ಕೋವಿಡ್ ತಡೆಗೆ ಯುನೈಟೆಡ್ ಆಸ್ಪತ್ರೆ ಮಹತ್ವದ ಹೆಜ್ಜೆ
Team Udayavani, Aug 8, 2020, 3:12 PM IST
ಕಲಬುರಗಿ: ಬೆಂಗಳೂರು ಹೊರತುಪಡಿಸಿ ರಾಜ್ಯದ ಮೊದಲ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರ ಸ್ಥಾಪಿಸುವ ಮೂಲಕ ಜತೆಗೆ ಆ್ಯಂಟಿಜನ್ ರ್ಯಾಪಿಡ್ ಟೆಸ್ಟ್‌ನಲ್ಲೂ ಮೊದಲನೇಯದ್ದಾಗಿ ಪ್ರಾರಂಭಿಸಿದ ಇಲ್ಲಿನ ಯುನೈಟೆಡ್ ಈಗ ಮತ್ತೂಂದು ದೃಢ ಹೆಜ್ಜೆ ಇಟ್ಟಿದೆ.
ನಗರದ ಜಗತ್ ಬಳಿಯ ಬಿಗ್ ಬಜಾರ್ ಎದುರಿನ ಹೆಜಲ್ ಟ್ರೀ ಹಾಸ್ಪಿಟಲ್‌ಅನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸುವ ಹಾಗೂ ನಗರದ ಗ್ರ್ಯಾಂಡ್ ಹೋಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮೂಲಕ ಸಂದಿಗ್ಧ ಪರಿಸ್ಥಿತಿ ನಿಭಾಯಿಸಲು ಸ್ಥಳೀಯ ಆಡಳಿತದೊಂದಿಗೆ ಪ್ರತಿಷ್ಠಿತ ಯುನೈಟೆಡ್ ಆಸ್ಪತ್ರೆ ಮುಂದಾಗಿ ಸಾಮಾಜಿಕ ಹೊಣೆಗಾರಿಕೆ ಮುಂದಾಗಿದೆ. ಡಾ| ಎಸ್.ಎಂ.ಪಂಡಿತ್ ರಂಗಮಂದಿರ ಬಳಿ ಇರುವ ಗ್ರ್ಯಾಂಡ್ ಹೊಟೆಲ್‌ನ್ನು ಸಂಪೂರ್ಣವಾಗಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದೆ. ಅಸಿಂಪ್ಟಮೇಟಿಕ್ ಮತ್ತು ಮೈಡ್ಲಿ ಸಿಂಪ್ಟಮೇಟಿಕ್ (ಲ್ಯಾಬ್ ರಿಪೋರ್ಟ್ ಖಚಿತಪಡಿಸಿದ) ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಆಸ್ಪತ್ರೆ ಮುಂದಾಗಿದೆ ಎಂದು ಯುನೈಟೆಡ್ ಆಸ್ಪತ್ರೆಯ ಮುಖ್ಯಸ್ಥ ಡಾ| ವಿಕ್ರಮ ಸಿದ್ದಾರೆಡ್ಡಿ ತಿಳಿಸಿದ್ದಾರೆ.
ನಗರದ ಬಿಗ್‌ಬಜಾರ್ ಎದುರಿನ ಗಚ್ಚಿನಮನಿ ಟವರ್‌ನಲ್ಲಿರುವ ಹೆಜಲ್ ಟ್ರೀ ಆಸ್ಪತ್ರೆಯನ್ನೂ ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದು, ತುರ್ತು ಪ್ರಕರಣಗಳಿಗೆ ಇಲ್ಲಿ ಚಿಕಿತ್ಸೆ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆ ಐಸಿಯು ಸೌಲಭ್ಯ ಮತ್ತು ಹೈ ಡಿಪೆಂಡನ್ಸಿ ಯುನಿಟ್, ಜನರಲ್ ವಾರ್ಡ್ ಲಭ್ಯವಿದೆ. ಆಸ್ಪತ್ರೆಯ ಎಲ್ಲ ಹಾಸಿಗೆಗಳಿಗೂ ಆಕ್ಸಿಜನ್ ಮತ್ತು ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದ್ದಾರೆ. ಡಾ| ಸುದರ್ಶನ ಲಾಖೆ ಇಂಟೆನ್ಸಿವ್ ಕೇರ್ ಯುನಿಟ್ ಸಾರಥ್ಯ ವಹಿಸಿದ್ದು, ಡಾ| ಮಂಜುನಾಥ ರೆಡ್ಡಿ, ಡಾ| ಶ್ರೀಕಾಂತ, ಡಾ| ಶಕೀಬಂದ್, ಡಾ| ಇರ್ಫಾನ್ (ಅನಸ್ತೇಶಿಯಾ) ಅವರು ಕೋವಿಡ್-19 ರೋಗಿಗಳಿಗೆ ಸೇವೆ ನೀಡಲಿದ್ದಾರೆ. ಡಾ| ದಯಾನಂದ ರೆಡ್ಡಿ, ಡಾ| ಅರೀಪ್ ಗೌಸುದ್ದೀನ್ ಅವರು ಚಿಕಿತ್ಸೆಯ ಪ್ರೊಟೊಕಾಲ್ ಮಾರ್ಗದರ್ಶನ ಮಾಡಲಿದ್ದಾರೆ.
ಏಳು ದಿನದ ಕೇರ್ ಪ್ಯಾಕೇಜ್‌ಗೆ 56 ಸಾವಿರ ರೂ. ಶುಲ್ಕ ವಿಧಿಸಲಾಗುತ್ತಿದೆ. ಈ ಶುಲ್ಕದಲ್ಲಿ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಸೇರಿದೆ. ಪ್ರತಿ ಕೋಣೆಯಲ್ಲೂ ಆಕ್ಸಿಜನ್ ಸಿಲಿಂಡರ್, ವೈದ್ಯರು ಎರಡು ಬಾರಿ ಭೇಟಿ, ದಿನದ 24 ಗಂಟೆ ನರ್ಸಿಂಗ್ ಮೇಲ್ವಿಚಾರಣೆ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ಬಿದ್ದರೆ ಯುನೈಟೆಡ್ ಕೋವಿಡ್ ಬ್ಲಾಕ್ ಆಸ್ಪತ್ರೆ (ಹೆಜಲ್ ಟ್ರೀ ಆಸ್ಪತ್ರೆ) ಸ್ಥಳಾಂತರಿಸಲಾಗುವುದು. ಗ್ರ್ಯಾಂಡ್ ಹೋಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲಾಗಿ ಏಳು ದಿನದ ನಂತರ ಬಿಡುಗಡೆ ಸಂದರ್ಭದಲ್ಲಿ ನೆಗೆಟಿವ್ ಎಂದು ಖಚಿತಪಡಿಸಿಕೊಳ್ಳಲು ಮತ್ತೂಂದು ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದ್ದು, ಈ ಶುಲ್ಕವೂ ಪ್ಯಾಕೇಜ್‌ನಲ್ಲಿ ಸೇರಿದೆ.ಗಣ್ಯ ರೋಗಿಗಳ ಹಿತರಕ್ಷಣೆಗಾಗಿ ಕೋವಿಡ್ ಕೇರ್ ಆಸ್ಪತ್ರೆ ಬದ್ಧವಾಗಿದೆ.
ಕೋವಿಡ್-19 ಪ್ರೊಗ್ನೊಸ್ಟಿಕ್ ಟೆಸ್ಟ್ ಮೂಲಕ 12 ರಕ್ತದ ಸ್ಯಾಂಪಲ್ಸ್ ತಪಾಸಣೆ ನಡೆಸಲು 9 ಸಾವಿರ ರೂ. ದರ ಇದೆ. ಆದರೆ ಯುನೈಟೆಡ್ ಲ್ಯಾಬ್‌ನಲ್ಲಿ ಕೇವಲ 5,550 ರೂ.ನಲ್ಲಿ ಈ ಟೆಸ್ಟ್ ಮಾಡಲಾಗುತ್ತಿದೆ. ಜನರ ಸಹಕಾರ, ಸಾಮಾಜಿಕ ಬದ್ಧತೆಯೊಂದಿಗೆ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ ಎಂದು ಡಾ| ವಿಕ್ರಮ್ ಸಿದ್ಧಾರೆಡ್ಡಿ ವಿವರಿಸಿದ್ದಾರೆ.
ಯುನೈಟೆಡ್ ಆಸ್ಪತ್ರೆಯಲ್ಲಿ ಕಲ್ಯಾಣ ಕರ್ನಾಟಕ ಅದರಲ್ಲೂ ಕಲಬುರಗಿಯ ಜನತೆಗೆ ಉತ್ತಮ ಚಿಕಿತ್ಸೆ ಸೌಲಭ್ಯ, ಆರೈಕೆ ಮಾಡಲಾಗುವುದು. ಕೋವಿಡ್-19 ತಪಾಸಣೆಗಾಗಿ ಅಂತಾರಾಷ್ಟ್ರೀಯ ಮಟ್ಟದ ಮಾಲಿಕ್ಯೂಲರ್ ಬಯೋಲಜಿ ಲ್ಯಾಬ್ ಸ್ಥಾಪಿಸಲಾಗಿದ್ದು, 24 ಗಂಟೆಯಲ್ಲಿ ವರದಿ ಬರುವ ಆರ್‌ಟಿಪಿಆರ್ ಟೆಸ್ಟ್ ಈ ಮೂಲಕ ಮಾಡಲಾಗುತ್ತಿದೆ. ನಿಯಮಾವಳಿ ಸರ್ಕಾರದ ಮಾರ್ಗಸೂಚಿ ಅಡಿಯೇ ಇರುತ್ತವೆ. – ಡಾ| ವಿಕ್ರಮ ಸಿದ್ದಾರೆಡ್ಡಿ, ಮುಖ್ಯಸ್ಥರು, ಯುನೈಟೆಡ್ ಆಸ್ಪತ್ರೆ, ಕಲಬುರಗಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.