ಲಂಚ-ಮಂಚ ಹೇಳಿಕೆಗೆ ಸಿಡಿದೆದ್ದ ಮಹಿಳೆಯರು
Team Udayavani, Aug 19, 2022, 4:44 PM IST
ಚಿತ್ತಾಪುರ: ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಅವರ “ಲಂಚ-ಮಂಚದ ಸರ್ಕಾರ’ ಎನ್ನುವ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿ, ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ಪಟ್ಟಣದ ಅಕ್ಕಮಹಾದೇವಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಚಿತ್ತಾವಲಿ ಚೌಕ್, ಜನತಾ ಬಜಾರ್, ಭುವನೇಶ್ವರ ಚೌಕ್, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಲಾಡ್ಜಿಂಗ್ ಕ್ರಾಸ್ ಮೂಲಕ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ಬರುತ್ತಿದ್ದಂತೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದು ಪ್ರತಿಭಟನೆಕಾರರನ್ನು ಬಂಧಿಸಿ, ಪೊಲೀಸ್ ವ್ಯಾನ್ ಹಾಗೂ ಜೀಪ್‌ಗ್ಳಲ್ಲಿ ಕರೆದೋಯ್ದದರು. ಶಾಸಕರ ಕಚೇರಿ ವರೆಗೆ ಪ್ರತಿಭಟನೆಕಾರರು ಹೋಗದಂತೆ ಪೊಲೀಸರು ತಡೆದರು.
ಅಕ್ಕಮಹಾದೇವಿ ಮಂದಿರ ಹತ್ತಿರದ ವೇದಿಕೆಯಲ್ಲಿ ಮಾತನಾಡಿದ ಮಹಿಳಾ ಪ್ರತಿಭಟನಾಕಾರರು, ಜನಪ್ರತಿನಿಧಿಗಳಾದವರು ತೂಕ ಮಾಡಿ ಮತ್ತು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು. ಸುಮ್ಮನೆ ಬಿಟ್ಟಿ ಪ್ರಚಾರ ಪಡೆಯಲು ಬಾಯಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ. ಈ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಕೂಡಲೇ ಪ್ರಿಯಾಂಕ್ ಖರ್ಗೆ ರಾಜ್ಯದ ಮಹಿಳೆಯರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಭಾರತ ದೇಶದಲ್ಲಿ ಮಹಿಳೆಯರನ್ನು ಪೂಜಿಸುವ ಸಂಸ್ಕೃತಿ ಇದೆ. ಇಂತಹ ಹೇಳಿಕೆಯಿಂದ ದೇಶದ ಮಹಿಳೆಯರಿಗೆ ಅವಮಾನವಾಗಿದೆ. ಮುಂದೆ ಚುನಾವಣೆಯಲ್ಲಿ ಪಾಠ ಕಲಿಸಲಾಗುವುದು ಎಂದು ಗುಡುಗಿದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ಅನಪೂರ, ರಾಜ್ಯ ಹಿಂದುಳಿದ ಘಟಕಗಳ ಕಾರ್ಯದರ್ಶಿ ಶೋಭಾ ಬಾಣಿ, ಜಿಲ್ಲಾಧ್ಯಕ್ಷೆ ಭಾಗೀರಥಿ ಗುನ್ನಾಪೂರ, ಸುಜ್ಞಾನಿ ಪೋತ್‌ದಾರ್, ಚಂದಮ್ಮ ಪಾಟೀಲ, ಶೋಭಾ ಬಾಗೇವಾಡಿ, ನಾಗುಬಾಯಿ ಜಿತುರೆ, ರೇಖಾ ತಳವಾರ ಮಾತನಾಡಿದರು.
ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಕವಿತಾ ಚವ್ಹಾಣ, ಇಂದ್ರಮ್ಮ ರೆಡ್ಡಿ, ಅಕ್ಕಮಹಾದೇವಿ, ಕಲಾವತಿ, ಹಣಮಂತಿ ಪವಾರ, ಚಂದ್ರಕಲಾ ಮೀಲಿಂದ್, ವೆಂಕಮ್ಮ ವಾಡಿ, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮನೋರ್, ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ, ವಿಠ್ಠಲ ನಾಯಕ, ಬಸವರಾಜ ಬೆಣ್ಣೂರಕರ್, ಅರವಿಂದ ಚವ್ಹಾಣ, ಮಣಿಕಂಠ ರಾಠೊಡ, ಸೋಮಶೇಖರ ಪಾಟೀಲ, ಆನಂದ ಪಾಟೀಲ ನರಬೋಳಿ, ನಾಗರಾಜ ಭಂಕಲಗಿ, ರಾಮದಾಸ ಚವ್ಹಾಣ, ಮಲ್ಲಿಕಾರ್ಜುನ ಪೂಜಾರಿ, ಮಹೇಶ ಬಟಗೇರಿ, ನಾಗರಾಜ ಹೂಗಾರ, ದೀಪಕ್ ಹೊಸ್ಸೂರಕರ್, ಶಿವಕುಮಾರ ಯಾಗಾಪುರ, ತಮ್ಮಣ್ಣ ಡಿಗ್ಗಿ, ಹಣಮಂತ ಬೆಂಕಿ, ಅಶ್ವತ್ಥ್ ರಾಠೊಡ, ತಾಲೂಕಾಧ್ಯಕ್ಷ ಪರ್ವತರೆಡ್ಡಿ ಪಾಟೀಲ, ಶಿವುಕುಮಾರ ಪಾಟೀಲ ತೇಲ್ಕೂರ, ನಾಗಪ್ಪ ಕೊಳ್ಳಿ, ಸತೀಶ ಪಾಟೀಲ ಇದ್ದರು.
ಡಿವೈಎಸ್ಪಿ ಕೆ. ಬಸವರಾಜ, ಶೀಲವಂತ ಹೊಸ್ಮನಿ, ಸಿಪಿಐಗಳಾದ ಪ್ರಕಾಶ ಯಾತನೂರ, ರಾಘವೇಂದ್ರ, ವಿನಾಯಕ, ಪಿಎಸ್‌ಐಗಳಾದ ಚೇತನ್, ಮಹಾಂತೇಶ ಪಾಟೀಲ, ವಿಜಯಕುಮಾರ, ಹುಲಿಯಪ್ಪ, ಇಂದುಮತಿ, ಶೀಲಾ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.