ಒಂಬತ್ತು ವರ್ಷಗಳ ನಂತರ “ಆಸರೆ’ಗೆ ತೆರಳಿದ ಸಂತ್ರಸ್ತರು
ಸದ್ಯ ಕಲ್ಪಿಸಲಾಗಿದೆ ವಿದ್ಯುತ್ ಸಂಪರ್ಕ | ಕುಡಿವ ನೀರು ಸರಬರಾಜು
Team Udayavani, Oct 21, 2020, 4:41 PM IST
ಜೇವರ್ಗಿ: ಭೀಮಾ ನದಿಯ ಪ್ರವಾಹಕ್ಕೆ ಸಂಪೂರ್ಣ ತುತ್ತಾಗಿರುವ ತಾಲೂಕಿನ ರದ್ದೇವಾಡಗಿ ಗ್ರಾಮದ ನೆರೆ ಸಂತ್ರಸ್ತರು ಕೊನೆಗೂ 9 ವರ್ಷದ ನಂತರ ಸರ್ಕಾರ ನಿರ್ಮಿಸಿರುವ ಆಸರೆ ಮನೆಗಳಿಗೆ ತೆರಳಿದ್ದಾರೆ.
ಕಳೆದ ಬಿಜೆಪಿ ಸರ್ಕಾರ ಪೇಜಾವರ ಮಠ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ತಾಲೂಕಿನ ಭೀಮಾನದಿ ತೀರದ ನೆರೆ ಸಂತ್ರಸ್ತರಿಗಾಗಿತಾಲೂಕಿನ ರದ್ದೇವಾಡಗಿ ಸೇರಿದಂತೆ ನರಿಬೋಳ, ಕೂಡಿ, ಕೋಬಾಳ, ಮಂದರವಾಡ, ಕೋಬಾಳ,ಬಳ್ಳುಂಡಗಿ, ಹರವಾಳ ಸೇರಿದಂತೆ ಒಟ್ಟು 17 ಹಳ್ಳಿಗಳಲ್ಲಿ 800 ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿ ಆಸರೆ ಕಲ್ಪಿಸಿತ್ತು. ಅದರಂತೆ ರದ್ದೇವಾಡಗಿ ಗ್ರಾಮದಲ್ಲೂ 2009-10ನೇ ಸಾಲಿನ ನೆರೆ ಸಂತ್ರಸ್ತರಿಗೆ ಆಸರೆ ಯೋಜನೆಯಡಿ 37ಮನೆಗಳನ್ನುನಿರ್ಮಿಸಿಕೊಟ್ಟಿದೆ. ಸಂತ್ರಸ್ತರಿಗೆ ಶಾಸ್ವತ ಪರಿಹಾರಮತ್ತು ಸೂರು ಒದಗಿಸಿಕೊಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿತ್ತು. ಅಂದಿನಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ 2011ರ ಡಿಸೆಂಬರ್ 11ರಂದು ರದ್ದೇವಾಡಗಿ ಗ್ರಾಮದಆಸರೆ ಮನೆಗಳ ಉದ್ಘಾಟಿಸಿ ಫಲಾನುಭವಿಗಳಿಗೆಹಕ್ಕು ಪತ್ರ ವಿತರಿಸಿದ್ದರು. ಆದರೆ ಅಲ್ಲಿಂದ ಇಲ್ಲಿಯವರೆಗೂ ಯಾರೂ ಆ ಮನೆಗಳಿಗೆತೆರಳದೇ ತಮ್ಮ ನದಿ ತೀರದ ಹಳೆಯ ಮನೆಗಳಲ್ಲೇ ವಾಸಿಸುತ್ತಿದ್ದರು.
ಪ್ರಸಕ್ತ ವರ್ಷ ಕಲಬುರಗಿ ಜಿಲ್ಲೆಯಲ್ಲಿ ಹಿಂದೆಂದೂಕಾಣದ ಭೀಕರ ಮಳೆ ಹಾಗೂ ಪ್ರವಾಹದಿಂದ ಈಭಾಗದ ಜನ ತತ್ತರಿಸಿ ಹೋಗಿದ್ದಲ್ಲದೇ ಸಾವಿರಾರುಜನರು ಮನೆ, ಬೆಳೆ ಹಾಗೂ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ಸಂತ್ರಸ್ತರು ಅಕ್ಷರಶಃ ಕಂಗಾಲಾಗಿದ್ದಾರೆ.
