ಪಾಳು ಬಿದ್ದಿವೆ ರಂಗಮಂದಿರ-ಶಾಪಿಂಗ್ ಕಾಂಪ್ಲೆಕ್ಸ್
Team Udayavani, May 16, 2022, 12:22 PM IST
ಚಿಂಚೋಳಿ: ಪಟ್ಟಣದಲ್ಲಿ ನಿರ್ಮಿಸುತ್ತಿರುವ ರಂಗಮಂದಿರ (ಟೌನ್‌ಹಾಲ್), ಶಾಪಿಂಗ್ ಕಾಂಪ್ಲೆಕ್ ಕಟ್ಟಡ ಮತ್ತು ಚರಂಡಿ, ಪುಟಪಾತ್ ಕಾಮಗಾರಿಗಳು ಪ್ರಗತಿ ಕಾಣದೇ ಸಾಮೂಹಿಕ ಶೌಚಾಲಯಗಳಾಗಿ ಪರಿವರ್ತನೆಯಾಗಿವೆ.
ಪಟ್ಟಣದ ಡಾ| ಬಿ.ಆರ್.ಅಂಬೇಡ್ಕರ್ ಕ್ರಾಸ್ ಹತ್ತಿರದ ಸರ್ಕಾರಿ ಸಾರ್ವಜನಿಕ ಆಸ್ಪತೆಯ ಹಳೆ ಕಟ್ಟಡ ನೆಲಸಮಗೊಳಿಸಿ ಸಾಂಸ್ಕೃತಿಕ ಕಾರ್ಯಕ್ರಮ, ರಸಮಂಜರಿ, ಸಂಗೀತೋತ್ಸವ, ಸಾರ್ವಜನಿಕರ ಸಭೆ-ಸಮಾರಂಭ, ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ರಂಗಮಂದಿರ ಮತ್ತು ವ್ಯಾಪಾರ ವಹಿವಾಟು ನಡೆಸಲು, ವ್ಯಾಪಾರಸ್ಥರಿಗೆ ಕಡಿಮೆ ಬಾಡಿಗೆಗೆ ನೀಡಲು ನಿರ್ಮಿಸಲಾಗುತ್ತಿರುವ ಶಾಪಿಂಗ್ ಕಾಂಪ್ಲೆಕ್ಸ್‌ಗಳ ಕಾಮಗಾರಿ ಪ್ರಗತಿ ಕಾಣದೇ ಸಾರ್ವಜನಿಕ ಶೌಚಾಲಯದಂತೆ ಆಗಿವೆ.
2013-18ರಿಂದ ಚಿಂಚೋಳಿ ಶಾಸಕರಾಗಿದ್ದ ಕಲಬುರಗಿ ಸಂಸದ ಡಾ| ಉಮೇಶ ಜಾಧವ ಎಚ್‌ಕೆಆರ್‌ಡಿಬಿಯ 2015-16 ಮ್ಯಾಕ್ರೋ ಯೋಜನೆ (ನೆಮ್ಮದಿ ಊರು) ಅಡಿಯಲ್ಲಿ ರಂಗ ಮಂದಿರ ನಿರ್ಮಾಣಕ್ಕೆ 199 ಲಕ್ಷ ರೂ., ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಡಕ್ಕಾಗಿ 199.8ಲಕ್ಷ ರೂ. ಮಂಜೂರಿ ಮಾಡಿದ್ದರು. ಈ ಎರಡು ಕಟ್ಟಡಗಳ ಕಾಮಗಾರಿಗಳನ್ನು ಗುತ್ತಿಗೆ ಪಡೆದಿರುವ ಕರ್ನಾಟಕ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮ ಕಾಮಗಾರಿಯನ್ನು ವಿವಿಧ ಹಂತಗಳಲ್ಲಿ ಕೆಲಸ ಪ್ರಾರಂಭಿಸಿ ನಂತರ ಸ್ಥಗಿತಗೊಳಿಸಿದೆ.
