ಸಂಭ್ರಮದ ವಚನ ವಿಜಯೋತ್ಸವ
Team Udayavani, Jan 1, 2018, 11:22 AM IST
ಜೇವರ್ಗಿ: ಬಸವಕೇಂದ್ರ ಹಾಗೂ ಲಿಂಗಾಯತ ಸಮನ್ವಯ ಸಮಿತಿ ತಾಲೂಕು ಘಟಕಗಳ ವತಿಯಿಂದ ಬೀದರನ ಬಸವಸೇವಾ ಪ್ರತಿಷ್ಠಾನದ ಅಕ್ಕಅನ್ನಪೂರ್ಣ ತಾಯಿಯವರ ನೇತೃತ್ವದಲ್ಲಿ ಆಯೋಜಿಸಲಾದ್ದ ರವಿವಾರ ಪಟ್ಟಣದಲ್ಲಿ ವಚನ ವಿಜಯೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯಿತು.
ಪಟ್ಟಣದ ಚರಚಕ್ರವರ್ತಿ ಷಣ್ಮುಖ ಶಿವಯೋಗಿಗಳ ವಿರಕ್ತ ಮಠದ ಆವರಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಬಸವಾಭಿಮಾನಿಗಳು ಕೈಯಲ್ಲಿ ಷಟಸ್ಥಲ ಧ್ವಜ ಹಿಡಿದು ಬಸವಾದಿ ಶರಣರ ಜಯಘೋಷ ಹಾಕಿದರು. ಮಧ್ಯಾಹ್ನ 2:00ಕ್ಕೆ ವಚನ ವಿಜಯೋತ್ಸವ ಮೆರವಣಿಗೆಗೆ ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಮಲ್ಲಣ್ಣ ಅವುಂಟಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ವಚನ ಸಾಹಿತ್ಯದ ಗ್ರಂಥ ತಲೆ ಮೇಲೆ ಹೊತ್ತು ಭಾಗವಹಿಸಿದ್ದು ವಿಶೇಷವಾಗಿತ್ತು. ಸೊಲ್ಲಾಪುರದ ನಾಶೀಕ ಡೋಲ್, ಡೊಳ್ಳು ಕುಣಿತ, ಬೀದರನ ಮಹಿಳೆಯರ ನೃತ್ಯ ಎಲ್ಲರ ಗಮನ ಸೆಳೆಯಿತು. ವಚನ ವಿಜಯೋತ್ಸವ ಹಾಡಿಗೆ ಬಸವಜಯಮೃತ್ಯುಂಜಯ ಸ್ವಾಮೀಜಿ, ಬೀದರನ ಬಸವಸೇವಾ ಪ್ರತಿಷ್ಠಾನದ ಅಕ್ಕಅನ್ನಪೂರ್ಣ ಮಹಿಳೆಯರೊಂದಿಗೆ ವಚನ ಗಾಯನಕ್ಕೆ ನೃತ್ಯ ಮಾಡಿ ಎಲ್ಲರ ಗಮನ ಸೆಳೆದರು.
ಶಿವಯೋಗಿ ಮಠದಿಂದ ಆರಂಭವಾದ ಮೆರವಣಿಗೆ ಅಖಂಡೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೈತ್ತದ ಮೂಲಕ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿತು. ಮೆರವಣಿಗೆ ಸಂದರ್ಭದಲ್ಲಿ ಅಂಬೇಡ್ಕರ್ ವೃತ್ತದ ಬಳಿ ಪುತ್ಥಳಿಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪುಷ್ಪಗುಚ್ಚ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಬಸವಾಭಿಮಾನಿಗಳಿಗೆ ಕುಡಿಯುವ ನೀರು, ಬಾಳೆಹಣ್ಣು ವಿತರಿಸಿದರು. ನಂತರ ದಲಿತ ಮಹಿಳೆಯರು ಅಕ್ಕಅನ್ನಪೂರ್ಣ ತಾಯಿ ಹಾಗೂ] ಬಸವಜಯಮೃತ್ಯುಂಜಯ ಸ್ವಾಮೀಜಿಗೆ ಶಾಲು ಹೊದಿಸಿ ಸತ್ಕರಿಸಿದರು. ಕಾರ್ಯಕ್ರಮಕ್ಕೆ ಜಿಲ್ಲೆ ಸೇರಿದಂತೆ ಬೀದರ, ವಿಜಯಪುರ, ಯಾದಗಿರಿ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಸಹಸ್ರಾರು ಬಸವಾಭಿಮಾನಿಗಳು ಆಗಮಿಸಿದ್ದರು.
ಮೆರವಣಿಗೆ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಗುರುಲಿಂಗಪ್ಪಗೌಡ ಮಾಲಿಪಾಟೀಲ, ಸೋಮಣ್ಣ ನಡಕಟ್ಟಿ, ಮಲ್ಲಣ್ಣ ನಾಗರಾಳ, ರವೀಂದ್ರ ಶಾಬಾದಿ, ಗೌಡಪ್ಪಗೌಡ ಪಾಟೀಲ, ಕಸಾಪ ಅಧ್ಯಕ್ಷ ಶಿವನಗೌಡ ಪಾಟೀಲ ಹಂಗರಗಿ, ಬಸವಕೇಂದ್ರದ ಶರಣಬಸವ ಕಲ್ಲಾ, ಗುವಿವಿ ಸಿಂಡಿಕೇಟ್ ಸದಸ್ಯ ಸಂಗನಗೌಡ ಗುಳ್ಯಾಳ, ಮುಖಂಡರಾದ ಬಾಪುಗೌಡ ಬಿರಾಳ, ದಲಿತ ಮುಖಂಡರಾದ ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಶ್ರೀಮಂತ ಧನಕರ್, ರವಿ ಕುರಳಗೇರಾ, ಸಂತೋಷ ಹಡಪದ, ಮುಸ್ಲಿಂ ಮುಖಂಡ ಯುನೂಸ್ ಬಾಗವಾನ, ನೀಲಕಂಠ ಅವುಂಟಿ, ಸಿದ್ದು ಯಂಕಂಚಿ, ಎಂ.ಎಸ್. ಪಾಟೀಲ, ವಿಶ್ವನಾಥರೆಡ್ಡಿ ರಾಜಳ್ಳಿ, ಮಲ್ಕಣಗೌಡ ಹೆಗ್ಗಿನಾಳ, ಬಿ.ಎನ್. ಪಾಟೀಲ, ಗುರುಗೌಡ ಮಾಲಿಪಾಟೀಲ, ಶಿವಲಿಂಗ ಹಂಗರಗಿ, ಬಸವರಾಜ ಕೋಳಕೂರ, ರಾಜಶೇಖರ ಶಿಲ್ಪಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.