![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 8, 2020, 4:45 PM IST
ಕಲಬುರಗಿ: ಇದೇ ತಿಂಗಳು 28ರಂದು ನಡೆಯುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ವಾಟಾಳ್ ನಾಗರಾಜ ಕಲಬುರಗಿಯಲ್ಲಿ ದಿಢೀರ್ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ. ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಸಿದ್ದಾರೆ.
ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಚುನಾವಣಾಧಿಕಾರಿ ಎನ್.ವಿ ಪ್ರಸಾದ ಅವರಿಗೆ ವಾಟಾಳ ನಾಗರಾಜ್ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಈ ಭಾಗದಲ್ಲೂ ಸಾಕಷ್ಟು ಸಂಪರ್ಕ ಇರುವುದರಿಂದ ಸ್ಪರ್ಧಿಸಲಾಗಿದೆ ಎಂದರು.
ಸದ್ಯಕ್ಕೆ ಶಾಲಾ ಕಾಲೇಜು ಆರಂಭ ಬೇಡ ಬೇಡ ಎಂದ ಅವರು, ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಕ್ಕಳಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ವಿದ್ಯೆ ಬೇಕು, ಆದ್ರೆ ಪ್ರಾಣ ಅದಕ್ಕಿಂತ ಮುಖ್ಯ. ಪ್ರಾಣ ಇದ್ದರೆ ವಿದ್ಯೆ. ಪ್ರಾಣವೇ ಇಲ್ಲಂದ್ರೆ ವಿದ್ಯೆ ಎಲ್ಲಿಂದ ಎಂದು ಖಾರವಾಗಿ ಪ್ರಶ್ನಿಸಿದರು.
ಸಚಿವ ಸುರೇಶ್ ಕುಮಾರ ಮಕ್ಕಳ ಪ್ರಾಣದ ಜೊತೆ ಆಟ ಆಡಬಾರದು. ಸಚಿವರು ಗಂಭೀರವಾಗಿ ಚಿಂತಿಸಿ ಶಾಲಾ ಕಾಲೇಜು ಮುಂದೂಡಬೇಕು. ಯಾವುದೇ ಕಾರಣಕ್ಕೂ ಸದ್ಯಕ್ಕೆ ತೆಗೆಯಬಾರದು ಎಂದರು.
ಇದನ್ನೂ ಓದಿ:ಸತತ 13ನೇ ವರ್ಷವೂ ಫೋರ್ಬ್ಸ್ ಭಾರತೀಯರ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ನಂಬರ್ ವನ್
ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿದೆ. ಸಿಎಂ ಯಡಿಯೂರಪ್ಪ ಅವರಿಗೆ ಬುದ್ದಿ ಕೆಟ್ಟು ಹೋಗಿದೆ. ಕೋವಿಡ್ ತಡೆಗಟ್ಟಲು ಸಿಎಂ ಯಡಿಯೂರಪ್ಪ ವಿಫಲರಾಗಿದ್ದಾರೆ. ಹೀಗಾಗಿ ಯಡಿಯೂರಪ್ಪಗೆ ಗೌರವ ಇದ್ರೆ ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದರು.
ಕೋವಿಡ್ ಸೋಂಕಿನಿಂದ ನಿತ್ಯ ಸಾವು ಹೆಚ್ಚುತ್ತಿವೆ. ಆದರೆ ಯಡಿಯೂರಪ್ಪ ಕೋವಿಡ್ ಕೈ ಬಿಟ್ಟಿದ್ದಾರೆ. ದುರಾಡಳಿತ ನಡೆಸುತ್ತಿದ್ದಾರೆ. ಸಾಯುವವರು ಸಾಯಲಿ. ನಾನು ನನ್ನ ಪಾಡಿಗೆ ಆರಾಮಾಗಿರ್ತಿನಿ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ಬಗ್ಗೆ ರಾಜ್ಯದಲ್ಲಿ ಮೊದಲಿನ ಭಯ, ಭೀತಿ , ಶಿಸ್ತು ಮಾಯವಾಗಿದೆ. ಸರಕಾರಿ ಆಸ್ಪತ್ರೆಗಳು ಯಮಲೋಕ. ವೈದ್ಯರು ಯಮಧರ್ಮ. ಅವರನ್ನ ಕೇಳಂಗೇ ಇಲ್ಲ. ಇನ್ನೂ ಖಾಸಗಿ ಆಸ್ಪತ್ರೆಯವರು ಲೂಟಿಗಿಳಿದಿದ್ದಾರೆ. ಇದೆಲ್ಲವನ್ನೂ ಯಾರು ತಡೆಯೋರು ಎಂದು ವಾಟಾಳ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.