ಪ್ರವಾಸಿ-ಪುಣ್ಯ ತಾಣಗಳತ್ತ ಸಾರ್ವಜನಿಕರ ದಂಡು
Team Udayavani, Nov 15, 2020, 2:35 PM IST
ಕಲಬುರಗಿ: ಕೋವಿಡ್ ಹಾವಳಿ ಮತ್ತುಲಾಕ್‌ಡೌನ್‌ನಿಂದ ಸಂಪೂರ್ಣ ನೆಲಕಚ್ಚಿದ್ದ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳುತ್ತಿದ್ದು, ಕಲಬುರಗಿ ಜಿಲ್ಲೆಯ ಪ್ರವಾಸಿ ತಾಣಗಳು ಮತ್ತು ಪುಣ್ಯ ಕೇಂದ್ರಗಳತ್ತ ಜನರು ಮುಖ ಮಾಡುತ್ತಿದ್ದು,ಮತ್ತೆ ಜೀವ ಕಳೆ ಪಡೆದುಕೊಂಡಿವೆ.
ಗಾಣಗಾಪುರ ಕ್ಷೇತ್ರ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ದತ್ತಾತ್ರೇಯ ಪಾದುಕೆ ದರ್ಶನ ಮತ್ತು ಭೀಮಾ-ಅಮರ್ಜಾ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನಕ್ಕೆಂದು ಜನರು ಬರುತ್ತಿದ್ದಾರೆ. ರಾಜ್ಯ ಮಾತ್ರವಲ್ಲ ಪಕ್ಕದ ಮಹಾರಾಷ್ಟ್ರಮತ್ತು ತೆಲಂಗಾಣದಿಂದಲೂ ಆಗಮಿಸ ತೊಡಗಿದ್ದಾರೆ.ಕ್ಷೇತ್ರದಲ್ಲೂ ಸಾರ್ವಜನಿಕರಿಗೆ ಮುಕ್ತವಾದ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ವಿಧಿಸಲಾದ ನಿರ್ಬಂಧಗಳನ್ನು ಸಂಪೂರ್ಣ ಸಡಿಲಮಾಡಲಾಗಿದೆ. ಆದರೂ, ಕೋವಿಡ್ ಸಂಬಂಧಿತ ಕೆಲ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ. ದೂರದಿಂದ ಬರುವ ಭಕ್ತರು, ಪ್ರವಾಸಿಗರ ಮೇಲೆ ನಿಗಾ ಮುಂದುವರಿದಿದೆ. ನಿತ್ಯ ನಾಲ್ಕೈದು ನೂರು ಜನರು ಭೇಟಿ ನೀಡುತ್ತಿದ್ದಾರೆ.
ದತ್ತಾತ್ರೇಯರಿಗೆ ಮಹಾರಾಷ್ಟ್ರದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆ ರಾಜ್ಯದಲ್ಲಿ ಇನ್ನೂ ಕೆಲ ನಿರ್ಬಂಧ ಇದೆ. ಹೀಗಾಗಿ ನಿರೀಕ್ಷಿತ ಮಟ್ಟದಲ್ಲಿ ಮಹಾರಾಷ್ಟ್ರದಿಂದ ಜನರು ಬರುತ್ತಿಲ್ಲ. ತೆಲಂಗಾಣದಿಂದ ಹುಣ್ಣಿಮೆಯಂದು ಅಧಿಕ ಭಕ್ತರು ಆಗಮಿಸುತ್ತಾರೆ. ಸದ್ಯ ಭಕ್ತರುವಾಸ್ತವ್ಯ ಮಾಡದೇ ಬಂದ ದಿನವೇ ಮರಳಿ ಹೋಗುತ್ತಿದ್ದಾರೆ. ರೂಮ್ ಬುಕ್ಕಿಂಗ್ ಆರಂಭವಾಗಿಲ್ಲ.
