ತ್ರಿವಳಿ ತಲಾಖ್-ಹಸ್ತಾಕ್ಷರ ಅಭಿಯಾನ: ಚುಲ್‌ಬುಲ್
Team Udayavani, Nov 3, 2017, 10:15 AM IST
ಕಲಬುರಗಿ: ತ್ರಿವಳಿ ತಲಾಖ್‌ಗೆ ಸಂಬಂಧಪಟ್ಟಂತೆ ದೇಶದಲ್ಲಿರುವ ಎಲ್ಲ ಮುಸ್ಲಿಂ ಪುರುಷರು ಮತ್ತು ಮಹಿಳೆಯರು
ಹಸ್ತಾಕ್ಷರದ ಅಭಿಯಾನ ನಡೆಸಿ ಜತೆಗೆ ಸಾರ್ವಜನಿಕ ಸಭೆಗಳನ್ನು ಆಯೋಜಿಸಿ ನಿರ್ಣಯ ಕೈಗೊಂಡು ರಾಷ್ಟ್ರಪತಿ,
ಪ್ರಧಾನಮಂತ್ರಿ, ಕಾನೂನು ಸಚಿವಾಲಯ, ಕಾನೂನು ಅಯೋಗಕ್ಕೆ ಸಲ್ಲಿಸಲು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿದೆ ಎಂದು ಮಂಡಳಿ ಸದಸ್ಯರಾಗಿರುವ ಕುಡಾ ಅಧ್ಯಕ್ಷ ಮೊಹಮ್ಮದ ಅಸಗರ ಚುಲ್‌ಬುಲ್ ಹೇಳಿದರು.
ಹಜ್ ಸಮಿತಿ ನಗರದ ನಯಾಮೋಹಲ್ಲಾದಲ್ಲಿ ನಡೆದ ಸಲಹಾ ಸಭೆ ನಡೆಸಿ ಮಾತನಾಡಿದ ಅವರು, ಮಧ್ಯಪ್ರದೇಶದ ಭೋಪಾಲ ರಾಜಧಾನಿಯಲ್ಲಿ ನಡೆದ ಕಾನೂನು ಮಂಡಳಿ ಸಭೆಯಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿನ ಪ್ರಕಾರ ಆರು ತಿಂಗಳೊಳಗೆ ತ್ರಿವಳಿ ತಲಾಖ್ ಬಗ್ಗೆ ಕಾನೂನು ರೂಪಿಸಬೇಕೆಂಬ ಆದೇಶದ ಪ್ರಕಾರದ ಹಿನ್ನೆಲೆಯಲ್ಲಿ ಹಸ್ತಾಕ್ಷರದ ಅಭಿಯಾನ ನಿರ್ಣಯಿಸಲಾಗಿದೆ ಎಂದು ವಿವರಿಸಿದರು. ದೇಶದ ಸಂವಿಧಾನದಲ್ಲಿ ತಮ್ಮ-ತಮ್ಮ ಧರ್ಮಾನುಸಾರ ಜೀವನ ನಡೆಸಬೇಕೆಂದು ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ವಿನಾಕಾರಣ ಶರಿಯತ್ ನಲ್ಲಿ ಹಸ್ತಕ್ಷೇಪ ಮಾಡಲು ಹುನ್ನಾರ ನಡೆಸಿ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಕಲಬುರಗಿ ಜಿಲ್ಲೆ ಸೇರಿದಂತೆ ಹೈದ್ರಾಬಾದ್ ಕರ್ನಾಟಕದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಹಸ್ತಾಕ್ಷರ ನಡೆಸುವ ಕುರಿತಾಗಿಸ ಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ಧರ್ಮದ ವಿವಿಧ ಮುಖಂಡರು ಹಾಜರಿದ್ದರು. ಡಾ| ಹಬೀಬ ರೆಹಮಾನ್, ಮೌಲಾನಾ ನೂಹ್, ಮೌಲಾನಾ ಇಸ್ಮಾಯಿಲ್ ಮುದ್ದಸೀರ, ಮೌಲಾನಾ ಅತೀಕ ಅಹ್ಮದ, ಮೌಲಾನಾ ಶಫಿ, ಅಬ್ದುಲ್ ಜಬ್ಟಾರ ಮಾತನಾಡಿದರು. ಅಣ್ಣಾನಾದ ಮೋತಿ ಸೇಠ್, ಪಾಲಿಕೆ ಸದಸ್ಯರಾದ ಇಸ್ಮಾಯಿಲ್ ಪಲ್ಲಂ, ಅಜಮ್ ಪಟೇಲ್, ಹಬೀಬಕೌಸ್, ಎಜಾಜ್ ಅಹ್ಮದ, ಶಫಿ ಹುಂಡೇಕಾರ್, ಸಲೀಮ್ ಸಿದ್ಧಿಕಿ, ವಲಿ ಅಹ್ಮದ, ಖಾಜಾ ಪಾಶಾ, ಮಖಬೂಲ ಸಗರಿ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi:ರೈಲ್ವೇ ವಿಭಾಗೀಯ ಕಚೇರಿಗಾಗಿ 371 ಜೆ ವಿಧಿ ಜಾರಿ ಮಾದರಿ ಹೋರಾಟ
Kalaburagi: ತೊಗರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕಲಬುರಗಿ ಬಂದ್…
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು
ಹೈಸ್ಕೂಲ್‌ನಲ್ಲಿ ಹಿಂದಿ ಬದಲಿಗೆ ಕೌಶಲ ವಿಷಯ ಆಯ್ಕೆಗೆ ಒತ್ತಡ
Road Mishap: ಲಾರಿ – ಕಾರು ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಮೃ*ತ್ಯು
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್