ತೊಗರಿ ಬಂಪರ್ ಬೆಳೆ ಬಂದರೂ ಬೆಲೆ ಇಲ್ಲ
Team Udayavani, Jan 16, 2017, 3:45 AM IST
ಕಲಬುರಗಿ: ಕಳೆದ ವರ್ಷ ಭೀಕರ ಬರಗಾಲದಿಂದ ಇಳುವರಿ ಬಾರದೇ ಕಂಗಾಲಾಗಿದ್ದ ತೊಗರಿ ಬೆಳೆಗಾರರು ಈ ವರ್ಷ ಬಂಪರ್ ಇಳುವರಿ ತೆಗೆದಿದ್ದಾರೆ. ಆದರೆ ಸರ್ಕಾರದ ಬೆಂಬಲೆ ಬೆಲೆ ಹೊರತಾಗಿಯೂ ಸೂಕ್ತ ಬೆಲೆ ಸಿಗದೆ ಪರದಾಡುವಂತಾಗಿದೆ. ರೈತರ ನೆರವಿಗೆ ಬರಬೇಕಿದ್ದ ತೊಗರಿ ಕೇಂದ್ರಗಳು ನಾಮ್ ಕೆ ವಾಸ್ತೆ ಎನ್ನುವಂತಾಗಿವೆ.
ಬೆಲೆ ಕುಸಿತದಿಂತ ತೊಗರಿ ಬೆಳೆಗಾರರನ್ನು ರಕ್ಷಿಸುವ ಸಲುವಾಗಿ ಕೇಂದ್ರದ 5050 ರೂ. ಬೆಂಬಲ ಬೆಲೆಗೆ ರಾಜ್ಯ ಸರ್ಕಾರ 1000 ರೂ. ಪ್ರೋತ್ಸಾಹಧನ ನೀಡಬಹುದು ಎನ್ನುವ ನಿರೀಕ್ಷೆ ರೈತರಲ್ಲಿತ್ತು. 2014-15ರಲ್ಲಿ 750 ರೂ. ಪ್ರೋತ್ಸಾಹ ಧನ ನೀಡಿದ್ದ ರಾಜ್ಯ ಸರ್ಕಾರ ಈ ವರ್ಷ ಕೇವಲ 450 ರೂ. ನೀಡಿರುವುದರಿಂದ ಪ್ರೋತ್ಸಾಹ ಧನದಿಂದ ತೊಗರಿ ಬೆಳೆಗಾರರಿಗೆ ಪ್ರಯೋಜನವಿಲ್ಲದಂತಾಗಿದೆ.
ಎರಡು ವರ್ಷದ ಹಿಂದೆ ತೊಗರಿಗೆ ಮಾರುಕಟ್ಟೆಯಲ್ಲಿ 5200 – 5300 ರೂ. ಬೆಲೆ ಇತ್ತು. ಆಗ 4300 ರೂ. ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್‌ಗೆ 700 ರೂ. ಪ್ರೋತ್ಸಾಹ ಧನ ಸೇರಿಸಿ 5000 ರೂ.ನಂತೆ ಖರೀದಿಸುತ್ತಿತ್ತು. ಈ ವರ್ಷ 5050 ರೂ. ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನ 450 ರೂ. ಸೇರಿ 5500 ರೂ. ದರದಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಕೆಲ ಕಾರಣಗಳಿಂದ ಮಾರುಕಟ್ಟೆ ದರ 4300 ರೂ. ದಿಂದ 4700 ರೂ. ಬೆಲೆಯಲ್ಲಿಯೇ ತೊಗರಿ ಹೆಚ್ಚು ಮಾರಾಟವಾಗುತ್ತಿದೆ.
ನ್ಯಾಫೆಡ್ ಸಂಸ್ಥೆ ಕಳೆದ ಡಿಸೆಂಬರ್ ಮಾಸಾಂತ್ಯದಲ್ಲಿ ಜಿಲ್ಲೆಯ ಏಳು ಕಡೆ ಖರೀದಿ ಕೇಂದ್ರಗಳನ್ನು ತೆರೆದಿದೆ. ಇನ್ನೂ ಏಳು ಕಡೆ ಖರೀದಿ ಪ್ರಕ್ರಿಯೆ ಉಸ್ತುವಾರಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಗೆ ವಹಿಸಲಾಗಿದೆ.
ಮಹಾಮಂಡಳಿಯು ತಾಲೂಕು ಕೃಷಿ ಉತ್ಪನ್ನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿಎಪಿಸಿಎಂಎಸ್) ಮೂಲಕ ಖರೀದಿಸುತ್ತಿದೆ. ಎಲ್ಲಕ್ಕೂ ಮೊದಲೇ ತೊಗರಿ ಬೆಳೆಗಾರರ ನೆರವಿಗೆ ಬರಬೇಕಿದ್ದ ತೊಗರಿ ಅಭಿವೃದ್ಧಿ ಮಂಡಳಿ ಈಗ ಎಚ್ಚೆತ್ತು ಸೋಮವಾರದಿಂದ (ಜ. 16) ಖರೀದಿಗೆ ಮುಂದಾಗಿದೆ.
