Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಿ ವಿಶೇಷ ಪ್ಯಾಕೇಜ್ ಪ್ರಕಟವಾಗಲಿ
Team Udayavani, Dec 13, 2024, 3:05 PM IST
ಕಲಬುರಗಿ: ಒಂದೊಮ್ಮೆ ಅತಿವೃಷ್ಟಿ-ಮಗದೊಮ್ಮೆ ಅನಾವೃಷ್ಟಿ ಎದುರಾದರೆ ಇನ್ನೊಂದೆಡೆ ಬೆಲೆ ಕುಸಿತ, ಕೀಟಬಾಧೆ, ನೆಟೆರೋಗದಿಂದ ಕಳೆದ ಹಲವಾರು ವರ್ಷಗಳಿಂದ ತೊಗರಿ ರೈತ ಒಂದಿಲ್ಲ ಒಂದು ಸಮಸ್ಯೆಯಿಂದ ಎದುರಿಸುತ್ತಿದ್ದರೆ ಪ್ರಸಕ್ತವಾಗಿ ನೆಟೆರೋಗದಿಂದ ತೊಗರಿ ಬೆಳೆ ಸಂಪೂರ್ಣ ನಾಶವಾಗಿದ್ದು, ಮೇಲೆಳದಂತಾಗಿದೆ.
ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅದರಲ್ಲೂ ದೇಶದ ಬೇಳೆಕಾಳುಗಳ ಅಗತ್ಯತೆ ಪೂರೈಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ತೊಗರಿ ಪ್ರಸಕ್ತವಾಗಿ ನೆಟೆರೋಗದಿಂದ ಶೇ. 80ರಷ್ಟು ಬೆಳೆ ನಾಶವಾಗಿದ್ದರಿಂದ ಇಡೀ ತೊಗರಿ ಬೆಳೆಯುವ ರೈತ ಸಂಕುಲಕ್ಕೆ ಗರ ಬಡಿದಿದೆ. ಆಶ್ಚರ್ಯಕರ ಸಂಗತಿ ಏನೆಂದರೆ ಸತತ ನಷ್ಟ ಹೊಂದುತ್ತಿರುವ ಪರಿಣಾಮ ಮೊದಲೇ ಕೃಷಿ ಕಾಯಕದಿಂದ ವಿಮುಖರಾಗಿ ನಗರದತ್ತ ಬರುತ್ತಿರುವ ರೈತರನ್ನು ಉಳಿಸುವುದು ಸರ್ಕಾರದ ಮುಂದಿರುವ ಒಂದು ಸವಾಲಾಗಿ ನಿಂತಿದೆ.
ಏನಿದು ನೆಟೆರೋಗ?: ಬೆಳೆ ಸರಿಯಾಗಿ ಕಾಣುತ್ತದೆ, ತೊಗರಿ ಕಾಳು ಸಹ ಸರಿಯಾಗಿ ಹಿಡಿಯಲಾರಂಭಿಸಿರುತ್ತದೆ. ಹೀಗಾಗಿ ರೈತ ದುಬಾರಿ ಬೆಲೆಯ ಕೀಟನಾಶಕ ಮೂರ‍್ನಾಲ್ಕು ಸಲ ಸಿಂಪರಣೆ ಮಾಡಲಾಗಿರುತ್ತದೆ. ಇನ್ನೇನು ಬೆಳೆ ಕೈಗೆ ಬರುವುದರಷ್ಟರಲ್ಲೇ ತೊಗರಿ ಬೆಳೆ ಒಣಗಲು ಆರಂಭಿಸಿ ನಾಲ್ಕೈದು ದಿನಗಳಲ್ಲಿ ಸಂಪೂರ್ಣ ನಾಶವಾಗುತ್ತದೆ. ಎಕರೆಯಲ್ಲಿ ಒಂದು ಕೆಜಿ ಬಾರದಿರುವ ಮಟ್ಟಿಗೆ ಬೆಳೆ ನಾಶವಾಗಿರುತ್ತದೆ. ತೊಗರಿ ಕಟ್ಟಿಗೆಯು ಮನೆ ಅಡುಗೆಗೆ ಬಾರದಿರುವ ಮಟ್ಟಿಗೆ ನಾಶವಾಗುತ್ತದೆ ಎಂದರೆ ನೆಟೆರೋಗ ಎಷ್ಟು ಘೋರ ಎಂಬುದು ಅರಿವಿಗೆ ಬರುತ್ತದೆ. ಒಂದುವರೆ ದಶಕದ ಹಿಂದೆ ತೊಗರಿಯಲ್ಲಿ ನೆಟೆರೋಗ ಎದುರಾಗಿ ಬೆಳೆ ನಾಶವಾಗುತ್ತಿತ್ತು. ಆದರೆ ಕೃಷಿ ವಿಜ್ಞಾನಿಗಳು ಸಂಶೋಧಿಸಿ ನೆಟೆರೋಗ ನಿರೋಧಕ ತಳಿ ಕಂಡು ಹಿಡಿದರು. ಆದರೆ ಈಗ ಕಳೆದ ಮೂರು ವರ್ಷದಿಂದ ಮತ್ತೆ ನೆಟೆರೋಗ ಕಾಣಲಾರಂಭಿಸಿದೆ. ಕೃಷಿ ವಿಜ್ಞಾನಿಗಳಿಗೆ ಸವಾಲು ಎನ್ನುವಂತೆ ನೆಟೆರೋಗ ಎದುರಾಗಿದೆ. ಪ್ರಸಕ್ತ ಬಿತ್ತನೆ ಮಾಡಲಾಗಿರುವ ತೊಗರಿ ತಳಿ ನೆಟೆರೋಗ ನಿರೋಧಕ ಎಂದೇ ಕೃಷಿ ವಿಜ್ಞಾನಿಗಳು ರೈತರಿಗೆ ನೀಡಿದ್ದಾರೆ. ಆದರೆ ಅದು ಸಹ ನೆಟೆರೋಗಕ್ಕೆ ಒಳಗಾಗಿರುವುದು ನಿಜವಾಗಲು ಸವಾಲಾಗಿ ಪರಿಣಮಿಸಿದೆ. ಹೀಗಾಗಿ ರೈತರ ಜೀವಾಳವಾಗಿರುವ ತೊಗರಿಯನ್ನು ಇನ್ನಷ್ಟು ಸಂಶೋಧಿಸಿ ಉಳಿಸಿಕೊಂಡು ಹೋಗುವುದು ಬಹು ಮುಖ್ಯವಾಗಿದೆ.
ಕಳೆದ 2022-23ರಲ್ಲಿ ತೊಗರಿ 1.60 ಲಕ್ಷ ಹೆಕ್ಟೇರ ಪ್ರದೇಶದಲ್ಲಿ ತೊಗರಿ ನೆಟೆರೋಗದಿಂದ ನಾಶವಾಗಿದ್ದರೆ ಪ್ರಸಕ್ತವಾಗಿಯೂ ಸುಮಾರು 2 ಲಕ್ಷ ಹೆಕ್ಟೇರ್ ಭೂಮಿಯ ತೊಗರಿ ನೆಟೆರೋಗದಿಂದ ಸಂಪೂರ್ಣ ಹಾಳಾಗಿದೆ. ಈಗಿನ ಪರಿಸ್ಥಿತಿ ನೋಡಿದರೆ ಇನ್ನೂ ಒಂದು ಲಕ್ಷ ಹೆಕ್ಟೇರ್ ಭೂಮಿಯ ತೊಗರಿ ಬೆಳೆ ನೆಟೆರೋಗದಿಂದ ಹಾಳಾಗುವ ಸಾಧ್ಯತೆಗಳಿವೆ. ತೊಗರಿ 6 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ತೊಗರಿ ಬಿತ್ತನೆಯಾಗಿದ್ದರೆ ಇದರಲ್ಲಿ ಅರ್ಧ ಅಂದರೆ ಮೂರು ಲಕ್ಷ ಹೆಕ್ಟೇರ್ ನೆಟೆರೋಗದಿಂದ ಹಾನಿಯಾಗಿದ್ದರಿಂದ ಇನ್ನೊಂದು ಲಕ್ಷ ಹೆಕ್ಟೇರ್ ಅತಿವೃಷ್ಟಿ ಸೇರಿ ಇತರ ಕಾರಣಗಳಿಂದ ಹಾನಿಯಾಗಿದೆ. ಇದನ್ನೆಲ್ಲ ನೋಡಿದರೆ ತೊಗರಿ ಮುಂದಿನ ವರ್ಷಗಳಲ್ಲಿ ಬೆಳೆ ಉಳಿದು ಬೆಳೆಯುವುದೇ ಎಂಬ ಅನುಮಾನ ಕಾಡಲಾರಂಭಿಸಿದೆ.
