ಅಧಿಕಾರವಧಿಯಲ್ಲಿನ ಕಾರ್ಯವೇ ಶಾಶ್ವತ
Team Udayavani, Sep 16, 2017, 10:27 AM IST
ಶಹಾಬಾದ: ರಾಜಕೀಯ ಜೀವನದಲ್ಲಿ ಅಧಿಕಾರ ಶಾಶ್ವತವಲ್ಲ. ನಾವು ಮಾಡಿದ ಕಾರ್ಯವೇ ಶಾಶ್ವತ. ಇದಕ್ಕೆ ಕಾರ್ಮಿಕ ಸಚಿವರಾದ ಸಮಯದಲ್ಲಿ ದಿ| ಸಿ.ಗುರುನಾಥ ಮಾಡಿದ ಕೆಲಸವೇ ಇಂದು ಮೂರ್ತಿ ಅನಾವರಣ ಆಗಿರುವುದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಹೇಳಿದರು.
ಶುಕ್ರವಾರ ನಗರದ ಮಡ್ಡಿ ಬಡಾವಣೆ ಅಂಬೇಡ್ಕರ್ ಭವನದಲ್ಲಿ ಮಾಜಿ ಕಾರ್ಮಿಕ ಸಚಿವ ದಿ| ಸಿ.ಗುರುನಾಥ ಅವರ ಮೂರ್ತಿ
ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಸಮಸ್ಯೆಗಳನ್ನು ಹೊತ್ತು ಬಂದ ಕಾರ್ಮಿಕರಿಗೆ, ನೊಂದ ಜನರಿಗೆ ನ್ಯಾಯ ಒದಗಿಸುವ ನಾಯಕರಾಗಿದ್ದರು ಗುರುನಾಥ.
ಯಾವತ್ತಿಗೂ ಸುಳ್ಳು ಹೇಳಿದವರಲ್ಲ. ಕಾರ್ಮಿಕರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ದಿಟ್ಟವಾಗಿ ಮಾತನಾಡುವ ಎದೆಗಾರಿಕೆ ಅವರಲ್ಲಿತ್ತು. ಇಂದು ಮೂರ್ತಿ ಅನಾವರಣವಗಿದೆ ಎಂದರೆ ಅವರು ಮಾಡಿದ ಸಮಾಜಪರವಾದ ಕೆಲಸವೇ ಕಾರಣ ಎಂದರು.
ಮುಗುಳನಾಗಾವಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಬಡತನ ಬಂದಾಗ ಧ್ಯಾನ ಮಾಡಬೇಕು. ಸಿರಿತನ ಬಂದಾಗ ದಾನ ಮಾಡಬೇಕು. ಅಧಿಕಾರ ಬಂದಾಗ ಸೇವೆ ಮಾಡಬೇಕು. ಈ ನಿಟ್ಟಿನಲ್ಲಿ ಗುರುನಾಥ ತಮ್ಮ ಅಧಿಕಾರದ ಅವಧಿಯಲ್ಲಿ ನೊಂದವರಿಗೆ ನಂದಾ ದೀಪ, ದೀನದಲಿತರ, ದುಃಖೀತರ, ಶೋಷಿತರ ಸೇವೆ ಮಾಡಿದ್ದರು ಎಂದು ನುಡಿದರು.
ಗುರುನಾಥ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಗುಡಿಗುಂಡಾರ ನಿರ್ಮಿಸಲು ಅನೇಕ ಕಡೆಗಳಲ್ಲಿನ ಗ್ರಾಮಸ್ಥರು
ಮನವಿ ಮಾಡಿದ್ದಾಗ ಮುಲಾಜಿಲ್ಲದೇ ನಿರಾಕರಿಸಿದ್ದರು. ಅದರ ಬದಲು ಶಾಲಾ ಕಟ್ಟಡಗಳನ್ನು ಕಟ್ಟಿಸಿದರು. ಅವರು ವೈಚಾರಿಕತೆ ನೆಲೆಗಟ್ಟಿನ ಮೇಲೆ ತಮ್ಮ ಬದುಕು ಕಟ್ಟಿಕೊಂಡಿದ್ದರು ಎಂದರು.