ರಂಗಮಂದಿರ, ಶಾಪಿಂಗ್ ಕಾಂಪ್ಲೆಕ್ಸ್, ಚರಂಡಿ, ಪುಟಪಾತ್ ನಿರ್ಮಾಣಕ್ಕಾಗಿ ಒಟ್ಟು 5.20ಕೋಟಿ ರೂ. ಅನುದಾನ ಮಂಜೂರಿಯಾಗಿದೆ. ಕಾಮಗಾರಿ ಪ್ರಾರಂಭಿಸುವುದಕ್ಕಾಗಿ ನಿಗಮಕ್ಕೆ 4.16ಕೋಟಿ ರೂ.ನೀಡಲಾಗಿದೆ. ನಿಗಮವು ಕಾಮಗಾರಿಗಾಗಿ ಒಟ್ಟು 3.54 ಕೋಟಿ ರೂ. ಖರ್ಚು ಮಾಡಿದೆ. ಪಟ್ಟಣದ ಹಳೆ ಆಸ್ಪತ್ರೆ ಸ್ಥಳದಲ್ಲಿ ನಿರ್ಮಿಸುತ್ತಿರುವ ರಂಗಮಂದಿರ ಮತ್ತು ಶಾಪಿಂಗ್ ಕಾಂಪ್ಲೆಕ್ಸ್ ಪ್ರತಿಯನ್ನು ಶಾಸಕ ಡಾ| ಅವಿನಾಶ ಜಾಧವ ಒಮ್ಮೆಯೂ ಪರಿಶೀಲಿಸಿಲ್ಲ ಎಂದು ಪುರಸಭೆ ಮಾಜಿ ಸದಸ್ಯ ಭೀಮರಾವ್ ಮರಾಠ ಬೇಸರ ವ್ಯಕ್ತಪಡಿಸಿದ್ದಾರೆ.
ಚಂದಾಪುರ ನಗರದ ಗಾಂಧಿ ಚೌಕ್‌ನಿಂದ ತಾಂಡೂರ ಕ್ರಾಸ್‌ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ಮತ್ತು ಪುಟಪಾತ್ ನಿರ್ಮಿಸಲು 122ಲಕ್ಷ ರೂ. ಅನುದಾನವನ್ನು ನಿಗಮಕ್ಕೆ ನೀಡಲಾಗಿದೆ. ಆದರೆ ಚರಂಡಿ ಮತ್ತು ಪುಟಪಾತ್ ಕಾಮಗಾರಿಗಳು ಇನ್ನು ಪೂರ್ಣವಾಗಿಲ್ಲ. ಕೆಲವು ಕಡೆಗಳಲ್ಲಿ ಕಳಪೆಮಟ್ಟದಿಂದ ನಿರ್ಮಿಸಿದ ಪುಟಪಾತ್, ಚರಂಡಿ ಹದಗೆಟ್ಟು ಹೋಗಿವೆ.
ರಂಗಮಂದಿರ ಮತ್ತು ಶಾಪಿಂಗ್ ಕ್ಲಾಂಪ್ಲೆಕ್ಸ್, ಚರಂಡಿ, ಪುಟ್‌ಪಾತ್ ಕಾಮಗಾರಿಗಳೆಲ್ಲ ಜಿಲ್ಲಾಧಿಕಾರಿಗಳ ಆಧೀನದಲ್ಲಿ ಇರುತ್ತವೆ. ಕೆಲಸ ಪ್ರಾರಂಭಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರ ನೀಡಲಾಗಿದೆ. ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಮಂಡಳಿ ಜಿಲ್ಲಾಧಿಕಾರಿಗಳ ಆಧೀನದಲ್ಲಿ ಇರುವುದರಿಂದ ಬಹುತೇಕ ಕುಂಠಿತಗೊಂಡಿರುವ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಲ್ಯಾಂಡ್ ಆರ್ಮಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಲಾಗುವುದು. -ಡಾ| ಅವಿನಾಶ ಜಾಧವಶಾಮರಾವ ಚಿಂಚೋಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.