ರೈತರ ಸ್ಪಂದನೆ ಇಲ್ಲ;
ನ್ಯಾಫೆಡ್ ಹಾಗೂ ತೊಗರಿ ಮಂಡಳಿ ತೊಗರಿಯನ್ನು ಖರೀದಿಸುತ್ತಿದ್ದರೂ ತೊಗರಿ ಬೆಳೆಗಾರರು ಸ್ಪಂದಿಸುತ್ತಿಲ್ಲ. ನ್ಯಾಫೆಡ್ ಹಾಗೂ ಸಹಕಾರಿ ಸಂಘಗಳಲ್ಲಿನ ತೊಗರಿ ಖರೀದಿ ಕೇಂದ್ರಗಳಲ್ಲಿ ಸಾಮಾನ್ಯ ರೈತರು ತೊಗರಿ ನೇರವಾಗಿ ಒಯ್ಯುವಂತಿಲ್ಲ. ಮೊದಲು ಪಹಣಿ, ಆಧಾರ ಕಾರ್ಡ್‌ಗಳೊಂದಿಗೆ ಹೆಸರು ನೋಂದಾಯಿಸಬೇಕು. ಈಗ ಹೆಸರು ನೋಂದಾಯಿಸಿದರೆ ಫೆಬ್ರವರಿ ಕೊನೆ ವಾರ ಸರದಿ ಬರುತ್ತದೆ. ಜೊತೆಗೆ ತಕ್ಷಣವೇ ಹಣ ರೈತರ ಕೈಸೇರಲಿದೆ. ಆದರೆ ಮಂಡಳಿಯು ಸಹಕಾರ ಸಂಘಗಳಿಂದ ಮೂಲಕ ಖರೀದಿಸಿ ನ್ಯಾಫೆಡ್‌ಗೆ ನೀಡಿ ಅಲ್ಲಿಂದ ಹಣ ಬಂದ ಮೇಲೆ ರೈತರ ಖಾತೆಗೆ ಹಣ ಪಾವತಿಸುತ್ತದೆ. ಹೀಗಾಗಿ ರೈತರು ನ್ಯಾಫೆಡ್ ಹಾಗೂ ಮಂಡಳಿ ಮೂಲಕ ಮಾರಿದಾಗ ಸಿಗುವ 5500 ರೂ. ಬಿಟ್ಟು 4400ರಿಂದ 4700 ದರಕ್ಕೆ ಮಾರುಕಟ್ಟೆಯಲ್ಲಿ ತೊಗರಿಯನ್ನು ಮಾರುತ್ತಿದ್ದಾರೆ.
ಮಾರುಕಟ್ಟೆಯಲ್ಲಿ 4400ರಿಂದ 4700 ರೂ. ದರದಲ್ಲಿ ರೈತರಿಂದ ಖರೀದಿ ಮಾಡಿರುವ ಮಧ್ಯವರ್ತಿಗಳು ಖರೀದಿ ಕೇಂದ್ರಗಳಲ್ಲಿ 5500 ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ರಾಜ್ಯ ಸರ್ಕಾರ ಬೆಂಬಲ ಬೆಲೆ ಮೇಲೆ ಕನಿಷ್ಠ ಸಾವಿರ ರೂ. ಪ್ರೋತ್ಸಾಹ ಧನ ಘೋಷಿಸಬೇಕೆಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಮನವಿ ಮಾಡಲಾಗಿತ್ತು. ಆದರೆ ಸರ್ಕಾರ ಕೇವಲ 450 ರೂ. ಘೋಷಿಸಿದೆ. ಖರೀದಿ ಕೇಂದ್ರಗಳಲ್ಲಿ ಸಾಮಾನ್ಯ ರೈತರಿಗಿಂತ ಮಧ್ಯವರ್ತಿ(ದಲ್ಲಾಳಿ)ಗಳ ತೊಗರಿಯೇ ಮಾರಾಟವಾಗುತ್ತಿದೆ. ಹೀಗಾಗಿ ರೈತರ ಎಲ್ಲ ನಿರೀಕ್ಷೆ ಹುಸಿಯಾಗುತ್ತಿವೆ.
– ಮಾರುತಿ ಮಾನ್ಪಡೆ, ಅಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಸಂಘ
ಮೂರು ವರ್ಷಗಳ ಬೆಲೆ
ವರ್ಷ ಬೆಂಬಲ ಬೆಲೆ ಮಾರುಕಟ್ಟೆಯಲ್ಲಿ ಮಾರಾಟವಾದ ಬೆಲೆ
2016-17 5050 ರೂ. 4000-4700ರೂ.
2015-16 4625 ರೂ. 9000-13000ರೂ.
2014-15 4350 ರೂ. 4600-5200ರೂ.
– ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.