ಘತ್ತರಗಿ ಭಾಗ್ಯವಂತಿ: ಅಫಜಲಪುರ ತಾಲೂಕಿನ ಮತ್ತೂಂದು ಪ್ರಸಿದ್ಧ ಯಾತ್ರಾ ಸ್ಥಳ ಘತ್ತರಗಿ ಭಾಗ್ಯವಂತಿ ದೇವಸ್ಥಾನ. ವಿಜಯ ನಗರದ ಅರಸರ ಕುಲದೇವತೆಯಾದ ಭಾಗ್ಯವಂತಿ, ಸರ್ಪ ರೂಪದಲ್ಲಿ ಬಂದು ಘತ್ತರಗಿಯಲ್ಲಿ ಬಂದು ನೆಲೆಸಿದಳು ಎನ್ನುವ ಐತಿಹ್ಯ ಇದೆ. ದೇವಿ ದರ್ಶನದೊಂದಿಗೆ ಇಲ್ಲೂ ಕೂಡ ಭಕ್ತರು ಪುಣ್ಯ ಸ್ನಾನ ಮಾಡುತ್ತಾರೆ. ದಸರಾ ನಂತರದಿಂದ ಅಧಿಕ ಸಂಖ್ಯೆಯಲ್ಲಿ ಪಕ್ಕದ ಜಿಲ್ಲೆಗಳು ಹಾಗೂ ಬೇರೆಡೆಗಳಿಂದಲೂ ಬರುತ್ತಿದ್ದಾರೆ. ದೀಪಾವಳಿ ಪ್ರಯುಕ್ತ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದೆ. ಪ್ರತಿ ಶುಕ್ರವಾರದಂದು ಅಪಾರ ಪ್ರಮಾಣದಲ್ಲಿ ಯಾತ್ರಿಕರು ಪುಣ್ಯ ಕ್ಷೇತ್ರದಲ್ಲಿ ಸೇರುತ್ತಿದ್ದಾರೆ. ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಈಗಾಗಲೇ ರೂಮ್ ಬುಕ್ಕಿಂಗ್ ಆರಂಭಗೊಂಡಿದ್ದು, ಆದಾಯವೂ ಬರುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ವ್ಯಾಪ್ತಿಯ ಎಲ್ಲ 52 ಕೊಠಡಿಗಳು ಬುಕ್ ಆಗುತ್ತಿವೆ. ಅಧಿಕ ಜನರು ಸೇರುತ್ತಿದ್ದರಿಂದ ಗರ್ಭ ಗುಡಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಿಂಡಿಯಿಂದ ಮಾತ್ರ ಭಕ್ತರು ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅನ್ನ ದಾಸೋಹ ಇನ್ನೂ ಆರಂಭಿಸಿಲ್ಲ. ದೇವಸ್ಥಾನದ ಮಹಾದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ.
ಸನ್ನತಿ ಬೌದ್ಧತಾಣ, ಚಂದ್ರಲಾ ಪರಮೇಶ್ವರಿ: ಚಿತ್ತಾಪುರ ತಾಲೂಕಿನ ಬೌದ್ಧತಾಣವಾದ ಸನ್ನತಿ ಹಾಗೂ ಚಂದ್ರಲಾ ಪರಮೇಶ್ವರಿ ಸುಕ್ಷೇತ್ರದಲ್ಲಿ ಜನರ ಸಂಖ್ಯೆ ಅಧಿಕವಾಗುತ್ತಿದೆ. ಸಾಮ್ರಾಟ್ ಅಶೋಕನ ಕಾಲದ ಐತಿಹಾಸಿಕ ಕುರುಹುಗಳನ್ನು ಹೊಂದಿರುವ ಸಮೀಪದ ಕನಗನಹಳ್ಳಿ ಉತ್ಖನ ಸ್ಥಳದಲ್ಲಿ ಲಾಕ್‌ಡೌನ್‌ನಿಂದ ಆರೇಳು ತಿಂಗಳ ಕಾಲ ಸಂಪೂರ್ಣವಾಗಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಈಗ ಕಳೆದ
