ಸಾರಿಗೆ ಸಂಸ್ಥೆ ಉಳಿವಿಗೆ ಸಹಕಾರ ಅಗತ್ಯ
Team Udayavani, Mar 5, 2018, 11:00 AM IST
ಅಫಜಲಪುರ: ಸರ್ಕಾರಿ ಸಾರಿಗೆ ಸಂಸ್ಥೆ ಉಳಿಯಬೇಕಾದರೆ ಜನರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು. ತಾಲೂಕಿನ ಪ್ರಮುಖ ಕೇಂದ್ರವಾದ ಚವಡಾಪುರದಲ್ಲಿ ವಿಶೇಷ ಅಭಿವೃದ್ಧಿ ಯೋಜನೆ ಅಡಿ 1.70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅಫಜಲಪುರ ಬಸ್ ಘಟಕ ಅತಿ ಹೆಚ್ಚು ಆದಾಯ ತಂದು ಕೊಡುತ್ತಿದೆ. ವಾರ್ಷಿಕ ಅಂದಾಜು 2 ಕೋಟಿ ರೂ. ಆದಾಯ ಬರುತ್ತಿದೆ. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಅಫಜಲಪುರ ಬಸ್ ಘಟಕಕ್ಕೆ ವಿಶೇಷ ಮಾನ್ಯತೆ ಇದೆ. ಬರುವ ದಿನಗಳಲ್ಲಿ ತಾಲೂಕಿನ ಪ್ರಮುಖ ಕೇಂದ್ರಗಳಾದ ಮಾಶಾಳ ಮತ್ತು ಕರ್ಜಗಿ ಬಸ್ ನಿಲ್ದಾಣ ಮೇಲ್ದರ್ಜೆಗೇರಿಸಲಾಗುವುದು. ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಹೀಗಾಗಿ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಬಗ್ಗೆ ಚಿಂತಿಸಲಾಗಿತ್ತು ಎಂದ ಅವರು, ಪ್ರಯಾಣಿಕರು ನೂತನ ಬಸ್ ನಿಲ್ದಾಣ ಸರ್ಕಾರದ್ದು ಎಂದು ಭಾವಿಸಬಾರದು. ಜನರ ತೆರಿಗೆ ಹಣದಿಂದ ನಿಲ್ದಾಣ ನಿರ್ಮಿಸಲಾಗಿದೆ. ಹಿಗಾಗಿ ಎಲ್ಲರೂ ಸ್ವತ್ಛತೆ ಕಾಪಾಡಬೇಕು. ಅಫಜಲಪುರ ಬಸ್ ಘಟಕಕ್ಕೆ 5 ಹೊಸ ಬಸ್ ನೀಡಲಾಗಿದೆ ಎಂದು ಹೇಳಿದರು.
ಅಫಜಲಪುರ ತಾಲೂಕು ಬಹಳ ದೊಡ್ಡ ತಾಲೂಕು ಆಗಿದೆ. ನಮ್ಮ ತಾಲೂಕಿನಲ್ಲಿ ಹೊಸ ತಾಲೂಕು ಆಗುವಲ್ಲಿ ಚವಡಾಪುರ ಕೂಡ ಒಂದಾಗಿದೆ. ಬರುವ ದಿನಗಳಲ್ಲಿ ಚವಡಾಪುರ ತಾಲೂಕು ಕೇಂದ್ರವಾಗಿಸಲಾಗುತ್ತದೆ ಎಂದು ಹೇಳಿದರು. ವಿಭಾಗಿಯ ನಿಯಂತ್ರಣಾಧಿಕಾರಿ ಎ.ಎಚ್. ನಾಗೇಶ ಮಾತನಾಡಿ, ಅಫಜಲಪುರ ಘಟಕದಿಂದ ನಿತ್ಯ 216 ಬಸ್ ಗಳು ಸಂಚರಿಸುತ್ತಿವೆ. ಸರಾಸರಿ 60 ಸಾವಿರ ಜನರು ಪ್ರಯಾಣಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷೆ ಪಾರ್ವತಿ ರಾಠೊಡ, ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ, ಜಿಪಂ ಉಪಾದ್ಯಕ್ಷೆ ಶೋಭಾ ಶಿರಸಗಿ, ಎಪಿಎಂಸಿ ಅಧ್ಯಕ್ಷ ಶಂಕರಲಿಂಗ ಮೇತ್ರಿ, ಪ್ರಮುಖರಾದ ಮಹಾದೇವ ಗುತ್ತೇದಾರ, ಮಲ್ಲಿನಾಥ ಪಾಟೀಲ, ಶಿವಪುತ್ರಪ್ಪ ಕರೂರ, ಬಿ.ವೈ. ಪಾಟೀಲ, ಪಾಶಾ ಮಣೂರ, ಬಸವರಾಜ ಸಪ್ಪನಗೋಳ, ಸಾವಿರಪ್ಪ ಪೂಜಾರಿ, ಸುಭಾಷ ರಾಠೊಡ, ಮುಖ್ಯ ಅಭಿಯಂತರ ಪಿ. ಮೂರ್ತಿ, ಕಾರ್ಯನಿರ್ವಾಹಕ ಅಭಿಯಂತರ ಮೈಬೂಬಸಾಬ್, ಘಟಕ ವ್ಯವಸ್ಥಾಪಕ ಗೋಪಾಲ ಕುಲಕರ್ಣಿ, ಡಿಟಿಒ ಶ್ರೀಧರ ಕುಲಕರ್ಣಿ, ಡಿಎಂಇ ಕಮ್ಮೂರ, ಎಇಇ ಎಂ.ಡಿ. ಸುಂಕದ, ಗುತ್ತಿಗೆದಾರ ಯಲ್ಲಪ್ಪಗೌಡ ಕುಲಕರ್ಣಿ, ಪಿ ಸಂಜೀವರೆಡ್ಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.