Chittapura; ಹಾಡಹಗಲೇ ಕಳ್ಳತನ ಮಾಡಿದ ಆರೋಪಿಯ ಸೆರೆ, ಸೊತ್ತು ವಶ
Team Udayavani, Jul 12, 2024, 12:52 PM IST
ಚಿತ್ತಾಪುರ; ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಕಳೆದ ವಾರ ಹಾಡುಹಗಲೇ ಮನೆಯ ಮೇಲ್ಛಾವಣಿ ತೆಗೆದು ಕಳ್ಳತನ ಮಾಡಿದ ಆರೋಪಿಯನ್ನು ಪೋಲಿಸ್‌ರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಮರವಾಡಿಯ ಶಿವಬಸಪ್ಪ ಅಮಕರ್ ಎಂಬುವನನ್ನು ಬಂಧಿಸಿ ಕಳುವಾದ ಚಿನ್ನ ಸಮೇತ ವಸ್ತುಗಳು ಪೋಲಿಸ್‌ರು ವಶಪಡಿಸಿಕೊಂಡಿದ್ದಾರೆ.
ಕಳೆದ ಜೂನ್ 28ರಂದು ಗ್ರಾಮದ ಮಲ್ಲಪ್ಪ ಮಾಂಗ್ ಎಂಬವರ ಮನೆ ಕಳ್ಳತನವಾಗಿತ್ತು. ಮೇಲ್ಛಾವಣಿ ಕಿತ್ತು 45 ಗ್ರಾಂ ಚಿನ್ನ ಹಾಗೂ 5 ಸಾವಿರ ರೂ.ಗಳ ನಗದು ಕಳ್ಳರು ದೋಚಿದ್ದರು. ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಅಪರ ಪೋಲಿಸ್ ಅಧೀಕ್ಷಕ ಎನ್ ಶ್ರೀನಿಧಿ, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ್ ತಿಗಡಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡರು.
ಪಿಎಸ್‌ಐಗಳಾದ ಶ್ರೀಶೈಲ್ ಅಂಬಾಟಿ, ಚಂದ್ರಾಮಪ್ಪ, ಹಾಗೂ ಸಿಬ್ಬಂದಿಗಳಾದ ನಾಗೇಂದ್ರ, ಬಸವರಾಜ್, ಸವಿಕುಮಾರ್, ಅಯ್ಯಣ್ಣ, ಬಸವರಾಜ್, ಸಿದ್ದರಾಮೇಶ್, ಈರೇಶ್, ಮಂಜುನಾಥ್ ಅವರನ್ನೊಳಗೊಂಡ ತಂಡವನ್ನು ರಚಿಸಿ ಆರೋಪಿ ಕಮರವಾಡಿಯ ಶಿವಬಸಪ್ಪ ಅಮಕರ್ ಎಂಬವನನ್ನು ಬಂಧಿಸಿ ಒಟ್ಟು 1,30,000 ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಜಪ್ತಿಪಡಿಸಿಕೊಂಡು ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: Aadhaar: ನನ್ನ ಭೇಟಿಗೆ ಬರುವವರು ಆಧಾರ್ ತನ್ನಿ… ಕಂಗನಾ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು
Actor Darshan: ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
New Bill: ಇನ್ನು ಪಂಚಾಯತ್‌ರಾಜ್ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ
BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.