ಅನ್ ಲಾಕ್ ; ಸನ್ನತಿ ಬೌದ್ಧ ನೆಲೆ ಪ್ರವಾಸಿಗರಿಗೆ ಮುಕ್ತ
Team Udayavani, Jun 27, 2021, 3:46 PM IST
ವಾಡಿ: ಕಲ್ಯಾಣ ನಾಡಿನ ಹಿರಿಮೆ, ಕ್ರಿಸ್ತಪೂರ್ವ ಮೂರನೇ ಶತಮಾನದ ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕ ಚಕ್ರವರ್ತಿ ಕಾಲಘಟ್ಟಕ್ಕೆ ಸೇರಿದ ಐತಿಹಾಸಿಕ ಬೌದ್ಧ ಸ್ತೂಪ ತಾಣ ಚಿತ್ತಾಪುರ ತಾಲೂಕಿನ ಸನ್ನತಿಗೆ ಪ್ರವಾಸಿಗರ ಆಗಮನ ಶುರುವಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಕೇಂದ್ರ ಪ್ರಾಚ್ಯವಸ್ತು ಇಲಾಖೆ, ಜೂ.16ರಿಂದ ಬುದ್ಧನ ಮೂರ್ತಿಗಳ ವೀಕ್ಷಣೆಗೆ ಮುಕ್ತ ಅವಕಾಶ ನೀಡಿದ್ದರಿಂದ ಪ್ರವಾಸಿಗರು ಸನ್ನತಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೇಂದ್ರ ಸರ್ಕಾರದ ಸುಪ ರ್ದಿಯಲ್ಲಿದ್ದು, ಸೂಕ್ತ ಭದ್ರತೆಯಲ್ಲಿರುವ ಈ ಪ್ರವಾಸಿ ತಾಣಕ್ಕೆ ರಾಜ್ಯದ ಅನೇಕ ಕಡೆಗಳಿಂದ ಜನರು ಆಗಮಿಸಿ ವೀಕ್ಷಿಸುತ್ತಾರೆ.
ಇಲ್ಲಿ ಮೌರ್ಯ ಸಾಮ್ರಾಜ್ಯದ ಮಹತ್ವದ ಕುರುಹುಗಳು, ಶಿಲಾ ಶಾಸನಗಳು, ಬುದ್ಧನ ಸಾವಿರಾರು ಶಿಲಾ ಮೂರ್ತಿಗಳು, ಬೌದ್ಧ ಸ್ತೂಪ, ನಾಗಜನಾಂಗದ ಜೀವನ ಮತ್ತು ಬೌದ್ಧ ಪರಂಪರೆ ಸಾರುವ ಅಸಂಖ್ಯಾತ ಶಿಲ್ಪಕಲೆಯ ಅವಶೇಷಗಳಿವೆ. ದೇಶ-ವಿದೇಶಗಳಿಂದ ಪ್ರವಾಸಿಗರು ವೀಕ್ಷಣೆ ಮತ್ತು ಅಧ್ಯಯನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಲಾಕ್ ಡೌನ್ ತೆರವಾದ ಬಳಿಕ ಕಳೆದೊಂದು ವಾರದಿಂದ ಪ್ರವಾಸಿಗರ ಭೇಟಿಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಇಲ್ಲಿನ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಸನ್ನತಿ ಗ್ರಾಮದ ಭೀಮಾ ನದಿ ದಂಡೆಯ ನೆಲದಡಿ ಪತ್ತೆಯಾಗಿರುವ ಸಾಮ್ರಾಟ್ ಅಶೋಕ ಚಕ್ರವರ್ತಿಯ ಆಡಳಿತ ಸ್ಮರಿಸುವ ಶಿಲೆಗಳು, ಸಾಹಿತಿಗಳ ಮತ್ತು ಸಂಶೋಧಕರ ಗಮನ ಸೆಳೆದಿವೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಪೂರ್ಣ ಮಾಹಿತಿ ದಾಖಲಿಸಿಕೊಳ್ಳಲಾಗುತ್ತಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡೇ ಮೂರ್ತಿಗಳ ವೀಕ್ಷಣೆ ಮಾಡಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
Bigg Boss: ಟಾಸ್ಕ್ ಮೂಲಕ ನಡೆಯಿತು ಮಿಡ್ ವೀಕ್ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್
Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ
Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ
Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.