ಕಾಯಕ ದಿನದಂದು ಸಲಕೆ ಹಿಡಿದು ಹೂಳೆತ್ತಿದ ರಾಣಿ
Team Udayavani, Apr 30, 2017, 3:43 PM IST
ಕಲಬುರಗಿ: ಗ್ರಾಮೀಣ ಭಾಗದಲ್ಲಿ ಗರ್ಭಿಣಿಯರಿಗೆ ಬಯಲು ಬಹಿರ್ದೆಸೆ ಅಪಾಯಕಾರಿ. ಆದ್ದರಿಂದ ಪ್ರತಿಯೊಂದು ಕುಟುಂಬವು ಮನೆಯಲ್ಲಿ ಶೌಚಾಲಯ ಇರುವಂತೆ ನೋಡಿಕೊಂಡು ಮಹಿಳೆಗೆ ಗೌರವಯುಕ್ತ ಪರಿಸರ ನಿರ್ಮಾಣ ಮಾಡುವತ್ತ ಚಿತ್ತ ಹರಿಸಬೇಕು ಎಂದು ಜಿಲ್ಲಾ ಪಂಚಾಯತಿ ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ ಕರೆ ನೀಡಿದರು.
ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದಲ್ಲಿ ಶನಿವಾರ ಜಿಲ್ಲಾ ಪಂಚಾಯತಿ, ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ, ಪ್ರಜ್ಞಾ ಕಾನೂನು ಸಲಹಾ ಸಮಿತಿ ಸಂಯುಕ್ರವಾಗಿ ಬುದ್ಧ, ಬಸವ, ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾಯಕ ದಿನಾಚರಣೆಯನ್ನು ಹೂಳೆತ್ತುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
12ನೇ ಶತಮಾನದಂತೆ ಈಗಲೂ ಸ್ತ್ರೀಯರಿಗೆ ಸ್ವಾತಂತ್ರ, ಸಮಾನ ಗೌರವ ಸಿಗಬೇಕಿದೆ. ಅವತ್ತು ಬಸವೇಶ್ವರರು, ಬಳಿಕ ಅಂಬೇಡ್ಕರ್ ಅವರು ಎಲ್ಲ ವರ್ಗದ ಮಹಿಳೆಯರಿಗೆ ಸಮಾನತೆ ತಂದು ಕೊಡುವಲ್ಲಿ ಪ್ರಮುಖರೆನ್ನಿಸಿಕೊಂಡಿದ್ದರು. ಅವರ ತತ್ವಗಳನ್ನು ನಾವು ಪಾಲಿಸುವತ್ತ ಗಮನ ಹರಿಸಬೇಕಿದೆ ಎಂದರು.
21ನೇ ಶತಮಾನತದಲ್ಲಿ ಮಹಿಳೆಯರು ಗೌರವಯುತವಾಗಿ ಬಹಿರ್ದೆಸೆ ಮಾಡುವುದು ದುರ್ಲಬವಾಗಿದೆ. ಆದ್ದರಿಂದ ಸರಕಾರ ಜಾರಿಗೆ ತಂದಿರುವ ಮನೆಗೊಂದು ಶೌಚಾಲಯ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಮಹಿಳೆಗೆ ಗೌರವ ತಂದುಕೊಡಬೇಕಿದೆ ಎಂದರು. ಎಲ್ಲ ಜಾತಿ ಧರ್ಮದ ಗರ್ಭವತಿ ಮಹಿಳೆಯರನ್ನು ಒಂದೆ ಕಡೆ ಸೀಮಂತ (ಕುಬುಸ) ಮಾಡಬೇಕು.
ವಚನಕಾರರು ಎಲ್ಲ ರೀತಿಯ ತಾರತಮ್ಯವನ್ನು ಕಿತ್ತು ಹಾಕುವುದಕ್ಕಾಗಿ ಶ್ರಮಿಸಿದವರು. ನಾವೂ ಯಾವುದೇ ರೀತಿಯ ತಾರತಮ್ಯ ಇಟ್ಟುಕೊಳ್ಳಬಾರದು. ತಾಜಸುಲ್ತಾನಪುರ ಗ್ರಾಮವು ಎಲ್ಲ ಜಾತಿ ಧರ್ಮದವರು ಪರಸ್ಪರ ಸೌಹಾರ್ದತೆಯಿಂದ ಬದುಕುವುದು ನೋಡಿದರೆ ಇದೊಂದು ಮಾದರಿಯಾದ ಗ್ರಾಮವೆನಿಸುವುದು.
