ಕುಡಿಯಲು ನೀರು ಕೊಟ್ಟರೆ ಮಾತ್ರ ಮತ
Team Udayavani, May 4, 2018, 3:58 PM IST
ಸೇಡಂ: ಶಾಸಕನಾಗುವ ಕನಸುಹೊತ್ತು ಮತದಾರರ ಬಳಿ ಹೋಗುವ ಅಭ್ಯರ್ಥಿಗಳಿಗೆ ಮತದಾರರು ಬೇಡಿಕೆಗಳ ಮಹಾಪೂರವನ್ನೇ ಇಡುತ್ತಿದ್ದಾರೆ. ತಾಲೂಕಿನ ಕೋಲಕುಂದಾ, ಮುಧೋಳ, ಕೋಡ್ಲಾ ಜಿಪಂ ಕ್ಷೇತ್ರಗಳ ವ್ಯಾಪ್ತಿಯ ಬಹುತೇಕ ಜನರು ನೀರಿನ ಬೇಡಿಕೆ ಇಟ್ಟರೆ. ಆಡಕಿ, ಮಳಖೇಡದಲ್ಲಿ ಸ್ಥಳೀಯ ಮುಖಂಡರ ವಿರುದ್ಧ ಮುನಿಸು ತೋರಿಕೆಯಾಗುತ್ತಿವೆ.
ಇವು ಕಾಂಗ್ರೆಸ್ ಅಭ್ಯರ್ಥಿ ಡಾ| ಶರಣಪ್ರಕಾಶ ಪಾಟೀಲ ಎದುರಿಸುತ್ತಿರುವ ಮತಸಂಕಟಗಳಾದರೆ, ಬಿಜೆಪಿ ಅಧಿಕಾರದಲ್ಲಿ ಇರದೇ ಇದ್ದರೂ ಸಹ, ಕಾಂಗ್ರೆಸ್ ನಿಂದ ಆಗಿರುವ ಲೋಪದೋಷ ಸರಿಪಡಿಸಿದರೆ ಮತ ನೀಡುವುದಾಗಿ ಶರತ್ತನ್ನು ಮತದಾರ ವಿಧಿಸುತ್ತಿದ್ದಾನೆ.
ಒಟ್ಟಾರೆಯಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೂ ಸಹ, ಜೆಡಿಎಸ್ ನಿಂದ ಸ್ಪರ್ಧಿಸಿರುವ ಹೊಸಮುಖ ಸುನೀತಾ ತಳವಾರ ತಾವೇನೂ ಕಮ್ಮಿ ಇಲ್ಲ ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ.
ಲಂಬಾಣಿಗರ ಹೆಸರಲ್ಲಿ ರಾಜಕೀಯ: ಸೇಡಂ ತಾಲೂಕು ವ್ಯಾಪ್ತಿಯಲ್ಲಿ 119 ಹಳ್ಳಿಗಳಿದ್ದು, ಅದರಲ್ಲಿ 45 ತಾಂಡಾಗಳಿವೆ, ಇವುಗಳ ಪೈಕಿ 10 ಕಂದಾಯ ಗ್ರಾಮಗಳಾಗಿಸಲು ಅನುಮೋದನೆಗೆ ಕಳುಹಿಸಲಾಗಿದೆ. ಬಹುತೇಕ ತಾಂಡಾಗಳಲ್ಲಿ ಮಾಜಿ ಸಚಿವ ರೇವುನಾಯಕ ಬೆಳಮಗಿ ಅವರ ಹೆಸರನ್ನು ಹೇಳಿ ಕಾಂಗ್ರೆಸ್ ಮತಯಾಚಿಸುತ್ತಿದೆ. ಮಾಜಿ ಸಚಿವರಿದ್ದರೂ ಸಹ ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನೀಡದೆ ಮೋಸ ಮಾಡಿದೆ. ಅವರ ಸ್ಥಾನವನ್ನು ಅಕ್ರಮದಲ್ಲಿ ತೊಡಗಿರುವವರಿಗೆ ನೀಡಿದೆ ಎಂದು ಆರೋಪಿಸಿ, ಲಂಬಾಣಿಗರನ್ನು ಸೆಳೆಯುವ ಯತ್ನ ಮಾಡುತ್ತಿದೆ. ಇತ್ತ ಬಿಜೆಪಿ ಲಂಬಾಣಿ ಜನರನ್ನು ಓಲೈಸುವಲ್ಲಿ ಮಗ್ನವಾಗಿದೆ.
ನಿಮ್ ರೋಡ್ ಬ್ಯಾಡಾ, ನಾಲಿ ಬ್ಯಾಡಾ. ನಿಮ್ ರೊಕ್ಕ ಬ್ಯಾಡಾ. ತಿಂಗಳಗಟ್ಟಲೆ ನೀರ್ ಇಲ್ದ ಸಾಯ್ಲಕತ್ತೀವಿ. ಗುಡ್ಡ ಏರಿ, ಇಳುª ಕುಡಿಲಾಕ್ ನೀರ್ ತರಾಕತ್ತೀವಿ. ಮೊದ್ಲು ಕುಡಿಲಾಕ್ ನೀರು ಕೊಡ್ರಿ ಆಮ್ಯಾಲ್ ಮತ ಕೇಳಿರಿ.
ಸೀತಾಬಾಯಿ, ಕೋಲಕುಂದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.