ಸಮಾನತೆಯಿಂದ ಬಸವ ತತ್ವದ ಉದ್ದೇಶ ಸಾರ್ಥಕ
Team Udayavani, Mar 3, 2017, 4:01 PM IST
ಜೇವರ್ಗಿ: ದೇವರು, ಧರ್ಮ ಉತ್ಛ ಕುಲದವರ ಸ್ವತ್ತಲ್ಲ. ದೀನ ದಲಿತರಿಗೆ ದೇವರನ್ನು ಪೂಜಿಸುವ ಹಾಗೂ ಆರಾಧಿಸುವ ಅವಕಾಶ ಸಮಾನವಾಗಿ ಸಿಕ್ಕಾಗ ಮಾತ್ರ ಬಸವ ತತ್ವದ ಆಶಯ ಹಾಗೂ ಕಲ್ಯಾಣ ಕ್ರಾಂತಿಯ ಉದ್ದೇಶ ಸಾರ್ಥಕವಾಗುತ್ತದೆ ಎಂದು ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಡಾ| ಅಪ್ಪುಗೆರೆ ಸೋಮಶೇಖರ ಹೇಳಿದರು.
ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬಸವಕೇಂದ್ರ ತಾಲೂಕ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಅವರು ಅನುಭಾವ ನೀಡಿದರು. ಇತಿಹಾಸ ಪರಂಪರೆ ಎಂದು ರಾಗ ಹಾಡುತ್ತಾ ಕುಳಿತರೆ ಬಸವ ತತ್ವ ಆಚರಣೆಗೆ ಬರಲು ಸಾಧ್ಯವಿಲ್ಲ. ಜನಸಾಮಾನ್ಯರನ್ನು ಮೂಢ ನಂಬಿಕೆಯಿಂದ ಹೊರತರುವ ಕೆಲಸವನ್ನು ಮಠಾಧೀಶರು ಮಾಡಬೇಕು.
12ನೇ ಶತಮಾನದಲ್ಲಿ ಶರಣರು ವೈಚಾರಿಕ ನೆಲೆಗಟ್ಟಿನ ಮೇಲೆ ಸಮಾಜ ಕಟ್ಟಿದ್ದರು. ಈಗ ಸಮಾಜವನ್ನು ಜಾತಿ ಧರ್ಮಗಳ ಆಧಾರದ ಮೇಲೆ ಒಡೆಯಲಾಗುತ್ತಿದೆ. ಜಾತಿ ರಹಿತ, ಲಿಂಗಭೇದ ಹಾಗೂ ಮುಕ್ತ ಧಾರ್ಮಿಕ ನೀತಿ ಅನುಸರಿಸಿದ ಶರಣರು ವಿಶ್ವಕ್ಕೆ ಮಾದರಿಯಾಗಿದ್ದಾರೆ. ಜಾತಿ ಅಹಂಕಾರ ಮತ್ತು ಜಾತಿ ಕೀಳರಿಮೆಯನ್ನು ಶರಣರು ವಿರೋಧಿಸಿದರು.
ಎಲ್ಲ ಶೋಷಿತ ಸಮುದಾಯದ ಜನರು ಬಸವ ತತ್ವದ ಆಧಾರದ ಮೇಲೆ ಒಂದಾಗಿ ವೈಚಾರಿಕ ಕ್ರಾಂತಿ ಕಡೆಗೆ ಬರಬೇಕು. ಬಸವಣ್ಣನವರ ಕಲ್ಪನೆಯನ್ನು ಡಾ| ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸುವುದರ ಮೂಲಕ ವೈಚಾರಿಕ ಸಮಾಜ ಕಟ್ಟಲು ಕಾರಣರಾದರು. ಬೌದ್ಧ ಧರ್ಮದಲ್ಲಿ ಹೇಳಲಾಗುತ್ತಿರುವ ಸಂದೇಶ ಮತ್ತು ಬಸವೇಶ್ವರರ ಸಂದೇಶಗಳು ಒಂದೇಯಾಗಿದ್ದು, ಇಬ್ಬರ ಸಂದೇಶಗಳನ್ನು ಬೆಸೆಯುವ ಕಾರ್ಯ ಅಗತ್ಯವಾಗಿದೆ ಎಂದು ಹೇಳಿದರು.
ಬಸವ ಕೇಂದ್ರದ ಜಿಲ್ಲಾದ್ಯಕ್ಷ ಶಿವಶರಣಪ್ಪ ಕಲಬುರಗಿ ಅಧ್ಯಕ್ಷತೆ ವಹಿಸಿದ್ದರು. ಲಿಂ| ದೇವಿಂದ್ರಪ್ಪ ಷಣ್ಮುಖಪ್ಪ ಅವುಂಟಿ ಅವರ 17ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಅವರ ಕುಟುಂಬ ವರ್ಗ ಕಾರ್ಯಕ್ರಮದ ದಾಸೋಹಿಗಳಾಗಿ ಸೇವೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಶಿವಣ್ಣಗೌಡ ಪಾಟೀಲ ಹಂಗರಗಿ, ಷಣ್ಮುಖಪ್ಪಗೌಡ ಹಿರೇಗೌಡ, ರಾಮಣ್ಣ ಮಾಸ್ತರ ಹೂಗಾರ, ಮಹಾಂತಗೌಡ ಚನ್ನೂರ, ಸಿದ್ಧು ಯಂಕಂಚಿ, ಷಣ್ಮುಖ ಅವಂಟಿ, ಮಲ್ಲಿಕಾರ್ಜುನ ಮಾಸ್ತರ ಹೂಗಾರ, ಮಲ್ಲಿಕಾರ್ಜುನ ಅವಂಟಿ, ವಿಶ್ವನಾಥರೆಡ್ಡಿ ರಾಜಳ್ಳಿ, ಶಾಂತಪ್ಪ ಬಿರಾದಾರ, ಕಲ್ಲಪ್ಪ ಬಡದಾಳ, ಬಸವರಾಜ ಚಿನಗುಡಿ, ವೀರಣ್ಣ ಭೂತಪುರ, ನಿಂಗಣ್ಣ ಹಳಿಮನಿ,
ಅಶೋಕ ಸನಗುಂದಿ, ಭಗವಂತ್ರಾಯ ಬೆಣ್ಣೂರ, ಗುರು ಮಾಲಿಪಾಟೀಲ, ಸಂಗನಗೌಡ ಪಾಟೀಲ ರದ್ಧೇವಾಡಗಿ, ಲಕ್ಷಿಕಾಂತ ನಾಗರವತ್, ಸುರೇಶ ಹಳ್ಳಿ, ರಾಮಣ್ಣ ತೊನ್ಸಳ್ಳಿಕರ್, ಅಖಂಡೆಪ್ಪ ಕಲ್ಲಾ, ಸುರೇಶ ಹಳ್ಳಿ, ಅಣ್ಣು ಹಳ್ಳಿ, ಬಸವರಾಜ ಕಲ್ಲಾ ಸೇರಿದಂತೆ ನೂರಾರು ಬಸವಾಭಿಮಾನಿಗಳು ಪಾಲ್ಗೊಂಡಿದ್ದರು. ಬಸವಕೇಂದ್ರ ಅಧ್ಯಕ್ಷ ಶರಣಬಸಪ್ಪ ಕಲ್ಲಾ ಸ್ವಾಗತಿಸಿದರು. ಮಲ್ಲಣ್ಣ ನಾಗರಾಳ ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Renukaswamy case: ದರ್ಶನ್ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ
Kottigehara: ನಾಯಿ ದಾಳಿಯಿಂದ ಮಗುವಿಗೆ ಗಾಯ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.