ಸಂಘಟಿತ ಹೋರಾಟ ಶ್ರಮಿಕರ ಹಕ್ಕು
Team Udayavani, Oct 24, 2021, 10:57 AM IST
ವಾಡಿ: ಕಾನೂನು ಬದ್ಧ ಹಕ್ಕುಗಳಿಂದ ವಂಚಿತರಾದ ಕಾರ್ಮಿಕರು ಸಂಘ ಕಟ್ಟಿಕೊಂಡು ಕಾರ್ಖಾನೆ ಮಾಲೀಕರ ವಿರುದ್ಧ ಹೋರಾಟ ನಡೆಸಬಹುದು. ಸಮಾನ ಕೆಲಸಕ್ಕೆ ಸಮಾನ ವೇತನ ಕೇಳುವುದು ಶ್ರಮಿಕರ ಹಕ್ಕಾಗಿದೆ ಎಂದು ಕಲಬುರಗಿ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾದೀಶ ನಂದಕುಮಾರ.ಬಿ. ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ ಚಿತ್ತಾಪುರ, ತಾಲೂಕು ವಕೀಲರ ಸಂಘ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಶನಿವಾರ ಎಸಿಸಿ ನ್ಪೋರ್ಟ್ಸ್ ಕ್ಲಬ್‌ನಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಂಪನಿ ಮಾಲೀಕರು ಕಾರ್ಮಿಕರನ್ನು ದುಡಿಸಿಕೊಂಡು ಬೇಕಾಬಿಟ್ಟಿ ಸಂಬಳ ನೀಡುವಂತಿಲ್ಲ. ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವಷ್ಟು ಸಂಬಳ ನೀಡಬೇಕು. ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ ಸಹಿತ ಸಂಬಳ ನೀಡಬೇಕು. ಆರೋಗ್ಯ ಸುರಕ್ಷತೆಗಾಗಿ ಆಸ್ಪತ್ರೆ ಮತ್ತು ಕೆಲಸದ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಒದಿಗಸಬೇಕು ಎಂದರು.
ಇದನ್ನೂ ಓದಿ: ನಾಳೆಯಿಂದ 1-5ನೇ ತರಗತಿ ಶಾಲೆಗಳು ಆರಂಭ : ಸರ್ಕಾರದ ಗೈಡ್ ಲೈನ್ಸ್ ಅನುಸಾರ ತರಗತಿ ಶುರು
ಗ್ರಾಮೀಣ ಜನರನ್ನು ಕಾಡುತ್ತಿರುವ ಅನಕ್ಷರತೆ ಹೊಡೆದೋಡಿಸಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ ಪಡೆಯುವುದು ಎಂದರೆ ಕೇವಲ ಸಹಿ ಮಾಡುವುದನ್ನು ಕಲಿತರಷ್ಟೇ ಸಾಲದು. ಯಾವ ದಾಖಲೆಗಳ ಮೇಲೆ ಸಹಿ ಮಾಡುತ್ತಿದ್ದೇನೆ ಎಂಬುದನ್ನು ಅರಿಯುವಂತಾಗಬೇಕು ಎಂದರು.
ವಕೀಲ ಮಲ್ಲಿಕಾರ್ಜುನ ಹೊನಗುಂಟಿ ಮಾತನಾಡಿ, ನಗರದಲ್ಲಿ ರಸ್ತೆಗಳು ಸರಿಯಿಲ್ಲ. ರಸ್ತೆ ದಿಣ್ಣೆಗಳು ವೈಜ್ಞಾನಿಕವಾಗಿಲ್ಲ. ರಸ್ತೆಗಳಿಗೆ ಸುರಕ್ಷತಾ ಫಲಕ ಅಳವಡಿಸಿಲ್ಲ. ಬೈಕ್‌ಗಳ ಮೇಲೆ ಮೂರ್ನಾಲ್ಕು ಜನರು ಕುಳಿತು ಹೋಗುತ್ತಿದ್ದರೂ ಯಾರೂ ಕೇಳುವವರಿಲ್ಲ. ಅಸಮಾಧಾನ ವ್ಯಕ್ತಪಡಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕಿ ಅಂಜನಾದೇವಿ ಆರ್., ವಕೀಲರಾದ ಸಂಗೀತಾ ಭದ್ರಶೆಟ್ಟಿ ಮಾತನಾಡಿದರು. ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಗಂಗಾಧರ ಸಾಲಿಮಠ, ಮಾಜಿ ಅಧ್ಯಕ್ಷ ಗಿರಿಧರ ವೈಷ್ಣವ, ಎಸಿಸಿ ಕಂಪನಿ ನಿರ್ದೇಶಕ ಸೀತಾರಾಮುಲು, ಎಚ್‌ಆರ್ ವಿಭಾಗದ ಮುಖ್ಯ ವ್ಯವಸ್ಥಾಪಕ ನಾಗೇಶ್ವರರಾವ್ ಟೆನ್ನಟ, ಸಿಪಿಐ ಕೃಷ್ಣಪ್ಪ ಕಲ್ಲೆದೇವರು, ಪಿಎಸ್‌ಐ ವಿಜಯಕುಮಾರ ಭಾವಗಿ, ಕ್ರೈಂ ಪಿಎಸ್‌ಐ ತಿರುಮಲೇಶ, ಕಾರ್ಮಿಕ ಸಂಘದ ಉಪಾಧ್ಯಕ್ಷ ರಮೇಶ ಕಾರಬಾರಿ, ತುಕಾರಾಮ ರಾಠೊಡ, ಸಫಿಸಾಹೇಬ್ ಬನಾಡ, ಪೆದ್ದಣ್ಣ ಬಿಡಾಳ, ರಮೇಶ ಮುದುಕುಡಿ, ಲಕ್ಷ್ಮೀಕಾಂತ ಬಿರಾದಾರ, ಕಾಶೀನಾಥ ಹಿಂದಿನಕೇರಿ, ಪ್ರೀತಿ ಜೈನ್, ಕವಿತಾ ಜೋಶಿ ಪಾಲ್ಗೊಂಡಿದ್ದರು. ಶ್ರೀಕಾಂತ ಕುಲಕರ್ಣಿ ನಿರೂಪಿಸಿದರು, ಎಸಿಸಿ ಎಚ್‌ಆರ್ ಸಹಾಯಕ ವ್ಯವಸ್ಥಾಪಕ ಯತೀಶ ರಾಜಶೇಖರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.