ಈ ಆಸ್ಪತ್ರೆಗೆ ಬಂದ್ರೆ ಬರುತ್ತೆ ಮತ್ತಷ್ಟು ರೋಗ!
Team Udayavani, Jul 8, 2017, 3:24 PM IST
ಅಫಜಲಪುರ: ರೋಗ ವಾಸಿಯಾಗುತ್ತದೆ ಎಂದು ಸರ್ಕಾರಿ ಆಸ್ಪತ್ರೆಗೆ ಹಳ್ಳಿಗಾಡಿನ ಬಡ ಜನರು ಹಾತೊರೆದು ಬರುತ್ತಾರೆ. ಆದರೆ ಆಸ್ಪತ್ರೆಗೆ ಬಂದರೆ ಇಲ್ಲಿನ ಅವ್ಯವಸ್ಥೆ ಮತ್ತು ಕಲುಷಿತ ವಾತಾವರಣ ಕಂಡು ಹೌಹಾರಿ ಮತ್ತಷ್ಟು ರೋಗಗಳನ್ನು
ಅಂಟಿಸಿಕೊಳ್ಳುವಂತಾಗಿದೆ. ಗಬ್ಬೆದ್ದು ನಾರುವ ತಾಲೂಕು ಸರ್ಕಾರಿ ಆಸ್ಪತ್ರೆ, ಎಲ್ಲಿ ನೋಡಿದರಲ್ಲಿ ಕಸದ ರಾಶಿ, ಚರಂಡಿ ನೀರಿನಿಂದ
ಆವರಿಸಿಕೊಂಡಿದೆ.
ಇದು ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ತಾಪಂ, ಪುರಸಭೆ ಕಚೇರಿ ಮುಂಭಾಗದಲ್ಲಿರುವ ನೂರು ಹಾಸಿಗೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವಾಸ್ತವ. ಇಲ್ಲಿಗೆ ದಿನಾಲು ಹಲವಾರು ಹಳ್ಳಿಗಳಿಂದ ನೂರಾರು ಜನ ರೋಗಿಗಳು ಬರುತ್ತಾರೆ. ಬರುವ ರೋಗಿಗಳಿಗೆ ಮೊದಲನೇಯದಾಗಿ ವೈದ್ಯರು ಇಲ್ಲದಿರುವ ಸಮಸ್ಯೆ ಎದುರಾಗುತ್ತದೆ. ನಂತರ ಸ್ವತ್ಛವಿಲ್ಲದ ಕೋಣೆಗಳು,
ಸ್ವತ್ಛವಿಲ್ಲದ ಶೌಚಾಲಯ, ಆಸ್ಪತ್ರೆ ಆವರಣ, ಪರಿಸರ ಹೀಗೆ ಎಲ್ಲವೂ ಗಲೀಜುಮಯ. ಹೀಗಾಗಿ ಇಲ್ಲಿ ರೋಗ ವಾಸಿಯಾಗುವ ಬದಲಿಗೆ ಹೆಚ್ಚಾಗುತ್ತಿದೆ.
ಆಸ್ಪತ್ರೆಯ ಡ್ರೆ„ನೇಜ್ ಒಡೆದು ಗಬ್ಬು ನಾತ: ನೂರು ಹಾಸಿಗೆಯ ಜರ್ಮನ್ ತಂತ್ರಜ್ಞಾನದ ಈ ಆಸ್ಪತ್ರೆಯಲ್ಲಿನ ಡ್ರೈನೇಜ್ ವ್ಯವಸ್ಥೆ ಸಂಪೂರ್ಣ ಒಡೆದು ಎಲ್ಲೆಂದರಲ್ಲಿ ನೀರು ನಿಂತು ಗಬ್ಬು ನಾತ ಬೀರುತ್ತಿದೆ. ಸ್ನಾನದ ಕೋಣೆಗಳು ಮತ್ತು ಶೌಚಕ್ಕೆ ಬಳಸಿದ ನೀರು
ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲ. ಹೀಗಾಗಿ ಎಲ್ಲೆಂದರಲ್ಲಿ ನೀರಿನ ಪೈಪ್‌ಗ್ಳು ಒಡೆದು ಗಲೀಜು ನಿರ್ಮಾಣವಾಗಿದೆ. ಇದನ್ನು ನೋಡಿಕೊಳ್ಳಬೇಕಾಗಿರುವ ಡಿ ಗ್ರೂಪ್ ನೌಕರರು ಕಾಲಹರಣ ಮಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಜಾಲಿ ಮುಳ್ಳು, ಕಸದ
ರಾಶಿ: ಆಸ್ಪತ್ರೆ ಆವರಣ ಸ್ವತ್ಛವಾಗಿದ್ದರೆ ಬರುವ ರೋಗಿಗಳ ರೋಗ ಮಾತ್ರೆ ಕೊಡುವ ಮೊದಲೇ ಅರ್ಧ ವಾಸಿಯಾಗಬೇಕು. ಆದರೆ ಇಲ್ಲಿಗೆ ಬರುವ ರೋಗಿಗಳಿಗೆ ಆಸ್ಪತ್ರೆಯ ಆವರಣ ನೋಡಿ ರೋಗ ಇನ್ನಷ್ಟು ಹೆಚ್ಚಾಗುತ್ತದೆ. ಆಸ್ಪತ್ರೆಯ ಆವರಣದಲ್ಲಿ ಎಲ್ಲಿ ನೋಡಿದರೂ ಬಳ್ಳಾರಿ ಜಾಲಿ ಬೆಳೆದಿದೆ. ಅಲ್ಲದೆ ಕಸದ ರಾಶಿ ಕಾಣುತ್ತದೆ. ಆಸ್ಪತ್ರೆಯ ಆವರಣ ಮತ್ತು ಒಳಾಂಗಣ ಸ್ವತ್ಛಗೊಳಿಸುವ ಗೋಜಿಗೆ ಸಂಬಂಧ ಪಟ್ಟವರು ಹೋಗಿಲ್ಲ.