ಒಂದು ತಿಂಗಳಿಂದ ಪ್ರವಾಸಿಗರ ಪ್ರವೇಶಕ್ಕೆ ಅವಕಾಶಮಾಡಿಕೊಡಲಾಗಿದೆ. ಹೀಗಾಗಿ ಜನರು ಬರ ತೊಡಗಿದ್ದಾರೆ. ಇತಿಹಾಸ ಅಧ್ಯಯನ ಆಸಕ್ತರು, ಗಣ್ಯರು ಭೇಟಿ ನೀಡುತ್ತಿದ್ದಾರೆ. ಪಕ್ಕದ ಚಂದ್ರಲಾ ಪರಮೇಶ್ವರಿ ದೇವಸ್ಥಾನವೂ ಭಕ್ತರಿಗೆ ಮುಕ್ತವಾಗಿದೆ. ಶ್ರೀ ಚಕ್ರಾಕಾರದ ದೇವಸ್ಥಾನವು ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಅಕ್ಕ-ಪಕ್ಕ ಜಿಲ್ಲೆಗಳ ಜನರು ಬಂದು ದೇವಿ ದರ್ಶನ ಪಡೆಯುತ್ತಿದ್ದಾರೆ. ಇಲ್ಲಿ ವಾಸ್ತವ್ಯಕ್ಕೆ ಅವಕಾಶ ಇದ್ದು, ಭಕ್ತರು ವಾಸ್ತವ್ಯ ಹೂಡುತ್ತಿದ್ದಾರೆ.
ಚಿಂಚೋಳಿ ವನ್ಯಜೀವಿ ಧಾಮ: ದಕ್ಷಿಣ ಭಾರತದ ಏಕೈಕ ಶುಷ್ಕ ವಲಯವಾದ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಭಕ್ತರ ದಂಡು ಜೋರಾಗಿದೆ. ಕರ್ನಾಟಕ-ತೆಲಂಗಾಣದಗಡಿಯಲ್ಲಿ ಹೊಂದಿಕೊಂಡಿರುವ ಚಿಂಚೋಳಿ ಅರಣ್ಯ ಹಸಿರಿನಿಂದ ಮೈದುಂಬಿಕೊಂಡಿದ್ದು, ಮಿನಿ ಮಲೆನಾಡು ಎಂದೇ ಖ್ಯಾತಿ ಹೊಂದಿದೆ. ಪ್ರಸಕ್ತ ಉತ್ತಮ ಮಳೆಯಿಂದ ಚಿಂಚೋಳಿ ಪರಿಸರದಲ್ಲಿ ಮನಮೋಹಕರಮಣೀಯ ದೃಶ್ಯ ಕಾವ್ಯ ಸೃಷ್ಟಿಯಾಗಿದ್ದು, ಸವಿಯಲು ಜನರು ಲಗ್ಗೆ ಹಿಡುತ್ತಿದ್ದಾರೆ.
ಕೊಂಚಾವರಂ, ಸಂಗಾಪುರ, ಶಾದಿಪುರ, ಗೊಟ್ಟಂಗೊಟ್ಟ , ಚಂದ್ರಂಪಳ್ಳಿ ಜಲಾಶಯ, ಎತ್ತಪೋತಾ ಜಲಪಾತ, ಮಾಣಿಕಪುರ ಜಲಪಾತ, ನಾಗರಾಳ್ ಜಲಾಶಯಗಳಿಗೆ ಕುಟುಂಬ ಸಮೇತರಾಗಿ ಜನರು ಭೇಟಿ ನೀಡುತ್ತಿದ್ದಾರೆ. ಲಾಕ್‌ಡೌನ್ ಸಡಿಲಿಕೆ ನಂತರ ಜಿಲ್ಲೆಯ ಇತರ ಸ್ಥಳಗಳಿಂತ ಹೆಚ್ಚಿನ ಸಂಖ್ಯೆಯಲ್ಲಿ ಚಿಂಚೋಳಿಗೆ ಭೇಟಿ ಕೊಡುತ್ತಿದ್ದಾರೆ. ಕಣ್ಣುಹಾಯಿಸಿದಲ್ಲೆಲ್ಲ ಹಚ್ಚ ಹಸಿರೇ ಕಂಗೊಳಿಸುತ್ತಿದ್ದು, ಕಾರು, ಬೈಕ್ ಗಳಲ್ಲಿ ಗುಂಪಾಗಿ ಪ್ರವಾಸರು ಲಗ್ಗೆ ಇಡುತ್ತಿದ್ದಾರೆ. ವಾರಾಂತ್ಯ ಹಾಗೂ ಸಾರ್ವಜನಿಕ ರಜೆ ಸಮಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದಾರೆ. ಚಂದ್ರಂಪಳ್ಳಿ ಜಲಾಶಯ, ಎತ್ತಪೋತಾ ಜಲಪಾತದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಸೇರುತ್ತಿದ್ದಾರೆ. ಅತಿಥಿಗೃಹಗಳು, ಯಾತ್ರಿ ನಿವಾಸಿಗಳಿಗೆ ಬೇಡಿಕೆ ಹೆಚ್ಚಿದೆ.
