ಗಗನಕ್ಕೇರಿದ ತರಕಾರಿ ಬೆಲೆ
Team Udayavani, Jul 5, 2017, 10:46 AM IST
ಆಳಂದ: ಜೂನ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನಾದ್ಯಂತ ತರಕಾರಿ ಬೆಳೆ ಹಾನಿಗಿಡಾಗಿದೆ. ಮಳೆಯಿಂದ ತರಿಕಾರಿ ಉತ್ಪಾದನೆ ಕುಂಠಿತವಾಗುತ್ತಿದ್ದಂತೆ ಇದರ ನೇರ ಪರಿಣಾಮ ಗ್ರಾಹಕರ ಮೇಲಾಗಿದೆ. ಇತ್ತ ತೋಟಗಾರಿಕೆ ಉತ್ಪಾದಕರಿಗೆ ನಷ್ಟವಾದರೆ, ಮತ್ತೂಂದಡೆ ಗ್ರಾಹಕರಿಗೂ ಬೆಲೆ ಏರಿಕೆ ಬಿಸಿ ತಟ್ಟಿದೆ.
ಪಟ್ಟಣ ಸೇರಿ ಗ್ರಾಮೀಣ ಭಾಗದಿಂದ ಸ್ಥಳೀಯ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈಗ ನಿರೀಕ್ಷಿತ ಪ್ರಮಾನದಲ್ಲಿ
ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ಸ್ಥಿರವಾಗಿದ್ದ ಉಳ್ಳಾಗಡ್ಡಿ ಬೆಲೆ ಬಿಟ್ಟರೆ ಉಳಿದೆಲ್ಲ ತರಕಾರಿ ದರ ದುಪ್ಪಟ್ಟಾಗಿದ್ದರಿಂದ ಖರೀದಿಗೆ ಬರುವ ಬಡ ಮತ್ತು ಮಧ್ಯಮ ವರ್ಗದ ಜನರು ಹಿಂದೆಮುಂದೆ ನೋಡುವಂತಾಗಿದೆ. ಜನರು ಬಾರದೆ ಮಾರುಕಟ್ಟೆ ಬಣಗುಡುತ್ತಿದೆ. ಬದನೆ 20 ರೂ.ದಿಂದ ಬದಲು 40 ರೂಗೆ, ಬೆಂಡೆ 20ರೂ.ದಿಂದ 40, ಟೊಮ್ಯಾಟೋ 20ರಿಂದ 50, ಆಲೂಗಡ್ಡೆ 25ದಿಂದ 30, ಮೆಂತೆ ಸೋಪ್ಪು 5 ರೂಪಾಯಿ ಬದಲು 10 ರೂ., ಪಾಲಕ 5 ರೂ ಬದಲು 10 ರೂಪಾಯಿ, ಚವಳಿಕಾಯಿ 20 ಬದಲು 40 ರೂ. ಕಿಲೋ, ಕೊತಂಬರಿ 5ರ ಬದಲು 10 ರೂ, ಸವತೆಕಾಯಿ
20 ರೂ ಬದಲು 30 ಕಿಲೋ ಮತ್ತು ಮೆಣಸಿನಕಾಯಿ 20 ಬದಲು 50 ರೂಪಾಯಿಗೆ ಕೆಜಿ ಮಾರಾಟವಾಗುತ್ತಿದೆ. ಪ್ರತಿ
ವರ್ಷ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ತರಕಾರಿ ಬೆಲೆ ಕುಸಿಯುತ್ತಿತ್ತು. ಆದರೆ ಈ ಬಾರಿ ಗಗನಕ್ಕೇರಿದೆ.
ವ್ಯಾಪಾರಿಗಳ ಅಳಲು
ಮಾರುಕಟ್ಟೆಗೆ ತರಕಾರಿ ಪೂರೈಕೆ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಮೊದಲು ದಿನಕ್ಕೆ 8ರಿಂದ 10 ಸಾವಿರ ರೂಪಾಯಿ ವ್ಯಾಪಾರವಾಗುತ್ತಿತ್ತು. ಈಗ 3ರಿಂದ4 ಸಾವಿರ ರೂ. ಆಗುತ್ತಿದೆ. ತರಕಾರಿ ಖರೀದಿಸಿ ಮಾರಲು ಹಿಂದೆ, ಮುಂದೆ ನೋಡುತ್ತಿದ್ದೇವೆ. ಈಗ ದಿನದ ಕೂಲಿ ಒಮ್ಮೊಮ್ಮೆ ಏನು ಉಳಿಯುತ್ತಿಲ್ಲ.
ನಾಗೇಶ ಕಟಕೆ ತರಕಾರಿ ವ್ಯಾಪಾರಿ ಶ್ರೀರಾಮ ಮಾರುಕಟ್ಟೆ ಆಳಂದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Hardeep Singh Puri: ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ
Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು
National Highway ಕಾಮಗಾರಿ ಪರಿಶೀಲನೆ: ಮಾರ್ಚ್ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ
Suratkal: ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗ ಕಾರ್ಮಿಕನ ಸೆರೆ
Mangaluru: ಪಿಲಿಕುಳ ಆಯುಕ್ತರ ಅಧಿಕಾರ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.