ಗ್ರಾಮಗಳಿಗೆ ಅಮರ್ಜಾದಿಂದ ನೀರು
Team Udayavani, Mar 10, 2019, 5:58 AM IST
ಮಾದನಹಿಪ್ಪರಗಿ: ಕುಡಿಯುವ ನೀರಿನ ಬರ ಎದುರಿಸುತ್ತಿರುವ ಗ್ರಾಮಗಳಿಗೆ ಅಮರ್ಜಾ ಡ್ಯಾಂನಿಂದ ನೀರು ಹರಿಸಲಾಗುವುದು ಎಂದು ಆಳಂದ ಶಾಸಕ ಸುಭಾಷ ಆರ್. ಗುತ್ತೇದಾರ ಹೇಳಿದರು.
ಎಚ್‌ಕೆಆರ್‌ಡಿಬಿ ಯೋಜನೆ ಅನುದಾಡಿಯಲ್ಲಿ ಮಂಜೂರಾದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಾದನ ಹಿಪ್ಪರಗಿಗೆ ಈಗಾಗಲೇ ಕೇರೂರ ಮತ್ತು ಕಾಮನಳ್ಳಿ ಕೆರೆಗಳಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ವರ್ಷ ಕೆರೆಯಲ್ಲಿ ಮತ್ತು ಕೆರೆ ಪಕ್ಕದಲ್ಲಿ ತೋಡಲಾದ ಬಾವಿಗಳಲ್ಲಿ ನೀರು ಬತ್ತಿ ಹೋಗಿರುವದರಿಂದ ನೀರಿನ ಬವಣೆ ತೀವ್ರವಾಗಿದೆ. ಟ್ಯಾಂಕರ್ ಮೂಲಕ ಗ್ರಾಮಗಳಿಗೆ ನೀರು ಪೂರೈಸಿದರೂ ಸಾಕಾಗುತ್ತಿಲ್ಲ. ಸರಕಾರಕ್ಕೆ ಇಲ್ಲಿನ ಸಮಸ್ಯೆ ಮನವರಿಕೆ ಮಾಡಿ ಶಾಶ್ವತ ಕುಡಿಯುವ ನೀರಿನ ಯೋಜನೆ ತಯಾರಿಸಲಾಗುವುದು. ಈ ಸಮಸ್ಯೆ ಬಗೆಹರಿಸಲು ಅಮರ್ಜಾ ನೀರು ತರುವುದೇ ಪರಿಹಾರ ಎಂದು ಹೇಳಿದರು.
ಶ್ರೀ ಶಿವಲಿಂಗೇಶ್ವರ ಮಠದ ಅಭಿನವ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ 20 ಲಕ್ಷ ರೂ. ವೆಚ್ಚದ ಸಭಾಂಗಣ, ಪದವಿ ಪೂರ್ವ ಕಾಲೇಜಿನಲ್ಲಿ 62 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುರಿಯಾಗಿ ನಾಲ್ಕು ಕೋಣೆಗಳ ನಿರ್ಮಾಣ, 50 ಲಕ್ಷ ರೂ. ವೆಚ್ಚದದಲ್ಲಿ ಎರಡು ಪ್ರಯೋಗಶಾಲೆ ಕೋಣೆಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಗ್ರಾಪಂ ಉಪಾಧ್ಯಕ್ಷ ಶಿವಲಿಂಗಪ್ಪ ಜಮಾದಾರ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ| ಇರ್ಫಾನ ಅಲಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ನಾಗೇಂದ್ರಪ್ಪ ಬೆಡಜಿರಗೆ, ತಾ.ಪಂ. ಮಾಜಿ ಅಧ್ಯಕ್ಷ ಶಿವಪ್ಪ ಕೋಳಶೆಟ್ಟಿ, ಮಾಜಿ ಗ್ರಾ.ಪಂ ಅಧ್ಯಕ್ಷ ವಿಶ್ವನಾಥ ಪರೇಣಿ, ಮಹಾರುದ್ರಪ್ಪ ಅರಳಿಮಾರ, ಈರಣ್ಣ ಬಜಾರೆ, ಶಿವಲಿಂಗಪ್ಪ ಮೈಂದರಗಿ, ರಾಜಕುಮಾರ ಕಂಬಾರ, ಶಂಕರೆಪ್ಪ ಮುಗಳಿ ಜಚಜಖೀ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
Kalaburagi: ವಕ್ಫ್ ರದ್ದುಗೊಳಿಸಿ ಸನಾತನ ಮಂಡಳಿ ರಚಿಸುವಂತೆ ಆಗ್ರಹಿಸಿ ಬೀದಿಗಿಳಿದ ಮಠಾಧೀಶರು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.