ವೀರಶೈವ-ಲಿಂಗಾಯತ ಒಂದೇ: ರಂಭಾಪುರಿ ಶ್ರೀ
Team Udayavani, Sep 15, 2018, 11:52 AM IST
ಕಾಳಗಿ: ವೀರಶೈವ ಮತ್ತು ಲಿಂಗಾಯತ ಯಾವತ್ತೂ ಒಂದೇ ಆಗಿದ್ದು, ಕೆಲವರು ನಾಸ್ತಿಕ ಮನೋಭಾವನೆಯಿಂದ ಪರಂಪರೆಗೆ ಕಳಂಕ ಹಚ್ಚುವ ಕೆಲಸದಲ್ಲಿ ತೊಡಗಿದ್ದಾರೆ. ದಾರಿ ತಪ್ಪಿಸುವವರ ಮಾತಿಗೆ ಜನರು ಕಿವಿಗೊಡಬಾರದು ಎಂದು ಬಾಳೆ ಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಶಿವಾಚಾರ್ಯ
ಹೇಳಿದರು.
ಕಾಳಗಿ ತಾಲೂಕು ರೇವಗ್ಗಿ (ರಟಕಲ್)ಯಲ್ಲಿ ಇಷ್ಟಲಿಂಗ ಪೂಜೆ, ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ಸತ್ಯ ಧರ್ಮದ ರಕ್ಷಾ ಕವಚವಾಗಿದೆ. ಸತ್ಯದ ಧರ್ಮದಲ್ಲೇ ನಾವೆಲ್ಲರೂ ನಡೆಯಬೇಕಿದೆ ಎಂದು ಹೇಳಿದರು.
ರೇವಣಸಿದ್ದೇಶ್ವರರು ಧಾರ್ಮಿಕತೆ, ಸಾಂಸ್ಕೃತಿಕತೆ ಉಳಿಸಿ ಬೆಳೆಸಿದರು. ನೊಂದವರ ದನಿಯಾಗಿ ಕಷ್ಟಕಾರ್ಪಣ್ಯ ಬಗೆಹರಿಸಿದರು. ಇತಿಹಾಸ ಪ್ರಜ್ಞೆ ಇಲ್ಲದವರು ಅವರಿಗೆ ಪೌರಾಣಿಕ ವ್ಯಕ್ತಿ ಪಟ್ಟ ಕಟ್ಟುತ್ತಿದ್ದಾರೆ ಎಂದು ಹೇಳಿದರು.
ಕಾಶಿ ಪೀಠದ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ವೀರಶೈವದ ಪಂಚಪೀಠಗಳು ದೇಶದ ಸುಖ, ಶಾಂತಿ ಹಾಗೂ ಸಮೃದ್ಧಿ ಬಯಸುತ್ತವೆ. ಪಂಚಪೀಠದ ಧ್ವಜಗಳು ರೈತರ ಸುಖ, ಶಾಂತಿ, ತ್ಯಾಗ ಭಾವನೆ, ವಿಶಾಲ, ಗಂಭೀರತೆ, ಸತ್ಯ ಹಾಗೂ ಪರಿಪಕ್ವತೆ ಸಂಕೇತವಾಗಿವೆ ಎಂದು ಹೇಳಿದರು.
ರೇಣುಕಾಚಾರ್ಯರು, ಜಗದ್ಗುರು ರೇವಣಸಿದ್ದೇಶ್ವರರು ಹಾಗೂ ರೇಣುಕರ ಕಾಲಮಾನ, ಪವಾಡಗಳು ಬೇರೆ-ಬೇರೆಯಾಗಿವೆ. ಸಾಹಿತಿಗಳು ಬರೆಯುವಾಗ ಕಾಲಮಾನ ಬರೆಯದೆ ಮೂವರು ಗುರುಗಳ ಲೀಲೆಗಳು ಸೇರಿ ಬರೆದಿರುವುದಕ್ಕೆ ಐತಿಹಾಸಿಕ ಗೊಂದಲಗಳು ಸೃಷ್ಟಿಯಾಗಿವೆ ಎಂದು ಶ್ರೀಶೈಲ ಪೀಠದ ಡಾ| ಚನ್ನಸಿದ್ದರಾಮ ಶಿವಾಚಾರ್ಯ ಹೇಳಿದರು.