ವರಜ್ಯೋತಿ ಭಂತೇಜಿ ಮಾತನಾಡಿ, ದುಡಿಮೆಯೇ ಧರ್ಮ ಎಂದು ಗುರುನಾಥ ನಂಬಿದ್ದರು. ಹಂಚಿಕೊಂಡು ತಿನ್ನುವ ಗುಣ ಅವರಲ್ಲಿತ್ತು. ಕಾರ್ಮಿಕ ಸಚಿವರಾದಾಗ ಅಸಂಘಟಿತ ಕಾರ್ಮಿಕರ ಕೂಲಿ ನಿಗದಿ, ಕಾನೂನುಗಳನ್ನು ರಚನೆ ಮಾಡಿ ತೋರಿಸಿದವರಲ್ಲಿ ಪ್ರಥಮರಾಗಿದ್ದರು. ಅವರು ತಮ್ಮ ಜೀವನದ ಕೊನೆ ಗಳಿಗೆಯವರೆಗೂ ಕಾರ್ಮಿಕರ ಹಿತಾಸಕ್ತಿಗಾಗಿ ಬದುಕಿದ್ದರು ಎಂದು ಹೇಳಿದರು.
ತೊನಸನಹಳ್ಳಿ(ಎಸ್)ನ ಮಲ್ಲಣಪ್ಪ ಸ್ವಾಮೀಜಿ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ಉದ್ಯಮಿ ಲಿಂಗಾರೆಡ್ಡಿ ಬಾಸರೆಡ್ಡಿ ಮಾತನಾಡಿದರು. ಮುಗುಳನಾಗಾವಿ ಜೇಮಸಿಂಗ್ ಮಹಾರಾಜರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಿಕಾ ಪರಮೇಶ್ವರ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಗೌತಮ ವೈಜನಾಥ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ಎಂ.ಎ. ರಶೀದ, ಜೆಡಿಎಸ್ ಗ್ರಾಮೀಣ ಕ್ಷೇತ್ರ ಅಧ್ಯಕ್ಷ ನಾಗರಾಜ ಸಿಂಗ್, ಉದ್ಯಮದಾರರಾದ ಅಣವೀರ ಇಂಗಿನಶೆಟ್ಟಿ, ಶಿವಕುಮಾರ ಇಂಗಿನಶೆಟ್ಟಿ, ನಗರಸಭೆ ಅಧ್ಯಕ್ಷೆ ಗೀತಾಸಾಹೇಬಗೌಡ ಬೋಗುಂಡಿ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ
ಕುಸಾಳೆ, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಚವ್ಹಾಣ, ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ, ಜೆಡಿಎಸ್ ಅಧ್ಯಕ್ಷ ರಾಜಮಹ್ಮದ್ ರಾಜಾ, ಮೂರ್ತಿ ಅನಾವರಣ ಸಮಿತಿ ಗೌರಾವಾಧ್ಯಕ್ಷ ಸುರೇಶ ಮೆಂಗನ್, ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಹಾಗೂ ಮತ್ತಿತರರು ಇದ್ದರು.
ಸಿ.ಗುರುನಾಥ ಅಭಿಮಾನಿಗಳ ಸಂಘದ ಅಧ್ಯಕ್ಷ ಗಿರೀಶ ಕಂಬಾನೂರ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥ ಹಡಪದ, ಗಿರಿಮಲ್ಲಪ್ಪ ವಳಸಂಗ ನಿರೂಪಿಸಿದರು, ರಾಜು ಕೋಬಾಳ ಮತ್ತು ಕೀರ್ತಿ ಪ್ರಾರ್ಥಿಸಿದರು, ಸುರೇಶ ಮೆಂಗನ ಪ್ರಾಸ್ತಾವಿಕ ಮಾತನಾಡಿದರು, ಲೋಹಿತ್ ಕಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.