ಕಲಬುರಗಿ ವಿಮಾನನಿಲ್ದಾಣದಲ್ಲಿ ತರಬೇತಿ ತಂಡ
Team Udayavani, Jan 20, 2021, 2:06 PM IST
ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ತರಬೇತಿ ಪಡೆಯಲು 15 ಜನರ ತಂಡವೊಂದು ಬಂದಿದೆ. ತರಬೇತಿ ನೀಡಲು ಆರು ನುರಿತ ವಿಮಾನ ಚಾಲಕರು ಹಾಗೂ ತಜ್ಞರು ಬಂದಿದ್ದಾರೆ. ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಯುರಾನ್ ಅಕಾಡೆಮಿ (ಐಜಿಆರ್‌ಯುಎ)ಯವರು ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ನಡೆಸುವ ಪೈಲಟ್ ತರಬೇತಿ ಮಂಗಳವಾರದಿಂದ ಆರಂಭವಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ತರಬೇತಿ ಕೇಂದ್ರ ಶುರುವಿಗೆ ಮುನ್ನುಡಿ ಬರೆದಂತಾಗಿದೆ.
ವಾಣಿಜ್ಯ ಪೈಲಟ್‌ಗಳ ಪರವಾನಗಿ ಪಡೆದುಕೊಳ್ಳುವ ಆಕಾಂಕ್ಷಿಗಳಿಗೆ ಪೈಲಟ್ ತರಬೇತಿ ನೀಡುವ ದೇಶದ ಪ್ರಮುಖ ಫ್ಲೈಯಿಂಗ್ ತರಬೇತಿ ಸಂಸ್ಥೆಯಾಗಿರುವ ಐಜಿಆರ್ ಯುಎ ನಾಗರಿಕ ವಿಮಾನಯಾನ ಸಚಿವಾಲಯದ ನಿಯಂತ್ರಣದಲ್ಲಿದೆ. ದೇಶದ ಅತ್ಯುತ್ತಮ ಪೈಲಟ್‌ಗಳು ಈ ಸಂಸ್ಥೆಯಲ್ಲಿಯೇ ಕಲಿತುಕೊಂಡಿರುವುದು ವಿಶೇಷ. ಕಲಬುರಗಿಗೆ ಆಗಮಿಸಿರುವ ವಿಮಾನ ಹಾರಾಟದ ತರಬೇತಿ ತಂಡವು ಬರುವ ಮಾರ್ಚ್ 31ರ ವರೆಗೆ ತರಬೇತಿ ಪಡೆಯಲಿದೆ.
ಇದನ್ನೂ ಓದಿ:ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!
ಆತ್ಮನಿರ್ಭರ ಭಾರತ ಘೋಷಣೆಯ ದೂರದೃಷ್ಟಿ ಯೋಜನೆ ಭಾಗವಾಗಿ ವಿಮಾನಯಾನ ಸಚಿವಾಲಯವು ಕಲಬುರಗಿಯಲ್ಲಿ ವಿಮಾನಯಾನ ತರಬೇತಿ ಆರಂಭಿಸಿದ್ದು, ಸಂಸದ ಡಾ| ಉಮೇಶ ಜಾಧವ ಮಂಗಳವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ತರಬೇತಿ ನಿರತ ಪೈಲಟ್‌ಗಳಿಗೆ ಶುಭ ಕೋರಿದರು. ತರಬೇತಿ ಮುಖ್ಯಸ್ಥ ಕ್ಯಾಪ್ಟನ್ ಕುಂಜನ್ ಭಟ್, ತರಬೇತುದಾರ ಭರನಾಸಿಂಗ್, ವಿಮಾನ ನಿಲ್ದಾಣ ನಿರ್ದೇಶಕ ಜ್ಞಾನೇಶ್ವರರಾವ್, ತರಬೇತಿ ಸಂಸ್ಥೆ ಆಡಳಿತಾಧಿಕಾರಿ ಗೋಪಾಲರಾವ ಪಿಳ್ಳೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.