ಸರಸ್ವತಿ ದೇಗುಲ-ಕಲ್ಯಾಣಿ ಜೀರ್ಣೋದ್ಧಾರಕ್ಕೆ ಭರವಸೆ
Team Udayavani, Jun 1, 2018, 10:56 AM IST
ಕಾಳಗಿ: ಪಟ್ಟಣದ ಸರಸ್ವತಿ ಕಲ್ಯಾಣಿ ಮರುಜೀವ ಪಡೆದುಕೊಂಡಿದ್ದು, ಗುರುವಾರ ತಾಪಂ ಕಾರ್ಯನಿರ್ವಾಹಕ
ಅಧಿಕಾರಿ ಅಬ್ದುಲ್ ನಬಿ ಯಲಗಾರ ಭೇಟಿ ನೀಡಿ ಕಲ್ಯಾಣಿ ಮೆಟ್ಟಿಲು, ಗೋಡೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.
ಮಂಗಳವಾರ “ಉದಯವಾಣಿ’ಯಲ್ಲಿ “ರಾಷ್ಟ್ರಕೂಟರ ಕಾಲದ ಸರಸ್ವತಿ ಕಲ್ಯಾಣಿಗೆ ಮರುಜೀವ’ ಎನ್ನುವ ತಲೆ ಬರಹದಡಿ ಪ್ರಕಟವಾದ ವರದಿಗೆ ಸ್ಪಂದಿಸಿ ಗುರುವಾರ ಕಲ್ಯಾಣಿಗೆ ಭೇಟಿ ನೀಡಿ, ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ಹಾಗೂ ಬಾವಿಯನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು. ಇದಕ್ಕೆ ಗ್ರಾಮಸ್ಥರ ಸಹಾಕಾರ ಅವಶ್ಯವಾಗಿದೆ ಎಂದರು.
ಸರಸ್ವತಿ ಕಲ್ಯಾಣಿ ಸ್ವಚ್ಚತೆ ಕಾರ್ಯ ಪ್ರಾರಂಭಿಸಿದ ಯುವಕರ ಕಾರ್ಯಕ್ಕೆ ಶ್ಲಾಘಿಸಿದ ಅವರು ಕಲ್ಯಾಣಿಯಲ್ಲಿ ನೀರಿನ ಹರಿವು ಹೆಚ್ಚುತ್ತಿರುವುದು ಸಂತಸದಾಯಕ ಆಗಿದೆ ಎಂದರು.
ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಲ್ಯಾಣಿಯಲ್ಲಿನ ಸಂಪೂರ್ಣ ಹೂಳು ತೆಗೆಸಲಾಗುವುದು. ಗೋಡೆ ಹಾಗೂ ಮೆಟ್ಟಿಲುಗಳನ್ನು ಸರಿಪಡಿಸಿ ನಿರ್ಮಿಸಲಾಗುವುದು. ಸರಸ್ವತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಪುರಾತತ್ವ ಇಲಾಖೆಯಡಿ ಅಭಿವೃದ್ಧಿ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.
ಪಂಚಾಯತ ಅಭಿವೃದ್ಧಿ ಅಧಿಕಾರಿ ಸಿದ್ದಣ್ಣ ಬರಗಾಲಿ, ಲೆಕ್ಕಾಧಿಕಾರಿ ಶಾಂತಗೌಡ ಪಾಟೀಲ, ಬಿಲ್ ಕಲೆಕ್ಟರ್ ದತ್ತು
ಕಲಾಲ್, ಪಿಇಎ ಹಣಮಂತರೆಡ್ಡಿ, ಬಿಎಸ್‌ಸಿ ಕಾಳಪ್ಪ ಕಡಬೂರ, ಗ್ರಾಪಂ ಸದಸ್ಯ ಜಗನ್ನಾಥ ಚಂದಕೇರಿ, ಸರಸ್ವತಿ ದೇವಸ್ಥಾನ ಸಮಿತಿ ಅಧ್ಯಕ್ಷ ರವಿದಾಸ ಪತಂಗೆ, ಬಸವರಾಜ ಸಿಂಗಶೆಟ್ಟಿ, ಉದಯಕುಮಾರ ಸಿಂಗಶೆಟ್ಟಿ, ಮುನೀರ ಬಿಜಾಪುರ, ಕೂಲಿ ಕಾರ್ಮಿಕರಾದ ರಂಗಾ ಒಡೆಯರಾಜ, ಸಂತೋಷ ಒಡೆಯರಾಜ, ಅನಿಲ ಒಡೆಯರಾಜ, ತಿಪ್ಪ ಒಡೆಯರಾಜ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.