ಸಾರ್ವಜನಿಕರೇ ಸ್ವಚ್ಛಗೊಳಿಸುತ್ತಿದ್ದಾರೆ ಚರಂಡಿ!
Team Udayavani, Jun 13, 2020, 6:48 AM IST
ಸೇಡಂ: ಇಲ್ಲಿ ಪುರಸಭೆ ಇದೆ, ಪ್ರತಿನಿತ್ಯ 60 ಜನ ಪೌರ ಕಾರ್ಮಿಕರು ಕೆಲಸ ಮಾಡುತ್ತಾರೆ. ಆದರೂ ಚರಂಡಿಗಳನ್ನು ಸಾರ್ವಜನಿಕರೇ ಸ್ವಚ್ಛಗೊಳಿಸಬೇಕು. ಯಾಕೆ ಹೀಗೆ ಅಂತೀರಾ? ಇರುವ 60 ಪೌರ ಕಾರ್ಮಿಕರಲ್ಲಿ 43 ಜನರನ್ನು ರಸ್ತೆ ಗುಡಿಸಲು ಮತ್ತು ಚರಂಡಿ ಸ್ವಚ್ಛ ಮಾಡಲು ಬಳಕೆ ಮಾಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಹೇಳುತ್ತಾರೆ.
ಪಟ್ಟಣದಲ್ಲಿರುವ ಬಡಾವಣೆಗಳಲ್ಲಿನ ಚರಂಡಿಗಳು ತುಂಬಿ ಹರಿಯುತ್ತವೆ. ಅನೇಕ ಕಡೆಗಳಲ್ಲಿ ಚರಂಡಿಯಲ್ಲಿ ಗೊಜ್ಜು ಜಮಾವಣೆಯಾಗಿ, ನೀರು ಸರಾಗವಾಗಿ ಸಾಗದೇ ರಸ್ತೆ ಮತ್ತು ಮನೆಗಳಿಗೆ ನುಗ್ಗಿದ ಉದಾಹರಣೆಗಳಿವೆ. ಪಟ್ಟಣದ ವಿದ್ಯಾನಗರದಲ್ಲಿನ ಚರಂಡಿಗಳು ತುಂಬಿ ತುಳುಕುತ್ತಿವೆ. ದೊಡ್ಡ ಅಗಸಿ, ವೆಂಕಟೇಶ ನಗರ, ಊಡಗಿ ರಸ್ತೆ, ಮಿಸ್ಕಿನಪುರ ಬಡಾವಣೆಗಳಲ್ಲೂ ಚರಂಡಿಗಳ ಸ್ಥಿತಿ ಬಿಗಡಾಯಿಸಿದ್ದು, ಖುದ್ದು ಸ್ಥಳೀಯರೇ ಸ್ವಚ್ಛತೆಗೆ ಮುಂದಾಗುತ್ತಿದ್ದಾರೆ. ತುಂಬಿ ಹರಿಯುವ ಚರಂಡಿಗಳ ದುರ್ವಾಸನೆ ಸಾಮಾನ್ಯವಾಗಿದೆ. ಜೊತೆಗೆ ಸೊಳ್ಳೆಗಳ ಕಾಟವೂ ಜಾಸ್ತಿಯಾಗಿದ್ದು, ಜನ ಪ್ರತಿನಿತ್ಯ ನರಕದ ಅನುಭವ ಎದುರಿಸುತ್ತಿದ್ದಾರೆ.
ಪೌರ ಕಾರ್ಮಿಕರೆಲ್ಲಿ: 43 ಪೌರ ಕಾರ್ಮಿಕರನ್ನು ಸ್ವಚ್ಛತೆಗೆ ಬಳಸಿ ಕೊಳ್ಳುತ್ತಿರುವುದಾಗಿ ಪುರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಚರಂಡಿಗಳೇಕೆ ಸ್ವತ್ಛವಾಗುತ್ತಿಲ್ಲ ಎಂಬುದು ಬಡಾವಣೆಯಲ್ಲಿ ವಾಸಿಸುವ ಜನರ ಪ್ರಶ್ನೆಯಾಗಿದೆ.
ಇದು ಇಂದು-ನಿನ್ನೆ ಕಥೆಯಲ್ಲ. ವರ್ಷಗಳೇ ಕಳೆಯುತ್ತಿವೆ. ಚರಂಡಿ ಸ್ವಚ್ಛ ಮಾಡದೆ ಹಾಗೆಯೇ ಬಿಡಲಾಗುತ್ತಿದೆ. ಇದರಿಂದ ದುರ್ವಾಸನೆ ಬರುತ್ತಿದೆ. ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಇಷ್ಟಾದರೂ ಅಧಿಕಾರಿಗಳು ಗಮನಹರಿಸಿಲ್ಲ. –ವಿಶ್ವನಾಥ ಡೊಳ್ಳಾ, ನಿವಾಸಿ
ಚರಂಡಿಗಳ ಸ್ವಚ್ಛತೆಯನ್ನು ಹಂತ-ಹಂತವಾಗಿ ಮಾಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸಾಧ್ಯವಾದಷ್ಟು ಶೀಘ್ರವೇ ಜನರ ಸಮಸ್ಯೆ ಪರಿಹರಿಸಲಾಗುವುದು. –ಸತೀಶ ಗುಡ್ಡೆ, ಮುಖ್ಯಾಧಿಕಾರಿ, ಪುರಸಭೆ
–ಶಿವಕುಮಾರ ಬಿ. ನಿಡಗುಂದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.