ಕಿಟ್ ನೀಡಲು ಆಗ್ರಹಿಸಿ ಲಾರಿ ತಡೆದ ಗ್ರಾಮಸ್ಥರು
Team Udayavani, May 31, 2020, 7:09 AM IST
ಶಹಾಬಾದ: ಕಾರ್ಮಿಕ ಇಲಾಖೆಯಿಂದ ತಂದಿದ್ದ ಆಹಾರ ಸಾಮಗ್ರಿ ಕಿಟ್‌ಗಳ ಲಾರಿಯನ್ನು ಗ್ರಾಮಸ್ಥರು ತಡೆದು, ನಮಗೂ ವಿತರಿಸಿ ಎಂದು ಒತ್ತಾಯಿಸಿದ ಘಟನೆ ತಾಲೂಕಿನ ತೊನಸನಹಳ್ಳಿ (ಎಸ್)ನಲ್ಲಿ ಶುಕ್ರವಾರ ನಡೆಯಿತು.
ಇಲಾಖೆಯಿಂದ ಬಂದಿದ್ದ ಆಹಾರ ಸಾಮಗ್ರಿ ಕಿಟ್‌ನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು 160 ಬಡವರಿಗೆ ವಿತರಿಸಿದರು. ಈ ವೇಳೆ ಗ್ರಾಮಸ್ಥರು ನಮಗೂ ಕಿಟ್ ನೀಡಿ ಎಂದು ದುಂಬಾಲು ಬಿದ್ದರು.
ನಂತರ ಕಿಟ್ ತಂದ ಲಾರಿ ವಾಪಸ್ ಹೋಗುತ್ತಿದ್ದಾಗ ಗ್ರಾಮಸ್ಥರು ತಡೆದು ನಮಗೂ ಕಿಟ್ ಕೊಡಿ, ನಾವು ಬಡವರಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪಿಐ ಬಿ.ಅಮರೇಶ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ, ಜನರ ಮನವೊಲಿಸಿದರು. ನಂತರ ಲಾರಿ ಹೋಗಲು ಅನುವು ಮಾಡಿಕೊಡಲಾಯಿತು.
ತಹಶೀಲ್ದಾರ್ ಸುರೇಶ ವರ್ಮಾ, ಕೋವಿಡ್-19 ನೋಡಲ್ ಅಧಿಕಾರಿ ನೀಲಗಂಗಮ್ಮ ಬಬಲಾದ, ತಾ.ಪಂ ಅಧಿಕಾರಿ ಲಕ್ಷ¾ಣ ಶೃಂಗೇರಿ, ತೊನಸನಹಳ್ಳಿ (ಎಸ್) ಗ್ರಾ.ಪಂ ಅಧ್ಯಕ್ಷ ವಿಜಯಾನಂದ ಮಾಣಿಕ್, ಗ್ರಾ.ಪಂ ಸದಸ್ಯರಾದ ಬಸವರಾಜ ಗೊಳೇದ್, ಬಸವರಾಜ ಮದ್ರಕಿ, ನಾಗೇಂದ್ರ ಹುಗ್ಗಿ, ಶಿವಲಿಂಗಪ್ಪ ಗೊಳೇದ್, ಗ್ರಾ.ಪಂ ಪಿಡಿಒ ಶ್ರವಣಕುಮಾರ ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.