ಈ ಮೊದಲು ಭೀಮೆಗೆ ಪ್ರವಾಹ ಬಂದಾಗ ನದಿ ತೀರದ ಕೆಲ ಮನೆಗಳಿಗೆ ಮಾತ್ರ ನೀರು ನುಗ್ಗಿ ಹಾನಿ ಸಂಭವಿಸುತ್ತಿತ್ತು. ಆದರೆ ಈ ವರ್ಷದ ಭೀಕರ ಪ್ರವಾಹದಿಂದ ನದಿ ತೀರದ 30ಕ್ಕೂ ಅಧಿಕ ಹಳ್ಳಿಗಳುಸಂಪೂರ್ಣ ಜಲಾವೃತಗೊಂಡಿವೆ. ರದ್ದೇವಾಡಗಿಗ್ರಾಮದ ಸರಿಸುಮಾರು 180 ಕುಟುಂಬಗಳ 1200ಕ್ಕೂ ಅಧಿಕ ಜನರನ್ನು ಈ ಮೊದಲು ಈ ಗ್ರಾಮದ ಸಂತ್ರಸ್ತರಿಗಾಗಿ ನಿರ್ಮಿಸಲಾದ ಆಸರೆ ಮನೆಗಳ ಹತ್ತಿರ ಕಾಳಜಿ ಕೇಂದ್ರ ತೆರೆದು ಅಲ್ಲಿಗೆ ಕಳುಹಿಸಲಾಗಿದೆ. ಅಲ್ಲದೇ 37ಮನೆಗಳಫಲಾನುಭವಿಗಳು ತಮಗೆ ಈ ಮೊದಲು ಸರ್ಕಾರ ನೀಡಿರುವ ಮನೆಯಲ್ಲೇ ವಾಸಿಸುತ್ತಿದ್ದಾರೆ. ಸದ್ಯ ಆಸರೆ ಬಡಾವಣೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದ್ದು, ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟಾರೆ ಸಂತ್ರಸ್ಥರು 9 ವರ್ಷಗಳ ನಂತರ ತಮ್ಮಹೊಸ ಮನೆಗಳಿಗೆ ತೆರಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಭೀಮೆಯ ಪ್ರವಾಹದಿಂದಇಡೀ ಊರೇಜಲಾವೃತವಾಗಿದೆ.ಸರ್ಕಾರ ಈ ಗ್ರಾಮದ 37 ಕುಟುಂಬಗಳಿಗೆ ಮಾತ್ರ ಆಸರೆ ಮನೆಗಳು ನಿರ್ಮಿಸಿಕೊಟ್ಟಿದ್ದು, ಇನ್ನೂ ಅಗತ್ಯವಿರುವ ಸರಿಸುಮಾರು 150 ಆಸರೆ ಮನೆಗಳು ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ. – ಸಣ್ಣಗೌಡ ಪಾಟೀಲ, ಗ್ರಾಪಂ ಮಾಜಿ ಸದಸ್ಯ
ನೆರೆ ಸಂತ್ರಸ್ತರ ಮಕ್ಕಳಿಗೆ ಬೆಳಿಗ್ಗೆ ಮೊಟ್ಟೆ, ಹಾಲು, ಬಿಸ್ಕೀಟ್ ನೀಡುವುದರಜತೆಗೆ ಎಲ್ಲರಿಗೂ ಬೆಳಿಗ್ಗೆ ಉಪಹಾರಉಪ್ಪಿಟ್ಟು ಹಾಗೂ ಊಟಕ್ಕೆ ಚಪಾತಿ, ಮಜ್ಜಿಗೆ, ಸಾಂಬಾರುನೀಡಲಾಗುತ್ತಿದೆ. ಹಗಲಿರುಳು ಕಾಳಜಿ ಕೇದ್ರದಲ್ಲೇ ಇದ್ದು ಸಂತ್ರಸ್ತರ ಯೋಗಕ್ಷೇಮ ನೋಡಿಕೊಳ್ಳಲಾಗುತ್ತಿದೆ. –ಜಯಪ್ರಕಾಶ ಹಣಕುಣೆ, ಗ್ರಾಮ ಲೆಕ್ಕಿಗ
ರದ್ದೇವಾಡಗಿ ಗ್ರಾಮದಎಲ್ಲಾ ಜನರನ್ನುಸುರಕ್ಷಿತವಾಗಿ ಕರೆತಂದು ಗುಣಮಟ್ಟದ ಊಟ, ಹೊದಿಕೆ ಹಾಗೂ ಅಗತ್ಯ ವಸ್ತುಗಳ ಪೂರೈಸಲಾಗುತ್ತಿದೆ. ನೆರೆಪೀಡಿತರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಎಚ್ಚರ ವಹಿಸಲಾಗುವುದು. –ಅಖಂಡೆಪ್ಪ ಹುಗ್ಗಿ , ಪಿಡಿಒ
-ವಿಜಯಕುಮಾರ ಎಸ್.ಕಲ್ಲಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.