ಅಧಿವೇಶನದಲ್ಲಿ ಚರ್ಚೆಯಾಗಲಿ: ತೊಗರಿ ನೆಟೆರೋಗದಿಂದ ಸಂಪೂರ್ಣ ನಾಶವಾಗಿರುವ ಪ್ರಮುಖ ಸಮಸ್ಯೆ ಕುರಿತಾಗಿ ಬೆಳಗಾವಿ ಅಧಿವೇಶನದಲ್ಲಿ ಸಮಗ್ರ ಚರ್ಚೆಯಾಗಲಿ ಎಂಬುದು ರೈತರ ಆಗ್ರಹವಾಗಿದೆ. ತೊಗರಿ ಹಾನಿಗೆ ಎಕರೆಗೆ 25 ಸಾವಿರ ರೂ ವಿಶೇಷ ಪ್ಯಾಕೇಜ್ ಪ್ರಕಟಿಸುವ ಜತೆಗೆ ತೊಗರಿ ಬೆಳೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜತೆಗೆ ರೈತ ಕೃಷಿ ಕಾಯಕದಿಂದ ವಿಮುಖವಾಗುತ್ತಿರುವುದನ್ನು ತಡೆಗಟ್ಟಲು ಹೊಸದಾದ ಆತ್ಮಸ್ಥೈರ್ಯದ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ತೊಗರಿ ನೆಟೆರೋಗಕ್ಕೆ ಒಳಗಾಗದಂತೆ ಹೊಸ ಬೀಜ ಸಂಶೋಧನೆಗೆ ಉತ್ತೇಜನ ಜತೆಗೆ ಭೂಮಿಯ ಫಲವತ್ತತೆ ಹೆಚ್ಚಿಸಲು ಯೋಜನೆ ರೂಪಿಸುವುದು ಅಗತ್ಯವಿದೆ.
ಕಲಬುರಗಿ ಜಿಲ್ಲೆಯಿಂದ ಪ್ರತಿನಿಧಿಸಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಹಾಗೂ ಡಾ. ಶರಣಪ್ರಕಾಶ ಪಾಟೀಲ್ ಎರಡು ವರ್ಷದಿಂದ ಹಿಂದೆ ನೆಟೆರೋಗದಿಂದ ಹಾನಿಯಾದ ತೊಗರಿ ಬೆಳೆಯೊಂದಿಗೆ ಎತ್ತಿನ ಬಂಡಿಯಲ್ಲಿ ಪ್ರತಿಭಟನೆ ನಡೆಸಿ ಎಕರೆಗೆ 25 ಸಾವಿರ ರೂ ಪರಿಹಾರ ನೀಡಬೇಕೆಂದು ಬೀದಿಗಿಳಿದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಆಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ 180 ಕೋ.ರೂ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಆದರೆ ಹಣ ಬಿಡುಗಡೆಯಾಗುವಷ್ಟರಲ್ಲೇ ಚುನಾವಣೆ ಎದುರಾಯಿತು. ತದನಂತರ ಆಸ್ತಿತ್ವಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಪ್ರಸಕ್ತ ಕಾಂಗ್ರೆಸ್ ಸರ್ಕಾರ ವಿಶೇಷ ಪ್ಯಾಕೇಜ್ ಹಣ ಬಿಡುಗಡೆ ಮಾಡಿತು. ಆದರೆ ಪ್ರಸಕ್ತವಾಗಿರುವ ಹಾನಿಗೆ ಸೂಕ್ತ ಪರಿಹಾರವಾಗಿ ಕಲಬುರಗಿ ಜಿಲ್ಲೆಗೆ ಕನಿಷ್ಠ 500 ಕೋ.ರೂ ವಿಶೇಷ ಪ್ಯಾಕೇಜ್ ಬಿಡುಗಡೆಯಾಗುವುದು ಅಗತ್ಯವಿದೆ.