ಬೀದರ ಸಂಸದ ಭಗವಂತ ಖೂಬಾ ಮಾತನಾಡಿದರು. ಇದಕ್ಕೂ ಮೊದಲು ರೇವಗ್ಗಿ ಗ್ರಾಮದಿಂದ ರಟಕಲ್‌ಗುಡ್ಡದವರೆಗೆ ರಂಭಾಪುರಿ ಹಾಗೂ ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಿತು. ಚಂದ್ರಗುಂಡ ಶಿವಾಚಾರ್ಯರು, ವೀರಭದ್ರ ಶಿವಾಚಾರ್ಯರು, ಗುರುಪಾದಲಿಂಗ ಮಹಾಸ್ವಾಮೀಜಿ, ರೇವಣಸಿದ್ದ ಶಿವಾಚಾರ್ಯರು, ಚನ್ನರುದ್ರಮುನಿ ಶಿವಾಚಾರ್ಯರು, ಶಿವಬಸವ ಶಿವಾಚಾರ್ಯರು, ಅಲ್ಲಮ ಪ್ರಭುಲಿಂಗ ಮಹಾಸ್ವಾಮಿ, ಶಿವಕುಮಾರ ಶಿವಾಚಾರ್ಯರು, ಸಿದ್ದಮಲ್ಲ ಶಿವಾಚಾರ್ಯರು, ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಡಾ| ಮಲ್ಲಿಕಾರ್ಜುನ ಗಾಜರೆ, ತಹಶೀಲ್ದಾರ್ ಶಾಂತಗೌಡ ಬಿರಾದಾರ, ರಾಮು ರಾಠೊಡ ಇದ್ದರು. ಶಿವಕವಿ ಹಿರೇಮಠ ಹಾಗೂ ದತ್ತಾತ್ರೇಯ ರಾಯಗೋಳ ಕಾರ್ಯಕ್ರಮ ನಿರೂಪಿಸಿದರು.
ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಇಷ್ಟಲಿಂಗ ಪೂಜೆ
ಕಾಳಗಿ: ಸಂಸ್ಕಾರ ಸಂಸ್ಕೃತಿಯ ಆದರ್ಶ ಮೌಲ್ಯಗಳು ಬೆಳೆಸುವುದರ ಮೂಲಕ ರೇವಣಸಿದ್ದೇಶ್ವರರು ಅದ್ಭುತವಾದ ಸತ್ಮಾತಿ ಮಾಡಿದ್ದಾರೆ. ಅವರ ಕಾಂತ್ರಿ ಎಲ್ಲ ಕಾಂತ್ರಿಗಳಿಗೆ ಮೂಲ ಸೆಲೆಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ| ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗತ್ಪಾದರು ಅಭಿಪ್ರಾಯಪಟ್ಟರು.
ತಾಲೂಕಿನ ಸುಕ್ಷೇತ್ರ ರೇವಗ್ಗಿ(ರಟಕಲ್) ಜಗದ್ಗುರು ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದ ಇಷ್ಠಲಿಂಗ ಮಹಾಪೂಜೆಯಲ್ಲಿ ಆಶೀರ್ವಚನ ನೀಡಿದರು. ಸ್ವಾರ್ಥ ಮತ್ತು ಸಂಕುಚಿತ ಮನೋಭಾವ ಹೆಚ್ಚು ಬೆಳೆಯುತ್ತಿದೆ. ಪರಸ್ಪರ ಸಂಘರ್ಷದಿಂದ ಬದುಕು ದುರ್ಬಲಗೊಳ್ಳುತ್ತಿದೆ. ಅಳುತ್ತ ಬದುಕುವುದಕ್ಕಿಂತ ಜೀವನ ಅರಳುತ್ತ ಬದುಕಬೇಕಾಗುತ್ತಿದೆ. ಸುಂದರವಾದ ಮನೆಯನ್ನು ಎಲ್ಲರೂ ಕಟ್ಟಬಲ್ಲರು ಅದರೆ ಆ ಮನೆಯಲ್ಲಿ ಸಂತೋಷದಿಂದ ಹೇಗೆ ಬದುಕಬೇಕು ಎಂಬುದನ್ನು ತಿಳಿಯಲಾರದವನಾಗಿದ್ದಾನೆ. ಯುವ ಜನಾಂಗದಲ್ಲಿ ಸಂಸ್ಕಾರ, ಸಂಸ್ಕೃತಿ ಆದರ್ಶಗಳನ್ನು ಬೆಳೆಸಬೇಕಾಗಿದೆ.
ಶಾಂತಿ ಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯ ಕಾಪಾಡಿದ ಕೀರ್ತಿ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಅವರಿಗೆ ಸಲ್ಲುತ್ತದೆ. ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗತ್ಪಾದರು ಮತ್ತು ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗತ್ಪಾದರು ಆಶೀರ್ವಚನ ನೀಡಿದರು. ಶ್ರಾವಣ ತಿಂಗಳ ಪರ್ಯಂತರ ಅನುಷ್ಠಾನ ಕೈಗೊಂಡ ಹೊನ್ನಕಿರಣಗಿ ಪೂಜ್ಯ ಚಂದ್ರಗುಂಡ ಶಿವಾಚಾರ್ಯರ ಸ್ವಾಮಿಗಳು ಶ್ರೀ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮಂಗಲಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.