ಶಿವಯೋಗಿ ಧ್ಯಾನ ಮಂದಿರ ಉದ್ಘಾಟನೆ
Team Udayavani, Apr 12, 2018, 10:28 AM IST
ಕಾಳಗಿ: ಮನುಷ್ಯನ ಜೀವನದಲ್ಲಿ ಮಾನಸಿಕ ನೆಮ್ಮದಿ, ಸುಖ, ಶಾಂತಿ, ಆತ್ಮವಿಶ್ವಾಸ ತುಂಬಿ ತುಳಕಬೇಕಾದರೆ ಅದು ಧ್ಯಾನದಿಂದ ಮಾತ್ರ ಸಾಧ್ಯ. ಧ್ಯಾನ ಮಾಡುವುದರಿಂದ ಮನುಷ್ಯ ಶಿವನಾಗುತ್ತಾನೆ ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು.
ತಾಲೂಕಿನ ಚಿಂಚೋಳಿ(ಎಚ್) ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿಜ ಲಿಂಗೈಕ್ಯ ಶ್ರೀ ಗುರು ಸಿದ್ಧಲಿಂಗ ಶಿವಯೋಗಿಗಳ ಅಮೃತ ಶಿಲೆಯ ಮೂರ್ತಿಪ್ರತಿಷ್ಠಾಪನೆ ಹಾಗೂ ಧ್ಯಾನ ಮಂದಿರ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಧ್ಯಾನದಲ್ಲಿ ಅದ್ಭುತ ಶಕ್ತಿಯಿದ್ದು, ಇದರಿಂದ ಎಲ್ಲವನ್ನು ಸಾಧಿ ಸಬಹುದಾಗಿದೆ. ವೇದ ಉಪನಿಷತ್ತುಗಳನ್ನು ಪಡೆಯಬೇಕಾದರೆ ಧ್ಯಾನ ಅತ್ಯವಶ್ಯಕ. ಮನುಷ್ಯ ವಿಚಾರಗಳೇ ಅವನ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ. ಆದ್ದರಿಂದ ಒಳ್ಳೆಯ ವಿಚಾರಗಳನ್ನೇ ಸ್ಮರಿಸಿಕೊಂಡು ಗುರುವಿನ ಧ್ಯಾನದಲ್ಲಿ ಭಾಗಿಯಾದಾಗ ಜೀವನದಲ್ಲಿ ಮುಕ್ತಿ ಸಿಗುತ್ತದೆ ಎಂದರು.
ಹಾರಕೂಡ ಶಿವಾಚಾರ್ಯ ರತ್ನ ಡಾ| ಚನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಭರತನೂರಿನ ಪೂಜ್ಯ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಮುಗಳನಾಗಾವಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಚಿಂಚನಸೂರ ಪೂಜ್ಯ ಸಿದ್ಧಮಲ್ಲ ಶಿವಾಚಾರ್ಯರು, ಬೆಳಗುಂಪಾದ ಗಂಗಾಧರ ದೇವರು ಆರ್ಶೀವಚನ ನೀಡಿದರು.
ಇದಕ್ಕೂ ಮುನ್ನ ಶ್ರೀಶೈಲ ಜಗದ್ಗುರು ಡಾ| ಚನ್ನ ಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರನ್ನು ಅಪಾರ ಭಕ್ತ ಸಮೂಹ ಕುಂಭ, ಕಳಸ, ಭಜನೆ, ಡೊಳ್ಳು, ಭಾಜಾ, ಜಂತ್ರಿಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೂಲಕ ಮೆರವಣಿಗೆ ಮಾಡಲಾಯಿತು.
ತಾಪಂ ಮಾಜಿ ಅಧ್ಯಕ್ಷ ರೇವಣಸಿದ್ಧಪ್ಪ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸುನೀಲ ವಲ್ಲಾಖಾಪುರೆ, ಜಿಪಂ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ತಾಪಂ ಸದಸ್ಯ ಭೀಮು ರಾಠೊಡ, ಮಲ್ಲಿಕಾರ್ಜುನ ಶಿವಗೋಳ, ಶಿವಕಾಂತ ಮಹಾಜನ, ಜಗನ್ನಾಥ ಟೆಂಗಳಿ, ಚಂದ್ರಶೇಖರ ಟೆಂಗಳಿ, ಬಸವರಾಜ ಆರ್., ಶ್ರೀಕಾಂತ ತೆಂಗಳಿ, ಗುಂಡು ಪಂಗರಿಗಿ, ನಾಗರಾಜ ಸಲಗರ, ಅಶೋಕ ಹೂಗೊಂಡ, ಮಲ್ಲು ತೇಲಿ, ಚಂದ್ರಕಾಂತ ಮಾಹಗಾಂವ, ಮಾಹನಿಂಗಪ್ಪ ಮಂಗಲಗಿ, ಸೂರ್ಯಕಾಂತ ಕೊಟಗಿಮನೆ, ಅಣ್ಣಪ್ಪ ಸಲಗಾರ ಇದ್ದರು.
ಗವಾಯಿ ರಾಮಲಿಂಗಯ್ಯಸ್ವಾಮಿ ಗೌಡಗಾಂವ, ಸಿದ್ಧಣ್ಣ ಹಿರೇಜೇವರ್ಗಿ ತಬಲಾ ವಾದಕ ಸಂಗೀತ ಸೇವೆ ಸಲ್ಲಿಸಿದರು. ವೇ. ಮೂ. ಮಲ್ಲಿಕಾರ್ಜುನ ಶಾಸ್ತ್ರಿ ನಿರೂಪಿಸಿದರು, ಗುರುನಂಜೇಶ್ವರ ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.