ವೀರಭದ್ರೇಶ್ವರ ಜಾತ್ರೋತ್ಸವ ವೈಭವ
Team Udayavani, Jan 26, 2018, 1:13 PM IST
ಹುಮನಾಬಾದ: ಪಟ್ಟಣದ ಕುಲದೇವ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು, ಭಕ್ತರ ಗಮನ ಸೆಳೆಯುವಂತಾಗಿದೆ. ಹೈದ್ರಾಬಾದ ಕರ್ನಾಟಕ ಭಾಗದ ಪ್ರಮುಖ ಜಾತ್ರೆ ಎಂದು ಖ್ಯಾತಿ ಪಡೆದ ವೀರಭದ್ರೇಶ್ವರ ಜಾತ್ರೆ ಜ.14ರಿಂದ ಆರಂಭಗೊಂಡಿದ್ದು, ಜ.27ರ ವರೆಗೆ ನಡೆಯಲಿದೆ. ಆ.24ರಂದು ರಾತ್ರಿ ನಡೆದ ಕಾಶಿ ಮೆರವಣಿಗೆ ಭಕ್ತರಲ್ಲಿ ಶ್ರದ್ಧೆ ಭಕ್ತಿ ಮೂಡಿಸಿತು. ಕಾಶಿ ಮೆರವಣಿಗೆ ಬುಧವಾರ ಮಧ್ಯರಾತ್ರಿ
1ಗಂಟೆ ದೇವಸ್ಥಾನದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗುರುವಾರ ಮಧಾಹ್ನ ದೇವಸ್ಥಾನಕ್ಕೆ
ತಲುಪ್ಪಿತು.
ಗುರುವಾರ ಬೆಳಗಿನ ಜಾವದಿಂದ ಪಟ್ಟಣದ ಮಹಿಳೆಯರು ಅಗ್ನಿ ಕುಂಡಕ್ಕೆ ತೆರಳಿ ನೀರು ಎರೆದು ನೈವೇದ್ಯ ಸಲ್ಲಿಸಿದರು. ಮಧ್ಯಾಹ್ನ ದವರೆ ಸಾವಿರಾರು ಮಹಿಳೆರು ಅಗ್ನಿ ಕುಂಡಕ್ಕೆ ವಿಶೇಷ ಪೂಜೆ ನೆರೆವರಿಸಿದರು. ನಂತರ ದೇವಸ್ಥಾನ ದಿಂದ ರಥದ ಕಳಸವನ್ನು ತೇರು ಮೈದಾನಕ್ಕೆ ತಲುಪಿಸಿ ರಥಕ್ಕೆ ಅಳವಡಿಸಲಾಯಿತು.
ವಾಹನ ನಿಲುಗಡೆ: ಜಾತ್ರೆಗೆ ಆಗಮಿಸುವ ಭಕ್ತಾದಿಗಳ ವಾಹನಗಳಿಗೆ ಪಟ್ಟಣದಲ್ಲಿ ಪ್ರವೇಶ ನಿಷೇಧಿಸಲಾಗಿದ್ದು,
ವಾಹನದಲ್ಲಿ ಪಟ್ಟಣಕ್ಕೆ ಆಗಮಿಸುವ ಭಕ್ತರಿಗಾಗಿ ವಿಶೇಷ ನಿಲುಗಡೆ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಮಾಡಿದೆ.
ಬೀದರ ಕಡೆಯಿಂದ ಬರುವ ಭಕ್ತರಿಗಾಗಿ ಮಿನಿ ವಿಧಾನ ಸೌಧ ಪ್ರಾಂಗಣದಲ್ಲಿ ವಾಹನ ನಿಲುಗಡೆ ಸ್ಥಳ ಮಾಡಲಾಗಿದೆ.
ಹಾಗೂ ಕಲಬುರಗಿ ಕಡೆಯಿಂದ ಬರುವ ಭಕ್ತರು ಕಲ್ಲೂರ್ ರಸ್ತೆಯಲ್ಲಿನ ವಡ್ಡರ ಮೈದಾನದಲ್ಲಿ, ಹೈದ್ರಾಬಾದ ಕಡೆಯಿಂದ
ಬರುವ ಭಕ್ತರಿಗೆ ರಾಮ ಮತ್ತು ರಾಜ ಕಾಲೇಜು ಪ್ರಾಂಗಣದಲ್ಲಿ ವಾಹನ ನಿಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಜ.26 ಮತ್ತು 27ರಂದು ಯಾವುದೇ ವಾಹನಗಳು ಪಟ್ಟಣ ಪ್ರವೇಶಿಸದಂತೆ ಪೊಲೀಸ್ ಇಲಾಖೆ ಸೂಕ್ತ ಎಚ್ಚರಿಕೆ ವಹಿಸಿದೆ.
