈ ಅಂತ್ಯದೋಳಗೆ ಸಂಗೀತ, ವೇದ ಪಾಠಶಾಲೆ ಕೂಡ ಆರಂಭಗೊಳ್ಳಲಿದೆ. ಇಲ್ಲಿ ಎಲ್ಲರಿಗೂ ಸಂಗೀತ ಕಲಿಯುವ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಶೋಭಾಯಾತ್ರೆ: ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ನಾಗಲಿಂಗೇಶ್ವರ ದೇವಸ್ಥಾನದಿಂದ ರಾಘವೇಂದ್ರ ಮಠದವರೆಗೆ ಪೇಜಾವರ ಶ್ರೀಗಳ ಶೋಭಾಯಾತ್ರೆ ನಡೆಸಲಾಯಿತು. ವಿವಿಧ ವಾದ್ಯಮೇಳ, ಭಜನಾ ಮಂಡಳಿಗಳ ಭಜನೆಯೊಂದಿಗೆ ನಡೆದ ಶೋಭಾಯಾತ್ರೆಯಲ್ಲಿ ಸುಮಂಗಲೆಯರು ಕುಂಭ, ಕಳಶ ಹೊತ್ತು ಸಾಗಿದರು.
ರಾಯರ ಮಠದಲ್ಲಿ ಪೇಜಾವರ ಶ್ರೀಗಳು ಶ್ರೀಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ನೇತೃತ್ವವನ್ನು ಗುರು ಭೀಮರಾವ್ ಕುಲಕರ್ಣಿ ವಂದಲಿ ಹಾಗೂ ಹಟ್ಟಿ ಕಂಪನಿ ನೌಕರ ಬಲಭೀಮರಾವ್, ವೆಂಕಟೇಶ, ಪ್ರಾಣೇಶ, ಪವನಕುಮಾರ, ಪದ್ಮಾವತಿ, ವೀಣಾಶ್ರೀ, ಭಾರತಿ ಕುಲಕರ್ಣಿ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.