ಚಿಂಚೋಳಿಯಲ್ಲಿ ರಭಸದ ಮಳೆ: ಜನಜೀವನ ಅಸ್ತವ್ಯಸ
Team Udayavani, Jun 10, 2018, 10:57 AM IST
ಚಿಂಚೋಳಿ: ತಾಲೂಕಿನಲ್ಲಿ ಶುಕ್ರವಾರ ಸಂಜೆ ವೇಳೆ ಸಿಡಿಲು, ಗುಡುಗು-ಮಿಂಚಿನ ಆರ್ಭಟದಿಂದ ಕೂಡಿದ ರಭಸದ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ತಾಲೂಕಿನಲ್ಲಿ ಒಟ್ಟು 314 ಮಿಲಿ ಮೀಟರ್ ದಾಖಲೆ ಮಳೆ ಆಗಿದೆ. ಮುಲ್ಲಾಮಾರಿ ಜಲಾಶಯ ಮತ್ತು ಸಣ್ಣ ನೀರಾವರಿ ಕೆರೆಗಳು ಭರ್ತಿಗೊಳ್ಳುತ್ತಿವೆ. ಪಟ್ಟಣದಲ್ಲಿ ಒಂದೇ ದಿನದಲ್ಲಿ 65.5 ಮಿ.ಮೀ ದಾಖಲೆ ಮಳೆ ಸುರಿದಿದೆ.
ಕೋಡ್ಲಿಯಲ್ಲಿ 48.5 ಮಿ.ಮೀ, ಸುಲೇಪೇಟ 47.2 ಮಿ.ಮೀ, ಕುಂಚಾವರಂ 20.4 ಮಿ.ಮೀ, ಐನಾಪುರ 52.4 ಮಿ.ಮೀ, ಚಿಮ್ಮನಚೋಡ 35.2 ಮಿ.ಮೀ, ನಿಡಗುಂದಾ 45 ಮಿ.ಮೀ ಮಳೆ ಆಗಿದೆ. ತಾಲೂಕಿನಲ್ಲಿ ರಭಸದಿಂದ ಕೂಡಿದ ಮಳೆ ಆಗುತ್ತಿರುವುದರಿಂದ ಕೊಟಗಾ, ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಂದಾಪುರ, ಗರಗಪಳ್ಳಿ, ಪೋಲಕಪಳ್ಳಿ ಗ್ರಾಮಗಳ ಹತ್ತಿರ ಹರಿಯುವ ಮುಲ್ಲಾಮಾರಿ ನದಿಗೆ ಕಟ್ಟಿದ ಬ್ರಿಡ್ಜ್ ಕಮ್ ಬ್ಯಾರೇಜಿಗೆ ಅಳವಡಿಸಿದ ಎಲ್ಲ ಗೇಟುಗಳನ್ನು ಮೇಲೆ ಎತ್ತಲಾಗಿದೆ.
ಕೋಡ್ಲಿ, ಸಾಲೇಬೀರನಳ್ಳಿ, ಚಿಕ್ಕನಿಂಗದಳ್ಳಿ, ಹೂಡದಳ್ಳಿ, ದೋಟಿಕೊಳ, ಹುಲಸಗೂಡ, ಧರ್ಮಸಾಗರ, ಮುಕರಂಬ, ತುಮಕುಂಟಾ, ನಾಗಾಇದಲಾಯಿ, ಹಸರಗುಂಡಗಿ, ಐನಾಪುರ, ಚಂದನಕೇರಾ ಸಣ್ಣ ನೀರಾವರಿ ಕೆರೆಗಳಿಗೆ ಅಲ್ಪ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಶರಣಬಸಪ್ಪ ಕೇಶ್ವಾರ ತಿಳಿಸಿದ್ದಾರೆ.
ತಾಲೂಕಿನ ಮಧ್ಯಮ ನೀರಾವರಿ ಯೋಜನೆ ಕೆಳದಂಡೆ ಮುಲ್ಲಾಮಾರಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ
ವ್ಯಾಪಕ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ ಶುಕ್ರವಾರ 1742 ಕ್ಯುಸೆಕ್, ಶನಿವಾರ ಬೆಳಗ್ಗೆ 562 ಕುಸೆಕ್ ಒಳಹರಿವು ಇತ್ತು. ಜಲಾಶಯದ ಗರಿಷ್ಠ ನೀರಿನಮಟ್ಟ 491ಮೀಟರ್ ಇದ್ದು, 489.33ಮೀಟರ್ ಕನಿಷ್ಠಮಟ್ಟವಿದೆ ಎಂದು ಜಲಾಶಯದ ಜೆ.ಇ ಹಣಮಂತರಾವ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ರಭಸದ ಮಳೆ ಆಗುತ್ತಿರುವುದರಿಂದ ಚಿಮ್ಮನಚೋಡ- ಹಸರಗುಂಡಗಿ ಗ್ರಾಮಗಳಿಗೆ ಹೋಗುವ
ರಸ್ತೆಯ ಸಣ್ಣ ಸೇತುವೆ ಕೊಚ್ಚಿಕೊಂಡು ಹೋಗಿ, ಮಧ್ಯೆ ದೊಡ್ಡದಾದ ತೆಗ್ಗು ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಹಸರಗುಂಡಗಿ ಗ್ರಾಮಸ್ಥರಾದ ಕಾಶಿನಾಥ ಸಿಂಧೆ, ಜಗದೇವ ಗೌತಮ ತಿಳಿಸಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನ ರೋಹಿಣಿ ಮಳೆ ಅಬ್ಬರ ದಿನದಿನಕ್ಕೆ ಹೆಚ್ಚುತ್ತಿದ್ದು ಬಿತ್ತನೆಗೆ ಅನುಕೂಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.