ಮತ ಖಾತ್ರಿ: ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ
Team Udayavani, Mar 30, 2018, 12:18 PM IST
ಚಿತ್ತಾಪುರ: ವಿದ್ಯುನ್ಮಾನ ಮತಯಂತ್ರ (ಇವಿಎಂ)ದಲ್ಲಿ ದಾಖಲಿಸಿದ ಮತ ಯಾರಿಗೆ ಬಿದ್ದಿದೆ ಎಂಬುವುದನ್ನು ಖಚಿತ ಪಡಿಸುವ ಮತ ಖಾತ್ರಿ ಯಂತ್ರ (ವಿವಿ ಪ್ಯಾಟ್)ದ ಪ್ರಾತ್ಯಕ್ಷಿಕೆಗೆ ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಚಾಲನೆ ನೀಡಲಾಯಿತು.
ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಈ ಬಗ್ಗೆ ಮಾಹಿತಿ ನೀಡಲು ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಸೇಡಂ ಸಹಾಯಕ ಆಯುಕ್ತ ಎಂ.ಪಿ ಮಾರುತಿ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ರಾಜಕೀಯ ಪಕ್ಷಗಳು, ಶಾಲಾ-ಕಾಲೇಜು, ಸಂಘ-ಸಂಸ್ಥೆ, ಗ್ರಾಮೀಣ ಪ್ರದೇಶದಲ್ಲಿ ಹಾಗೂ ಜಾತ್ರೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರ ಬಳಕೆ ಕುರಿತು ಅಣುಕು ಮತದಾನದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಇವಿಎಂ ಮತ್ತು ವಿವಿ ಪ್ಯಾಟ್‌ಗಳನ್ನು ಈಗಾಗಲೇ ಹಲವು ಬಾರಿ ತಪಾಸಣೆಗೆ ಒಳಪಡಿಸಲಾಗಿದೆ.
ವಿವಿ ಪ್ಯಾಟ್‌ನಲ್ಲಿ ಉತ್ತಮ ಗುಣಮಟ್ಟದ ಪೇಪರ್‌ನ್ನು ಮುದ್ರಣಕ್ಕೆ ಬಳಸಲಾಗುತ್ತದೆ. 22.5/15 ವೊಲ್ಟೆಜ್ ಬ್ಯಾಟರಿ ಕಾರ್ಯನಿರ್ವಹಿಸಲಿದೆ. ಒಂದು ರೀಲ್‌ನಲ್ಲಿ 1,500 ಮತಗಳು ಮುದ್ರಣಗೊಳ್ಳುತ್ತವೆ. ಪ್ರತಿ ವಿವಿ ಪ್ಯಾಟ್ ಯಂತ್ರದ ಜತೆಗೆ ಹೆಚ್ಚುವರಿ ರೀಲ್‌ನ್ನು ಕೊಡಲಾಗುತ್ತದೆ ಎಂದು ಹೇಳಿದರು.
ಮತದಾನ ಖಾತ್ರಿ ಪಡಿಸುವ ಯಂತ್ರ ಇದಾಗಿದೆ. ಮತದಾನದ ನಂತರ ಯಾರಿಗೆ ಮತದಾನ ಮಾಡಲಾಗಿದೆ ಎಂಬುವುದನ್ನು ಮತದಾರ ಖಾತ್ರಿ ಪಡಿಸಿಕೊಳ್ಳಲು ಏಳು ಸೆಕೆಂಡ್ ಮತಪತ್ರ ವಿವಿ ಪ್ಯಾಟ್‌ನಲ್ಲಿ ಪ್ರದರ್ಶನಗೊಳ್ಳುತ್ತದೆ. ನಂತರ ಅದು ವಿವಿಪ್ಯಾಟ್ ಪೆಟ್ಟಿಗೆಯಲ್ಲಿ ತುಂಡರಿಸಿಕೊಂಡು ಬೀಳುತ್ತದೆ ಎಂದು ಮಾಹಿತಿ ನೀಡಿದರು. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ
ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯಕ್ರಮ, ಸಮಾರಂಭಗಳಿಗೆ ಉಪಯೋಗಿಸಲಾಗುವ ಪ್ಲೆಕ್ಸ್, ಕ್ಯಾಪ್, ಟೀ-ಶರ್ಟ, ಶಾಮಿಯಾನ, ಟವಲ್, ತಾತ್ಕಾಲಿಕ ವೇದಿಕೆ, ಬ್ಯಾನರ್, ಸ್ಪೀಕರ್, ಕರಪತ್ರ ಹೀಗೆ ಅನೇಕ ವಸ್ತು ಹಾಗೂ ಉಪಹಾರ, ಊಟ, ನೀರು ಸೇರಿದಂತೆ ಇನ್ನಿತರ ಸಾಮಗ್ರಿಗಳಿಗೆ ದರ ನಿಗದಿಪಡಿಸಲಾಗಿದೆ. ಮುದ್ರಣ ಮತ್ತು ವಿದ್ಯುನ್ಮಾನ ವಾಹಿನಿಯಲ್ಲಿ ನೀಡಲಾಗುವ ಜಾಹೀರಾತಿಗೂದರ ಇದ್ದು, ಇದೆಲ್ಲದರ ಖರ್ಚನ್ನು ಆಯಾ ರಾಜಕೀಯ ಪಕ್ಷದ ಖಾತೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು
ಹೇಳಿದರು.