ಈ ಪರಂಪರೆ ಮುಂದುವರೆಸಿ ಎಂದರು. ಅತಿಥಿ ನೀಲಾ ಕೆ. ಮಾತನಾಡಿ, ಕಾಯಕ ಪ್ರಜ್ಞೆಯನ್ನು ಸಮತೆಯ ಬಯಕೆ ಕಟ್ಟಿಕೊಟ್ಟ ವಚನಕಾರರು ನಮ್ಮ ನಾಡಿನ ಆಸ್ತಿಯಾಗಿದ್ದಾರೆ. ವರ್ಗ, ವರ್ಣ, ಲಿಂಗ, ಜಾತಿ ತಾರತಮ್ಯವನ್ನು ತೊಡೆದು ಹಾಕಲು ತ್ಯಾಗ ಬಲಿದಾನದ ಗಾಥೆ ಬರೆದವರು. ಪುರೋಹಿತಶಾಹಿ ವ್ಯವಸ್ಥೆಯನ್ನು ಬುಡಮಟ್ಟ ಕಿತ್ತು ಹಾಕುವಲ್ಲಿ ರಾಜಿರಹಿತವಾಗಿ ಶ್ರಮಿಸಿದವರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಶ್ವಿನಿ ಮದನಕರ್, ಉಳ್ಳವರು ಶಿವಾಲಯವ ಮಾಡುವರು. ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ, ದೇಹವೇ ದೇಗುಲ ಶಿರ ಹೊನ್ನ ಕಳಸವಯ್ಯ ಕೂಡಲಸಂಗಮದೇವ ಕೇಳಯ್ಯ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವಂತೆ ಎಲ್ಲ ಶ್ರಮಿಕರು ಸೇರಿ ಕೆರೆಯಲ್ಲಿ ಹೂಳೆತ್ತಿ ಶ್ರಮ ಸಂಸ್ಕೃತಿಯನ್ನು ಮುಂದುವರಿಸುತ್ತಿರುವರು.
ತಾರತಮ್ಯವಿಲ್ಲದ ನಾಡಿಗಾಗಿ ಎಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಶರಣಪ್ಪ ಜೀವಣಗಿ ಮಾತನಾಡಿದರು. ಡಾ| ಮೀನಾಕ್ಷಿ ಬಾಳಿ, ನಂದಾದೇವಿ ಮಂಗೊಂಡಿ, ನಿಂಗಪ್ಪ ಮಂಗೊಂಡಿ, ರವೀಂದ್ರ ರುದ್ರವಾಡಿ ಹಾಜರಿದ್ದರು.
ಮನರೇಗಾ ಜಾರಿಗಾಗಿ ತಮ್ಮ ತವರಿಗೆ ಹೋಗಿ ಜನರನ್ನು ಸಂಘಟಿಸಿ ಮನರೇಗಾ ಕುರಿತು ಜಾಗೃತಿ ನಡೆಸಿ, ಅರ್ಜಿಗಳನ್ನು ಸಲ್ಲಿಸಿದ್ದಕ್ಕಾಗಿ ಶಿವಲೀಲಾ ಪೂಜಾರಿ,(ಗಣಜಲಖೇಡ), ಶರಣಮ್ಮ ಅಂಬಲಗಿ (ನರೋಣ), ಮಲ್ಲಮ್ಮ ಮದನಕರ್ (ಗೌಡಗಾಂವ್), ಅನಸೂಯ (ಮುಗಟಾ), ರೇಖಾ (ಮಾಲಗತ್ತಿ) ಸುಂದ್ರಾಬಾಯಿ (ಗುಡೂರು)
ಅವರನ್ನು ತವರ ಋಣ ತೀರಿಸಲು ಶ್ರಮಿಸಿದ ಆರು ಜನ ಮಹಿಳೆಯರನ್ನು ಸಿಇಒ ಹೆಬ್ಸಿಬಾರಾಣಿ ಅಭಿನಂದಿಸಿದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲಿನಾಥ ಸ್ವಾಗತಿಸಿದರು. ಕ್ಷೇತ್ರ ಸಹಾಯಕ ಪ್ರೇಮ ಹಾಜರಿದ್ದರು. ಎಲ್ಲ ಕಾಯಕ ಬಂಧುಗಳು ಮತ್ತು ಸಂಘಟಕರೆಲ್ಲರೂ ಸೇರಿ ಹನ್ನೆರಡು ಸಸಿಗಳನ್ನು ನೆಡುವ ಮೂಲಕ ವಂದನಾರ್ಪಣೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.