ರಸ್ತೆಗಿಳಿದವರ ದಾಖಲೆ ಪರಿಶೀಲನೆ
Team Udayavani, Jul 16, 2020, 1:47 PM IST
ಕಲಬುರಗಿ: ಮೊದಲ ದಿನ ಹೆಸರಿಗೆ ಮಾತ್ರ ಎಂಬಂತೆ ಇದ್ದ ಲಾಕ್‌ಡೌನ್ ಬುಧವಾರ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿತ್ತು. ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮಂಗಳವಾರದಿಂದ ಒಂದು ವಾರ ಲಾಕ್‌ಡೌನ್ ಮುದ್ರೆ ಹಾಕಿದೆ.
ಸೋಮವಾರ ತಡರಾತ್ರಿ ಆದೇಶ ಹೊರಡಿಸಿದ್ದರಿಂದ ಮಂಗಳವಾರ ಸಂಜೆಯವರೆಗೆ ಲಾಕ್‌ಡೌನ್ ಸರಿಯಾಗಿ ಅನುಷ್ಠಾನಗೊಂಡಿರಲ್ಲ. ತದ ನಂತರದಲ್ಲಿ ಜನ ಸಂಚಾರ ವಿರಳವಾಗಿತ್ತು. ಬುಧವಾರ ಬೆಳಗ್ಗೆಯಿಂದ ಸಂಪೂರ್ಣವಾಗಿ ಲಾಕ್ ಡೌನ್ ಜಾರಿಗೆ ಬಂತು. ನಗರಾದ್ಯಂತ ಅಂಗಡಿ, ಮುಂಗಟ್ಟುಗಳು ತೆರದಿರುವುದು ಕಂಡುಬಂದಿಲ್ಲ. ಸೂಪರ್ ಮಾರ್ಕೆಟ್, ಕಿರಾಣಿ ಬಜಾರ, ಗಂಜ್ ಪ್ರದೇಶ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ವೃತ್ತ, ರಾಮ ಮಂದಿರದಲ್ಲಿ ಸೇರಿ ಹಲವೆಡೆ ಜನ ಮತ್ತು ವಾಹನ ಸಂಚಾರ ಕಡಿಮೆ ಇತ್ತು. ಅದರಲ್ಲೂ ಮಂಗಳವಾರ ರಾತ್ರಿಯಿಂದ ಮಳೆ ಸುರಿಯುತ್ತಿದ್ದ ಕಾರಣ ಅನೇಕರು ಹೊರ ಬರಲು ಹೋಗಲಿಲ್ಲ.
ಕೆಲವರು ಲಾಕ್‌ಡೌನ್ ಮತ್ತು ಮಳೆಯನ್ನೂ ಮೀರಿ ರಸ್ತೆಗಿಳಿದವರಿದ್ದರು. ವಿನಾಕಾರಣ ಮನೆಯಿಂದ ಹೊರ ಬಂದವರಿಗೆ ಪೊಲೀಸರು ಸರಿಯಾಗಿ ಬಿಸಿ ಮುಟ್ಟಿಸಿದರು. ದಿನಸಿ ಅಂಗಡಿಗಳು, ಹಾಲು, ಹಣ್ಣು, ತರಕಾರಿ ಮಾರಾಟ ಹಾಗೂ ಮೆಡಿಕಲ್ ಶಾಪ್‌ಗ್ಳು ತೆರೆದಿದ್ದವು. ಪೆಟ್ರೋಲ್ ಪಂಪ್‌ಗ್ಳು ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಕಾರ್ಯ ನಿರ್ವಹಿಸಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.