ಶರಣನ ಸಂಸಾನದ ಶೈಕಣಿಕ ದಾಸೋಹ ಅನನ್ಯ
Team Udayavani, Jul 10, 2017, 11:59 AM IST
ಕಲಬುರಗಿ: ಪ್ರತಿ ವರ್ಷ 25 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೊರಹೊಮ್ಮುತ್ತಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅದರಲ್ಲೂ ಸಂಘದ ಅಧ್ಯಕ್ಷರೂ ಆಗಿರುವ ಡಾ| ಶರಣಬಸವಪ್ಪ ಅಪ್ಪ ಅವರ ಶೈಕ್ಷಣಿಕ ದಾಸೋಹ ಅನನ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರ ಹೇಳಿದರು.
ಸಂಘದ ಅಪ್ಪಾ ಶತಮಾನೋತ್ಸವ ಸಭಾಂಗಣದಲ್ಲಿ ರವಿವಾರ ನಡೆದಶರಣಬಸವೇಶ್ವರ ವಸತಿ ಶಾಲೆ ಹಾಗೂ ಕಾಲೇಜಿನ
ಮಿನಿ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ವೈದ್ಯಕೀಯವೊಂದನ್ನು ಬಿಟ್ಟು ಶಿಕ್ಷಣ ಕ್ಷೇತ್ರದ ಎಲ್ಲ ಕೋರ್ಸ್‌ಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವುದು ಸಣ್ಣದಲ್ಲ. ಶರಣರು ಈ ಹಿಂದೆ ಅನ್ನದಾಸೋಹಗೈದರೆ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅವರು ಅಕ್ಷರ ದಾಸೋಹ ಸೂತ್ರ ಅಳವಡಿಸಿಕೊಂಡಿರುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಹೈದ್ರಾಬಾದ್ ಕರ್ನಾಟಕ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ| ಅಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕುವುದು ಹೆಚ್ಚು ಸಮಂಜಸವಾಗಿದೆ. ಈ ನಿಟ್ಟಿನಲ್ಲಿ ತಾವು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಮಟ್ಟೂರ ಅವರು ಹೇಳಿದರು.
ಸತ್ಕಾರ: ನೀಟ್, ಜೆಇಇ, ಕೆ-ಸೆಟ್ ಹಾಗೂ ಪಿಯುಸಿಯಲ್ಲಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಪ್ರಮುಖವಾಗಿ ನೀಟ್‌ನಲ್ಲಿ ರಾಜ್ಯಕ್ಕೆ 41ನೇ ರ್‍ಯಾಂಕ್ ಪಡೆದ
ಸಂತೋಷಿ ಕೋರವಾರಗೆ ಲಕ್ಷ ರೂ. ಪ್ರೋತ್ಸಾಹ ಧನದೊಂದಿಗೆ ಸನ್ಮಾನಿಸಿದ್ದು ವಿಶೇಷವಾಗಿತ್ತು. ಅದೇ ರೀತಿ ನೀಟ್‌ನಲ್ಲಿ 352ನೇ ರ್‍ಯಾಂಕ್ ಹಾಗೂ ಪಿಯುನಲ್ಲಿ ನಾಲ್ಕು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದ ಮನೋಜ ಟಿ., 561ನೇ ರ್‍ಯಾಂಕ್
ಶರಣಪ್ರಸಾದ ಕೋಲಾರ, 581ನೇ ರ್‍ಯಾಂಕ್ ಪಡೆದ ಅಖೀಲೇಷ, ಜೆಇಇ ಅಡ್ವಾನ್ಸ್‌ದಲ್ಲಿ ರ್‍ಯಾಂಕ್ ಪಡೆದ ಮನೋಜ ರಾಠೊಡ, ಜ್ಯೋರ್ತಿಲಿಂಗ ಜತೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್ ಪಡೆದ ಶ್ರೀರಕ್ಷಾ ಅವಧಾನಿ, ಮೊಹಮ್ಮದ್
ಅದ್ನಾನ್ ಇಡ್ರೇಸ್, ಕಾರ್ತಿಕ ಶೆಟ್ಟರ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯಾಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿ, ಡಾ| ಅಪ್ಪ ಅವರು ದೂರದೃಷ್ಟಿ ಹಾಗೂ ನಿಷ್ಠುರ ಹಾದಿಯಲ್ಲಿ ಸಂಸ್ಥೆ ಮುನ್ನಡೆಸಿದ್ದರಿಂದ ಸಂಸ್ಥೆ ಈಗ ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ರಾಜ್ಯದ ಪ್ರತಿಷ್ಠಿತ ಪಬ್ಲಿಕ್ ಶಾಲೆಗಳಲ್ಲಿ ತಮ್ಮದು ಮೊದಲನೆಯದಾಗಿ ನಿಲ್ಲುವುದರಲ್ಲಿ ಎಲ್ಲರ ಪರಿಶ್ರಮ ಅಡಗಿದೆ ಎಂದು ಹೇಳಿದರು.
ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಡೀನ್ ಡಾ| ಶರಣಬಸಪ್ಪ ಹರವಾಳ ಸಹ ಅತಿಥಿಗಳಾಗಿ ಮಾತನಾಡಿ, ಒಂದು ಔಷಧಿಯಿಂದ ಹೇಗೆ ರೋಗಿಯನ್ನು ಗುಣಪಡಿಸಲಾಗುತ್ತದೆಯೋ ಅದೇ ರೀತಿ ಸಮಾಜದಲ್ಲಿ ಒಂದು ಉನ್ನತ ಹುದ್ದೇಗೇರಿಸಿ ಸಮಾಜದ ನ್ಯೂನತೆ ಸರಿಪಡಿಸಲು ತಾವೆಲ್ಲ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇಎಸ್‌ಐ ವೈದ್ಯಕೀಯ ಕಾಲೇಜಿನ ಡೀನ್ ಡಾ| ನಾಗರಾಜ, ಗುಲಬರ್ಗಾ ವೈದ್ಯಕೀಯ ಸಂಸ್ಥೆ ಪ್ರಿನ್ಸಿಪಾಲ್ ಡಾ| ಉಮೇಶ ಎಸ್.ಆರ್. ಗೌರವ ಅತಿಥಿಗಳಾಗಿ
ಆಗಮಿಸಿದ್ದರು. ಪ್ರಾಚಾರ್ಯರಾದ ರಾಮಕೃಷ್ಣರೆಡ್ಡಿ ಇದ್ದರು. ಉಪನ್ಯಾಸಕ ಶಂಕರಗೌಡ ಹೊಸಮನಿ ನಿರೂಪಿಸಿದರು.
ಯುಪಿಎಸ್ಸಿ ರ್‍ಯಾಂಕ್ ವಿಜೇತರಿಗೆ ವಿಶೇಷ ಸತ್ಕಾರ ಮಿನಿ ಘಟಿಕೋತ್ಸವದಲ್ಲಿ ಪ್ರಸಕ್ತವಾಗಿ ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ದೇಶಕ್ಕೆ 25ನೇ ರ್‍ಯಾಂಕ್ ಪಡೆದ ಎಸ್‌ಬಿಆರ್‌ನ ಹಿಂದಿನ ವಿದ್ಯಾರ್ಥಿಗಳಾದ ಶೇಖ್ ತನ್ವೀರ್ ಆಸೀಫ್ ಹಾಗೂ 376ನೇ ರ್‍ಯಾಂಕ್ ಪಡೆದ ಅಮರೇಶ್ವರ ಪಾಟೀಲ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಸನ್ಮಾನಿತಗೊಂಡು ಮಾತನಾಡಿದ ಶೇಖ್ ತನ್ವಿರ್ ಆಸೀಫ್, ಅಮರೇಶ್ವರ ಪಾಟೀಲ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತಡ ಇದ್ದೇ ಇರುತ್ತದೆ. ಆದರೆ ಕಠಿಣ ಪರಿಶ್ರಮ ಹಾಗೂ ಪ್ರಮುಖವಾಗಿ ಮನಸ್ಸಿನೊಳಗೆ ಮಾಡುವ ಛಲಗಾರಿಕೆ ಇದ್ದಲ್ಲಿ ಸುಲಭವಾಗಿ ಎದುರಿಸಬಹುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು
Bajpe: ಕೆಂಜಾರು ಹಾಸ್ಟೆಲ್ ಕೊಳಚೆ ನೀರು ಖಾಸಗಿ ಜಾಗಕ್ಕೆ; ಸುತ್ತಮುತ್ತ ದುರ್ವಾಸನೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.