ಬಹಮನಿ ಕೋಟೆ: ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಬಹಮನಿ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರು, ಸಾರ್ವಜನಿಕರ ಸಂಖ್ಯೆ ಅಧಿಕವಾಗಿದೆ. ವಿಶಾಲವಾದ ಕೋಟೆಯೊಳಗೆ ಓಡಾಟಕ್ಕೆ ಮುಕ್ತ ಅವಕಾಶ ಇದೆ. ಶತಮಾನಗಳ ಹಿಂದಿನ ಬಹಮನಿ ಸಾಮ್ರಾಜ್ಯದ ತೋಪುಗಳು ಹಾಗೂ ಕೋಟೆ ಒಳಗಡೆ ಇರುವ ಆಕರ್ಪಕ ಜಾಮಾ ಮಸೀದಿ ನೋಡಲು ಜನರು ಬರುತ್ತಿದ್ದಾರೆ. ಐತಿಹಾಸಿಕ ಕೋಟೆ ನಂತರ ಪ್ರವಾಸಿಗರು, ಪ್ರಸಿದ್ಧ ಖಾಜಾ ಬಂದೇ ನವಾಜ್ ದರ್ಗಾ, ಶರಣಬಸವೇಶ್ವರ ದೇವಸ್ಥಾನಗಳಿಗೂ ಭೇಟಿ ಕೊಡುತ್ತಿದ್ದಾರೆ. ಅಲ್ಲಿಂದ ಹೊರವಲಯದ ಬುದ್ಧ ವಿಹಾರಕ್ಕೆ ತೆರಳುತ್ತಿದ್ದಾರೆ.ಶರಣಬಸವೇಶ್ವರ ದೇವಸ್ಥಾನದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್,ಸ್ಯಾನಿಟೈಜರ್ ಮುಂತಾದ ಮುನ್ನೆಚ್ಚರಿಕೆ ಕ್ರಮಗಳು ಅನುಸರಿಕೊಂಡು ಬರಲಾಗುತ್ತಿದೆ.
ಖಾಜಾ ಬಂದೇ ನವಾಜ್ ದರ್ಗಾದಲ್ಲಿ ಯಾತ್ರಿಗಳಿಗೆ ಸಮಯ ನಿಗದಿ ಮಾಡಲಾಗಿದೆ. ಬೆಳಿಗ್ಗೆ 6ರಿಂದ 2 ಗಂಟೆ ಮತ್ತು ಸಂಜೆ 4ರಿಂದ 7 ಗಂಟೆಯವರೆಗೆ ಮಾತ್ರ ದರ್ಗಾ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ದರ್ಗಾ ಆವರಣದೊಳಗೆ ಉಳಿದುಕೊಳ್ಳಲು ಹಾಗೂ ಅಡುಗೆ ಮಾಡುವುದಕ್ಕೆ ಅನುಮತಿ ನೀಡುತ್ತಿಲ್ಲ. ನಿತ್ಯವೂ ದರ್ಗಾಕ್ಕೆ ಭೇಟಿ ಕೊಡುವರ ಸಂಖ್ಯೆ ಹೆಚ್ಚುತ್ತಿದೆ. ದರ್ಗಾ ಮುಖ್ಯದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಜರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.