ಸಚಿವರು ಸಿಎಂಗೆ ಮನವಿ: ಈಗ ಕಾಂಗ್ರೆಸ್ ಸರ್ಕಾರ ಇರುವುದರಿಂದ ಎರಡು ವರ್ಷದ ಹಿಂದೆ ಆಗ್ರಹಿಸಿದ್ದಕ್ಕೆ ಬದ್ದ ಎನ್ನುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಮನವಿಗೆ ಸಿಎಂ ಸ್ಪಂದಿಸಿ ಕಡತ ಮಂಡಿಸುವಂತೆ ಕೃಷಿ ಸಚಿವರಿಗೆ ಸೂಚನೆ ನೀಡಿದ್ದಾರೆ. ಆದರೆ ಇದರ ಬಗ್ಗೆ ಪ್ರಸಕ್ತ ಅಧಿವೇಶನದಲ್ಲೇ ಚರ್ಚೆಯಾಗಿ ವಿಶೇಷ ಪ್ಯಾಕೇಜ್ ಘೋಷಣೆಯಾಗಲಿ ಎಂಬುದು ರೈತರ ಆಗ್ರಹವಾಗಿದೆ.
ಹೊಸ ರೋಗ; ಕೃಷಿ ವಿಜ್ಞಾನಿಗಳಿಗೆ ಸವಾಲು: ಪ್ರಸಕ್ತವಾಗಿ ತೊಗರಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯಂತೆ ತೇವಾಂಶದ ಕೊರತೆಯಿಂದಾಗಿ ಮ್ಯಾಕ್ರೋಫೋಮಿನಾ ಫೆಜಿಯೊಲೈ ಶಿಲೀಂದ್ರದಿಂದ ಬರುವ ಒಣಬೇರು ಕೊಳೆ ರೋಗ ಹಾಗೂ ಫೈಟೋವ್ಹೋರಾ ಮಚ್ಚೆ ರೋಗ ಬಂದಿದೆ ಎಂದು ಪತ್ತೆ ಹಚ್ಚಲಾಗಿದೆ. ಮುಂದಿನ ದಿನಗಳಲ್ಲಿ ಈ ರೋಗ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಜತೆಗೆ ರೈತರಿಗೆ ಅಭಯ ನೀಡುವ ನಿಟ್ಟಿನಲ್ಲಿ ಸರ್ಕಾರ ವಿನೂತನ ಯೋಜನೆ ರೂಪಿಸಬೇಕೆಂಬುದು ರೈತರ ಒಕ್ಕೋರಲಿನ ಆಗ್ರಹವಾಗಿದೆ.
-ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BMTC: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬಿಎಂಟಿಸಿ: ಆದಾಯ ಮತ್ತು ವೆಚ್ಚಗಳ ನಡುವಿನ ಭಾರೀ ಅಂತರ
Renukaswamy Case: ದರ್ಶನ್, ಪವಿತ್ರಾಗೌಡಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್
Chikkamagaluru: ಲಾಠಿಚಾರ್ಜ್ ಬಗ್ಗೆ ಗೃಹ ಸಚಿವರಿಂದ ದಾಷ್ಟ್ಯದ ಮಾತು: ಸಿ.ಟಿ.ರವಿ ಟೀಕೆ
Holehonnur: ಪ್ರತ್ಯೇಕ ಅಪಘಾತ… ಇಬ್ಬರು ಮೃತ್ಯು, ಓರ್ವನಿಗೆ ಗಾಯ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Akhilesh Yadav; ಮುಸ್ಲಿಮರನ್ನು ‘ಎರಡನೇ ದರ್ಜೆ’ ಪ್ರಜೆಗಳಾಗಿಸಲು ಪ್ರಯತ್ನಗಳು ನಡೆಯುತ್ತಿವೆ
Rashtrotthana Parishat : ಚೇರ್ಕಾಡಿಯಲ್ಲಿ ಸಿಬಿಎಸ್‌ಇ ಶಾಲೆ, ಪ.ಪೂ. ಕಾಲೇಜು ಪ್ರಾರಂಭ
Pakistan: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ʼಮತ್ತೆʼ ವಿದಾಯ ಹೇಳಿದ ಪಾಕಿಸ್ತಾನದ ಆಲ್‌ರೌಂಡರ್
Atul Subhash ಪ್ರಕರಣ; ಯುಪಿಯಲ್ಲಿರುವ ಪತ್ನಿಯ ಮನೆಗೆ ನೋಟಿಸ್ ಅಂಟಿಸಿದ ಬೆಂಗಳೂರು ಪೊಲೀಸರು
Gangolli Election:ಗಂಗೊಳ್ಳಿ ಗ್ರಾ.ಪಂ. ಚುನಾವಣೆಯಲ್ಲಿ ಕೈ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.