ಬಿಗಿ ಪೊಲೀಸ್ ಬಂದೋಬಸ್ತ್: ಜಾತ್ರೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ಅಧಿಕಾರಿಗಳು
ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಅನೇಕ ಮಾರ್ಗ ಸೂಚಿಗಳನ್ನು ತಯಾರಿಸಿ ಅದರಂತೆ ಕಾರ್ಯ
ಪ್ರವೃತ್ತರಾಗಿದ್ದಾರೆ. ದೇವಸ್ಥಾನದ ಹತ್ತಿ, ನಾಟಕ ಕಂಪನಿಗಳ ಹತ್ತಿರ, ಬಸವೇಶ್ವರ ವೃತ್ತ, ಸರದಾರ ಪಟೇಲ್ ವೃತ್ತ,
ಅಂಬೇಡ್ಕರ್ ವೃತ್ತ ಹಾಗೂ ಅಗ್ನಿ ಕುಂಡದ ಹತ್ತಿರ ಎತ್ತರದ ಟವರ್‌ಗಳನ್ನು ನಿರ್ಮಿಸಿ ವಿಡಿಯೋ ಕ್ಯಾಮರಾಗಳನ್ನು
ಅಳವಡಿಸಲಾಗಿದೆ. ಅಲ್ಲದೇ ಕಳ್ಳರ ಚಲನವಲನಗಳ ನಿಗಾವಹಿಸಲು 32ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಅಲ್ಲದೇ ಡ್ರೋಣ್ ಮೂಲಕ ಸಾರ್ವಜನಿಕರ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸುತ್ತಿದೆ. ಮಹಿಳೆಯರು
ಬಂಗಾರದ ಆಭರಣಗಳು ಹಾಕಿಕೊಂಡು ಜಾತ್ರೆಗೆ ಬರದಂತೆ ಪೊಲೀಸ್ ಇಲಾಖೆ ತಿಳಿಸಿದ್ದು, ಅಪರಾಧ ವಿಭಾಗಗಳ ಗಸ್ತು ಹೆಚ್ಚಿಸಿ ನೆರೆ ರಾಜ್ಯಗಳ ಸಿಬ್ಬಂದಿಗಳನ್ನು ಕರೆಸಲಾಗಿದೆ.
ಪುರಸಭೆ ವ್ಯವಸ್ಥೆ: ಜಾತ್ರೆಗೆ ಹರಿದು ಬರುವ ಲಕ್ಷಾಂತರ ಜನರಿಗೆ ಸ್ಥಳೀಯ ಪುರಸಭೆ ವತಿಯಿಂದ ವಿಶೇಷ
ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದಿಂದ ತೇರು ಮೈದಾನದ ವರೆಗೆ ಕುಡಿಯುವ ನೀರಿನ ವ್ಯವಸ್ಥೆ, ತೇರು
ಮೈದಾನ ಹಾಗೂ ಬಸವೇಶ್ವರ ವೃತ್ತದಲ್ಲಿ ಮೊಬೈಲ್ ಶೌಚಾಲಯ ಅಳವಡಿಸಲಾಗಿದೆ. ಜಾತ್ರೆಯಲ್ಲಿ ಸ್ವತ್ಛತೆ
ಕಾಪಾಡುವ ನಿಟ್ಟಿನಲ್ಲಿ ಪೌರ ಕಾರ್ಮಿಕ ಸಿಂಬ್ಬಂದಿ ನೇಮಿಸಿಕೊಳ್ಳಲಾಗಿದೆ.
ದಾಸೋಹ ವ್ಯವಸ್ಥೆ: ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ವಿವಿಧೆಡೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನ
ಹಿಂಭಾಗದಲ್ಲಿ, ಜೈನಗಲ್ಲಿ, ಬಾಲಾಜಿ ವೃತ್ತ, ಪ್ರವಾಸಿ ಮಂದಿರ ಹತ್ತಿರ, ಬಸ್ ನಿಲ್ದಾಣದ ಎದುರಿಗೆ, ಎನ್‌ಎಚ್-9 ಕಚೇರಿ ಹತ್ತಿರ, ಜೂನಿಯರ್ ಕಾಲೇಜು ಹತ್ತಿರ, ಅರಣ್ಯ ಇಲಾಖೆ ಪ್ರಾಂಗಣ, ಹಳೆ ಅಡತ್ ಬಜಾರ್‌ನಲ್ಲಿ ದಾಸೋಹ ಹಾಗೂ ಚಹಾ, ತಿಂಡಿ ವ್ಯವಸ್ಥೆ ಮಾಡಲಾಗಿದೆ.
ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.