ಮುರಿದ ವಿದ್ಯುತ್ ಕಂಬ: ಆಸ್ಪತ್ರೆಯ ಆವರಣದಲ್ಲಿ ರಾತ್ರಿ ವೇಳೆ ಬೆಳಕು ಕಾಣುವ ದೃಷ್ಟಿಯಿಂದ ವಿದ್ಯುತ್ ಕಂಬಗಳು ಮತ್ತು ಮಕೂರಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ಅವು ಮುರಿದು ಬಿದ್ದಿವೆ. ರಾತ್ರಿ ವೇಳೆ ಆಸ್ಪತ್ರೆಯ ಹಿಂಭಾಗದಲ್ಲಂತೂ ಭಯಾನಕವಾಗಿ ಕಾಣುತ್ತದೆ. ಕತ್ತಲೆ ಆವರಿಸಿ ಜನ ಓಡಾಡದಂತಾಗುತ್ತಿದೆ. ಒಟ್ಟಿನಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳು ಕಾಗದಲ್ಲಿವೆ. ಆದರೆ ವಾಸ್ತವದಲ್ಲಿ ಇಲ್ಲದಂತಾಗಿದೆ. ಇದರಿಂದ ಬರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಸಂಬಂಧ ಪಟ್ಟವರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇಲ್ಲಿನ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ. ಹಂದಿಗಳ ವಾಸಸ್ಥಾನ; ಮಳೆ ಬಂದರೆ ಸಾಕು ಆಸ್ಪತ್ರೆ ಆವರಣದಲ್ಲಿ ಮಳೆ ನೀರು ಚರಂಡಿ ನೀರಿನೊಂದಿಗೆ ಸೇರಿ ನಿಲ್ಲುತ್ತದೆ. ಇದರಲ್ಲಿ ಹಂದಿಗಳು ಒದ್ದಾಡಿ ಮತ್ತಷ್ಟು ವಾತಾವರಣ ಕಲುಷಿತಗೊಳಿಸುತ್ತವೆ. ಹಂದಿಗಳನ್ನು ಹೊರ ಹಾಕಿ ಮಳೆ ಮತ್ತು ಚರಂಡಿ ನೀರು ನಿಲ್ಲದಂತೆ ಮಾಡಲು ಯಾರೂ ಯತ್ನಿಸಿಲ್ಲ.
ಸಮಸ್ಯೆಗೆ ಪುರಸಭೆ ಸ್ಪಂದಿಸಿಲ್ಲ
ತುರ್ತಾಗಿ ಡಿ ಗ್ರೂಪ್ ನೌಕರರ ಸಭೆ ಕರೆದು ಮೇಲಾಧಿಕಾರಿಗೆ ಮಾಹಿತಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುತ್ತದೆ.
ಆಸ್ಪತ್ರೆಯ ಮುಂಭಾಗದ ಚರಂಡಿ ಸ್ವತ್ಛ ಮಾಡುವಂತೆ ಪುರಸಭೆಗೆ ಎರಡು ಬಾರಿ ಮನವಿ ಮಾಡಲಾಗಿದೆ ಅವರು ಸ್ಪಂದಿಸಿಲ್ಲ.
ಮಹಾಂತಪ್ಪ ಹಾಳಮಳ್ಳಿ, ಪ್ರಭಾರಿ ಆಡಳಿತ ವೈದ್ಯಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.