ಇಂದು-ನಾಳೆ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಅನಾವರಣ
Team Udayavani, Jan 17, 2019, 5:56 AM IST
ಕಲಬುರಗಿ: ವಿದ್ಯಾರ್ಥಿಗಳ ತಲೆಯಲ್ಲಿ ಹೊಳೆಯುವ ವೈಜ್ಞಾನಿಕ ಸಂಶೋಧನೆಗೆ ಗುರುತಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನ ಮೂರು ದಿನಗಳ ಆವಿಷ್ಕಾರೋತ್ಸವ ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಆರಂಭಗೊಂಡಿದೆ.
ವಿದ್ಯಾರ್ಥಿಗಳಲ್ಲದೇ ರೈತರು ಇತರ ಸಾಮಾನ್ಯ ಜನರು ತಾವು ಕಂಡುಕೊಂಡ ವಿಭಿನ್ನ ಸಂಶೋಧನೆಯನ್ನು ಪ್ರಚುಪಡಿಸುವುದಕ್ಕೆ ಉತ್ತಮ ಅವಕಾಶದ ವೇದಿಕೆಯನ್ನು ಜಿಲ್ಲಾ ವಿಜ್ಞಾನ ಕೇಂದ್ರ ಕಳೆದ ಮೂರು ವರ್ಷಗಳಿಂದ ಆವಿಷ್ಕಾರೋತ್ಸವ ಆಯೋಜಿಸುತ್ತಾ ಬರುತ್ತಿದ್ದು, ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಯಾರ ತಲೆಯಲ್ಲಿ ಯಾವ ನಿಟ್ಟಿನ ಸಂಶೋಧನೆ ಅಡಗಿರುತ್ತದೆಯೋ ಎಂಬುದನ್ನು ಸರಳವಾಗಿ ಗುರುತಿಸಲಿಕ್ಕಾಗುವುದಿಲ್ಲ. ಆದರೆ ಅವರ ಪ್ರತಿಭೆ ಗುರುತಿಸುವ ಇಂತಹ ಆವಿಷ್ಕಾರೋತ್ಸಗಳನ್ನು ವಿಜ್ಞಾನ ಕೇಂದ್ರ ಆಯೋಜಿಸುತ್ತಾ ಬಂದಿರುವುದು ಸ್ವಾಗತಾರ್ಹ ಎಂದರು.
ವಿಶ್ವದಾದ್ಯಂತ ದೇಶಗಳು ಅಧುನಿಕತೆಯ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹೆಚ್ಚಿನ ರೀತಿಯಲ್ಲಿ ಬಳಸಿಕೊಂಡು ವೇಗವಾಗಿ ಪ್ರಗತಿಯತ್ತ ಮುಖ ಮಾಡುತ್ತಿವೆ. ಮಾನವ ಸಂಪನ್ಮೂಲ ಮತ್ತು ನೈಸರ್ಗಿಕ ಸಂಪನ್ಮೂಲದಿಂದ ಸಂಪದ್ಭರಿತವಾಗಿರುವ ಭಾರತವು ಇದಕ್ಕು ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವದಲ್ಲಿಯೆ ಮೊದಲಿಗರಾಗಿ ದೈನಂದಿನ ಜೀವನಕ್ಕೆ ಸಹಾಯಕವಾಗಬಲ್ಲ ಹೊಸ ಆವಿಷ್ಕಾರಕ್ಕೆ ಮುನ್ನಡಿ ಬರೆಯಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.
ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಂತ್ರಜ್ಞಾನ ವಸ್ತುಸಂಗ್ರಹಾಲಯದ ಕ್ಯೂರೇಟರ್ ಸಜು ಭಾಸ್ಕರನ್ ಮಾತನಾಡಿ, ಮಕ್ಕಳಿಗೆ ಸಹಾಯಕವಾಗಲೆಂದೆ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಇನೋವೇಷನ್ ಹಬ್ ಸ್ಥಾಪಿಸಲಾಗಿದೆ ಎಂದರು. ಪಿಡಿಎ ಇಂಜಿನಿಯರಿಂಗ್ ಕಾಲೇಜ್‌ನ ಪ್ರಾಚಾರ್ಯರಾದ ಡಾ| ಎಸ್. ಎಸ್. ಹೆಬ್ಟಾಳ ಅಧ್ಯಕ್ಷತೆ ವಹಿಸಿದ್ದರು.
ಇದಕ್ಕೂ ಮುಂಚೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವಿಜ್ಞಾನ ಕೇಂದ್ರದ ಅಧಿಕಾರಿ ಸಿ.ಎನ್. ಲಕ್ಷ್ಮೀನಾರಾಯಣ ಹಾಗೂ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಕ್ಯೂರೆಟ್ರ್ ಸಜು ಭಾಸ್ಕರ್, ಈ ವರ್ಷ ಆವಿಷ್ಕಾರದ ಸಲುವಾಗಿ 152 ಸಂಶೋಧನಾ ಮಾದರಿ ಪ್ರಸ್ತಾವನೆಗಳು ಬಂದಿದ್ದವು. ಆದರೆ ಅವುಗಳನ್ನು ಪರಿಷ್ಕರಿಸಿ-ಶೋಧಿಸಿ 38 ಸಂಶೋಧನೆಗಳಿಗೆ ಅವಕಾಶ ನೀಡಲಾಗಿದೆ. ಇದನ್ನು ವೈಜ್ಞಾನಿಕವಾಗಿ ನಿಖರವಾಗಿ ದೃಢಿಪಟ್ಟಲ್ಲಿ ಅದನ್ನು ಪೇಟೆಂಟ್‌ಗೆ ಅಳವಡಿಸುವುದನ್ನು ಅವರ ಅನುಮತಿಯೊಂದಿಗೆ ವಿಜ್ಞಾನ ಕೇಂದ್ರ ಮಾಡಲಿದೆ ಎಂದು ವಿವರಿಸಿದರು.
ಕೀಟನಾಶಕ ಸಿಂಪಡಿಸಲು ಡ್ರೋನ್ ಬಳಕೆ
ರೈತರು ಬೆಳೆಗಳಿಗೆ ಕೀಟನಾಶಕ ಸಿಂಪಡಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಡ್ರೋನ್ ಬಳಕೆ ಮಾಡಬಹುದು ಎಂಬುದನ್ನು ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಅಂತೀಮ ವರ್ಷದ ವಿದ್ಯಾರ್ಥಿಗಳಾದ ವಿರೇಶ ಹಾಗೂ ಸುನೀತಾ ನಿರೂಪಿಸಿದ ಡ್ರೋನ್ ಆವಿಷ್ಕಾರೋತ್ಸವದಲ್ಲಿ ಗಮನ ಸೆಳೆಯಿತು. ಅದೇ ರೀತಿ ಇನ್‌ಫಿಂಕ್ಟ್ ಸಲ್ಯೂಷನ್ ವತಿಯಿಂದ ವಿದ್ಯಾರ್ಥಿಗಳು ಮಣ್ಣಿನಲ್ಲಿನ ತೇವಾಂಶ ನಿಖರವಾಗಿ ಅಳೆಯುವ ಹಾಗೂ ಮಣ್ಣಿನಲ್ಲಿನ ಲವಣಾಂಶಗಳನ್ನು ಅರಿಯುವ ಸಾಧನ ಪ್ರಸ್ತುಪಡಿಸಿರುವುದು ಸಹ ಹಲವರ ಗಮನ ಸೆಳೆಯಿತು. ಗುರುವಾರ-ಶುಕ್ರವಾರ ಆವಿಷ್ಕಾರೋತ್ಸವ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.