ಹಳ್ಳಿ ಜನರ ಜ್ವರಕ್ಕೆ ಸಿಗುತ್ತಿಲ್ಲ ಮಾತ್ರೆ
Team Udayavani, Mar 22, 2018, 12:16 PM IST
ವಾಡಿ: ಆರೋಗ್ಯ ಸೇವೆ ಎಂಬುದು ಕೇವಲ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಸೀಮಿತವಾಗಿದೆ. ಗ್ರಾಮೀಣ ಭಾಗದಲ್ಲಿ ಜನರ ಜ್ವರಕ್ಕೆ ಮಾತ್ರೆಗಳು ಸಿಗಲಾರದ ಪರಿಸ್ಥಿತಿಯಿದೆ ಎಂದು ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಕಳವಳ ವ್ಯಕ್ತಪಡಿಸಿದರು.
ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮ ದಿನ ನಿಮಿತ್ತ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ತಾಲೂಕು ಘಟಕ, ರಾವೂರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅನುಗ್ರಹ ಆಸ್ಪತ್ರೆ ಕಲಬುರಗಿ ಇವುಗಳ ಸಹಯೋಗದಡಿ ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಏರ್ಪಡಿಸಲಾಗಿದ್ದ ಉಚಿತ ನೇತ್ರ ಶಿಬಿರ ಹಾಗೂ ಸಿದ್ಧ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಯಾನಕ ರೋಗಗಳಿಂದ ಬಳಲುವ ಗ್ರಾಮೀಣ ಜನರ ಪಾಲಿಗೆ ಆರೋಗ್ಯ ಸೇವೆ ಎಂಬುದು ಗಗನಕುಸುಮವಾಗಿದೆ.
ಆರೋಗ್ಯ ಶಿಬಿರಗಳು ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ನಡೆಯಬೇಕು. ಪ್ರಶಸ್ತಿ ಮತ್ತು ಸನ್ಮಾನಗಳಿಗೆ ಭಾಜನರಾದವರು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದರು.
ಮಕ್ಕಳು ಚೈತನ್ಯಶೀಲರಾಗಿರಲು ಬೆಳಗ್ಗೆ ಯೋಗ ಶಿಕ್ಷಣದ ಮೂಲಕ ಶಾಲೆಗಳು ಆರಂಭಗೊಳ್ಳಬೇಕು. ರಾವೂರ ಸಚ್ಚಿದಾನಂದ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸುವ ವಿಶಿಷ್ಠ ಮಲ್ಲಗಂಬ ಕ್ರೀಡೆ ರಾಜ್ಯದ ಜನರ ಗಮನ ಸೆಳೆದಿದೆ ಎಂದು ಪ್ರಸಂಶೆ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿ ಅನ್ನ ಮತ್ತು ಅಕ್ಷರ ದಾಸೋಹಿಗಳಾಗಿದ್ದಾರೆ. ಅವರ ಸಾರ್ಥಕ ಬದುಕು ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದರು.
ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ತಾಲೂಕು ವೈದ್ಯಾಧಿಕಾರಿ ಡಾ| ಸುರೇಶ ಮೇಕಿನ್, ವೀರಶೈವ ಸಮಾಜದ ತಾಲೂಕು ಉಪಾಧ್ಯಕ್ಷ ಶಿವಲಿಂಗಪ್ಪ ವಾಡೇದ, ಡಾ| ಶಿವಶರಣಪ್ಪ ಕಾಶೆಟ್ಟಿ, ಡಾ| ಅಮೃತಾ ಕುಲಕರ್ಣಿ, ಗ್ರಾಪಂ ಸದಸ್ಯ ಗೋವಿಂದ ಸಗರ, ಮುಖಂಡರಾದ ಡಾ| ಗುಂಡಣ್ಣ ಬಾಳಿ, ವಿಜಯರೆಡ್ಡಿ ಮಾಲಿಪಾಟೀಲ, ಅಣ್ಣಾರಾವ ಬಾಳಿ ಪಾಲ್ಗೊಂಡಿದ್ದರು. ರಾಜಶೇಖರ ಗಡಗನ ವಚನ ಗೀತೆ ಹಾಡಿದರು. ವಚನ ಸಾಹಿತ್ಯ ಅಕಾಡೆಮಿ ತಾಲೂಕು ಅಧ್ಯಕ್ಷ ಸಿದ್ದಲಿಂಗ ಬಾಳಿ ಸ್ವಾಗತಿಸಿದರು, ಸುಗುಣಾ ಕೋಳಕೂರ, ಭುವನೇಶ್ವರಿ ನಿರೂಪಿಸಿದರು. ಶರಣು ಜ್ಯೋತಿ ವಂದಿಸಿದರು.
ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರಿಗೆ ಸಿದ್ಧ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಾಗರಾಜ ಸಾಲೊಳ್ಳಿ ಮಾಲಗತ್ತಿ (ಯೋಗ ಶಿಕ್ಷಣ), ಡಾ| ಮಲ್ಲಿನಾಥ ಎಸ್.ತಳವಾರ (ಸಾಹಿತ್ಯ), ಪ್ರಶಾಂತ ಪಾಟೀಲ (ಮಾಧ್ಯಮ), ಕಾಶಿನಾಥ ವಿ.ಬಿರಾದಾರ (ರಂಗಭೂಮಿ), ಅಮ್ಜಾದ್ ಹುಸೇನ ಉಲ್ಲಾಳ (ಸಂಪನ್ಮೂಲ) ಪ್ರಶಸ್ತಿ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.