ಸರಕಾರಗಳಿಗೆ ನಿರುದ್ಯೋಗ ಸವಾಲು
Team Udayavani, Nov 25, 2017, 12:17 PM IST
ಕಲಬುರಗಿ: ಇವತ್ತಿನ ಸರಕಾರಗಳಿಗೆ ನಿರುದ್ಯೋಗ ದೊಡ್ಡ ಸವಾಲಾಗಿದೆ. ಇದನ್ನು ಬೇಧಿಸಲಾಗದೆ ಮತ್ತು ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದೆ ರಾಜಕೀಯ ಪಕ್ಷಗಳು ನಿರುದ್ಯೋಗದ ಸುಳಿಯಲ್ಲಿ ಸಿಲುಕುತ್ತಿವೆ. ಇದಕ್ಕೆ ಯುವಜನತೆ ದಾರಿಕಂಡುಕೊಳ್ಳಬೇಕು ಎಂದು ಉದ್ಯೋಗಕ್ಕಾಗಿ ಯವಜನರು ಸಂಘಟನೆಯ ರಾಜ್ಯ ಸಂಚಾಲಕಿ ಮಲ್ಲಿಗೆ ಹೇಳಿದರು.
ಇಲ್ಲಿನ ಕನ್ನಡ ಭವನದಲ್ಲಿ ಶುಕ್ರವಾರ ಉದ್ಯೋಗಕ್ಕಾಗಿ ಯುವಜನತೆ- ಕರ್ನಾಟಕ ಎನ್ನುವ ವಿಷಯದ ಮೇಲೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆಗಳು ಬಂದಾಗ ಈ ಪಕ್ಷಗಳು ಅಷ್ಟು ಲಕ್ಷಗಟ್ಟಲೇ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ ಎಂದು ನಿರುದ್ಯೋಗಿಗಳಿಗೆ ಭರವಸೆ ನೀಡುತ್ತಾರೆ. ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಮೇಲೆ ಆಲೋಚನೆಗಳೇ ಬರುವುದಿಲ್ಲ. ಹೆಚ್ಚು ಕೇಳಿದರೆ ಕೌಶಲ್ಯವಿಲ್ಲ ಎನ್ನುತ್ತಾರೆ. ಹಾಗಾದರೆ ಕೌಶಲ್ಯವಿಲ್ಲದೆ ಶಿಕ್ಷಣ, ವಿದ್ಯೆಯನ್ನು ಯಾಕೆ ನೀಡಲಾಗುತ್ತಿದೆ. ಪ್ರೌಢಶಾಲೆಯಿಂದ ಪದವಿ ಮುಗಿಯುವುದರೊಳಗೆ ಕೌಶಲ್ಯ ತರಬೇತಿ ಶಿಕ್ಷಣವನ್ನು ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು.
ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ಸರಕಾರಗಳಿಗೆ ಪ್ರಶ್ನೆ ಮಾಡಬೇಕಿದೆ. ಇವತ್ತು ದೇಶದಲ್ಲಿ ಪ್ರತಿವರ್ಷ 18ರಿಂದ 39 ವಯೋಮಾನದ 1.1ಕೋಟಿ ಯುವಕರು ನಿರುದ್ಯೋಗ ಖಾತೆಗೆ ಸೇರುತ್ತಿದ್ದಾರೆ. ಒಟ್ಟಾರೆ ಶೇ. 28.5 ನಿರುದ್ಯೋಗಿಗಳು ಇದ್ದಾರೆ. ಅವರಿಗೆ ಕೆಲಸ ಕೊಡಿಸುವುದು ದೊಡ್ಡ ಸಮಸ್ಯೆ. ಆದ್ದರಿಂದ ಈ ನಿಟ್ಟಿನಲ್ಲಿ ಉದ್ಯೋಗಕ್ಕಾಗಿ
ಯುವಜನರು ಎನ್ನುವ ಸಂಘಟನೆ ಮೂಲಕ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸರಕಾರಗಳನ್ನು ಕೇಳ್ಳೋಣ ಎಂದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಸೂರ್ಯಕಾಂತ ಎಂ.ಜಮಾದಾರ, ಇವತ್ತು ನಿರುದ್ಯೋಗ ಎನ್ನುವುದು ನಮ್ಮನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ದೊಡ್ಡದು. ಇದನ್ನು ರಾಜಕಾರಣ ನಿಭಾಯಿಸುತ್ತಿರುವುದರಿಂದ ನಿರುದ್ಯೋಗಿಗಳು ಅವರ ಮತಗಳಾಗಿ ಮತ್ತು ತಂತ್ರವಾಗಿ ಬಳಕೆ ಆಗುತ್ತಿದ್ದಾರೆ. ಯುವಜನತೆ ತಮ್ಮ ಉದ್ಯೋಗ ಸೃಷ್ಟಿಸಿಕೊಳ್ಳುವ ಮತ್ತು ಮಾಡುವ ನಿಟ್ಟಿನಲ್ಲಿ ಸರಕಾರದ ಮುಂದೆ ಮಂಡಿಯೂರುವುದಕ್ಕಿಂತ ಸ್ವಯಂ ಉದ್ಯೋಗ, ಸಾಲ ಮತ್ತು ಘೋಷಿತ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಮುನ್ನಡೆಯಬೇಕು. ಆಗ ಕೊಂಚ ಮಟ್ಟಿನ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇವತ್ತು ಉದ್ಯೋಗಕ್ಕಾಗಿ ಯುವಜನತೆ ಎನ್ನುವ ಸಂಘಟನೆ ಹೊಸದೊಂದು ಕನಸು ಯುವಕರಿಗೆ ತೋರಿಸಿದೆ. ಅದರೆಡೆ ನಾವು ನಡೆಯಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸಂಘಟನೆ ಅಧ್ಯಕ್ಷ ಜಗಪ್ಪ ತಳವಾರ ಮಾತನಾಡಿ, ಸರಕಾರದ ದ್ವಂದ್ವ ನಿಲುವುಗಳು ಹಾಗೂ ಆಲೋಚನೆಗಳಿಂದಾಗಿ ನಿರುದ್ಯೋಗ ಸೃಷ್ಟಿಯಾಗುತ್ತಿದೆ. ಹಲವಾರು ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಅಲ್ಲದೆ, ಇದ್ದವರಿಗೆ ಉದ್ಯೋಗ ನೀಡುವ ಚಟುವಟಿಕೆಗಳು ಅಕ್ಷರವಂತರು,
ಅಧಿಕಾರಿಗಳು ಹಾಗೂ ರಾಜಕೀಯ ವ್ಯಕ್ತಿಗಳಿಂದ ನಡೆಯುತ್ತಿದೆ. ಇದರಿಂದ ಕೌಶಲ್ಯ ಮತ್ತು ಸಾಮರ್ಥ್ಯ ಇರುವವರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಜಿಲ್ಲಾ ಸಂಚಾಲಕ ರಾಜೇಂದ್ರ ರಾಜವಾಳ ಮಾತನಾಡಿದರು. ಸಂಘಟನೆಯ ಲಕ್ಷ್ಮಣ ಮಂಡಲಗೇರಿ ಹಾಗೂ ಇತರರು ಇದ್ದರು. ಸೈಯಬಣ್ಣಾ ಜಮಾದಾರ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ
Kalaburagi: ಭೀಮಾ ನದಿಗೆ ಬಿದ್ದ ಕಬ್ಬಿನ ಲಾರಿ: ಲಾರಿ ಚಾಲಕ ನಾಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.