ಮಾಸ್ಟರ್ ಟ್ರೇನರ್‌ಗಳಾದ ಬಸವರಾಜ ಎಂಬತ್ನಾಳ, ಕಾಶಿರಾಯ ಕಲಾಲ್, ಸಂತೋಷ ಶಿರನಾಳ ಅವರು ಇವಿಎಂ ಮತ್ತು ವಿವಿಪ್ಯಾಟ್ ಮತಯಂತ್ರದ ಕಾರ್ಯನಿರ್ವಹಿಸುವ ಕುರಿತು ಸಮಗ್ರ ಮಾಹಿತಿಯನ್ನು ಪ್ರಾಯೋಗಿಕವಾಗಿ ರಾಜಕೀಯ ಪಕ್ಷದವರಿಗೆ ಹಾಗೂ ಪತ್ರಕರ್ತರಿಗೆ ತಿಳಿಸಿಕೊಟ್ಟರು.
ತಹಶೀಲ್ದಾರ್ ಶಿವಾನಂದ ಪಿ. ಸಾಗರ, ತಾಪಂ ಇಒ ಲಕ್ಷ್ಮಣ ಶೃಂಗೇರಿ, ಕೃಷಿ ಇಲಾಖೆ ಸಹಾಯಕ ಆಯುಕ್ತ ಜಾಲೇಂದ್ರ ಗುಂಡಪ್ಪ, ಸೋಮು ರಾಠೊಡ, ದಶರಥ, ಮಧುಸೋಧನ್ ಗಾಳೆ, ಕರೀಬಬಸಪ್ಪ, ವಿಜಯಕುಮಾರ, ಮಾಹಾನಿಂಗಯ್ಯ, ಮಕ್‌ಸೂದ್, ಬಾಬು ಇದ್ದರು.
ಹಣ ಸಾಗಿಸಿದರೆ ಜಪ್ತಿ
ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಯಾವುದೇ ಪಕ್ಷಕ್ಕೆ ಸಿಮೀತವಾದ ವಾಹನಗಳಲ್ಲಿ 50 ಸಾವಿರ ರೂ. ಇದ್ದರೆ ಅದನ್ನು ಜಪ್ತಿ ಮಾಡಿಕೊಂಡು ದೂರು ದಾಖಲಿಸಿಕೊಳ್ಳಬೇಕು. 10 ಲಕ್ಷರೂ. ಕ್ಕಿಂತ ಹೆಚ್ಚು ಹಣ ಸಾಗಿಸುತ್ತಿರುವ ವಾಹನಗಳು ಚೆಕ್‌ಪೋಸ್ಟ್ ಹತ್ತಿರ ಸಿಕ್ಕರೇ ಐಟಿ ಅಧಿ ಕಾರಿಗಳಿಗೆ ಪರೀಶಿಲಿಸಲು ಒಪ್ಪಿಸಲಾಗುವುದು.
ಎಂ.ಪಿ. ಮಾರುತಿ ಸಹಾಯಕ ಆಯುಕ್ತರು, ಸೇಡಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.